Advertisement
ಭಾನುವಾರ ಜಲಪಾತ ವೀಕ್ಷಣೆಗೆ ಪ್ರಕೃತಿಯೂ ಸಾಥ್ ನೀಡಿದ್ದು, ಇಡೀ ದಿನ ಬಿಸಿಲಿನ ವಾತಾವರಣವಿತ್ತು. ಹೀಗಾಗಿ ಪ್ರವಾಸಿಗರಿಗೆ ಜಲಪಾತದ ಭವ್ಯ ದರ್ಶನವಾಯಿತು. ಮುಖ್ಯವಾಗಿ ಖಾಸಗಿ ಕಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜೋಗದತ್ತ ಪಯಣಿಸಿದ್ದರಿಂದ ಸಾಗರ-ಜೋಗದ ನಡುವೆ ಕಾರುಗಳ ರ್ಯಾಲಿ ನಡೆಯುತ್ತಿದೆಯೇನೋ ಎಂಬ ದೃಶ್ಯ ಕಂಡುಬಂದಿತು. ಸಂಜೆ 6.30ರ ವೇಳೆಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ಶುಲ್ಕ ಸಂಗ್ರಹ 1.95 ಲಕ್ಷ ರೂ. ದಾಟಿತ್ತು. ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಹೆಚ್ಚಿದ್ದರಿಂದ ಮೈಸೂರು ಬಂಗ್ಲೋ ಭಾಗದಲ್ಲಿ ಪ್ರವಾಸಿ ವಾಹನಗಳು ತುಂಬಿ ತುಳುಕಿದವು. ವಿಶೇಷವಾಗಿ ಒಂದರ ಬದಲು ಮೂರು ಟಿಕೆಟ್ ಕೌಂಟರ್ ಸ್ಥಾಪಿಸಲಾಗಿದ್ದರೂ ಜಾತ್ರೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಕ್ಯೂ ನಿಂತ ಸ್ಥಿತಿ ನಿರ್ಮಾಣವಾಗಿತ್ತು. ಮುಕ್ಕಾಲು ಗಂಟೆ ಕ್ಯೂನಲ್ಲಿ ನಿಂತ ನಂತರವೇ ಜಲಪಾತ ದರ್ಶನಕ್ಕೆ ಪ್ರವೇಶ ಸಿಗುತ್ತಿತ್ತು. ಪ್ರವೇಶಕ್ಕೆ ಮಾಸ್ಕ್ ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಐದಾರು ಜನ ಮಾಸ್ಕ್ ಮಾರಾಟಗಾರರು ಎರಡು ಸಾವಿರಕ್ಕೂ ಹೆಚ್ಚು ಮಾಸ್ಕ್ ಮಾರಿದರು ಎಂದು ಅಲ್ಲಿನ ವರ್ತಕರೊಬ್ಬರು ತಿಳಿಸಿದರು. Advertisement
ಜೋಗದಲ್ಲಿ ಪ್ರವಾಸಿಗರ ದಂಡು
05:29 PM Aug 24, 2020 | Suhan S |
Advertisement
Udayavani is now on Telegram. Click here to join our channel and stay updated with the latest news.