ಶಿಮ್ಲಾ: ಹಿಮಾಚಲ ಪ್ರದೇಶ ಸರ್ಕಾರವು ಲಾಕ್ ಡೌನ್ ನಿಯಮಗಳನ್ನು ತುಸು ಸಡಿಲ ಮಾಡುತ್ತಿದ್ದಂತೆ ಪ್ರವಾಸಿಗರ ದಂಡೇ ದೌಡಾಯಿಸಿದೆ. ಪ್ರಸಿದ್ದ ತಾಣ ಶಿಮ್ಲಾಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಅಂತರ್ ರಾಜ್ಯ ಚೆಕ್ ಪೋಸ್ಟ್ ಪರ್ವಾನೋದಲ್ಲಿ ಭಾರೀ ಸಂಖ್ಯೆಯ ವಾಹನಗಳು ಸಾಲುಗಟ್ಟಿ ನಿಂತಿದೆ. ಪೊಲೀಸರು ಪ್ರತಿಯೊಂದು ವಾಹನದ ತಪಾಸಣೆ ಮಾಡುತ್ತಿದ್ದು, ಇತರ ರಾಜ್ಯಗಳಿಂದ ಬಂದವರಿಗೆ ಕೋವಿಡ್ ಇ ಪಾಸ್ ಕಡ್ಡಾಯವಾಗಿದೆ.
ಇದನ್ನೂ ಓದಿ:12 ವರ್ಷಗಳ ನೆತನ್ಯಾಹು ಅಧಿಕಾರ ಅಂತ್ಯ:ಇಸ್ರೇಲ್ ನಲ್ಲಿ 8 ಪಕ್ಷಗಳ ಮೈತ್ರಿಸರ್ಕಾರ ಅಧಿಕಾರಕ್ಕೆ
ಉತ್ತರ ಭಾರತದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿರುವ ಕಾರಣ ಶಿಮ್ಲಾದ ಬೆಟ್ಟಗಳಲ್ಲಿ ಕಾಲ ಕಳೆಯಲು ಜನರು ಆಗಮಿಸುತ್ತಿದ್ದಾರೆ.
ಕಳೆದ ಶುಕ್ರವಾರ ಹಿಮಾಚಲ ಪ್ರದೇಶ ಸರ್ಕಾರವು ನಿಯಮಗಳನ್ನು ಮತ್ತಷ್ಟು ಸಡಿಲಿಸಿ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಇದರನ್ವಯ ರಾಜ್ಯದಲ್ಲಿ ಸೆ.144 ತೆರವು ಮಾಡಿದ್ದು, ರಾಜ್ಯ ಪ್ರವೇಶಿಸಲು ಕೋವಿಡ್ ಪರೀಕ್ಷೆ ಕಡ್ಡಾಯ ನಿಯಮವನ್ನು ತೆರವು ಮಾಡಿತ್ತು. ಇದರಿಂದಾಗಿ ಅನ್ಯ ರಾಜ್ಯಗಳಿಂದ ಪ್ರವಾಸಿಗರು ಹಿಮಾಚಲ ಪ್ರದೇಶದತ್ತ ದೌಡಾಯಿಸುತ್ತಿದ್ದಾರೆ.
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಶನಿವಾರ 237 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಸದ್ಯ ಆ ರಾಜ್ಯದಲ್ಲಿ 4777 ಸಕ್ರಿಯ ಪ್ರಕರಣಗಳಿವೆ