ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರ ಹುಚ್ಚು ಮೋಜು-ಮಸ್ತಿ ಮುಂದುವರೆದಿದ್ದು, ಜಲಪಾತಗಳ ಬಳಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಪ್ರವಾಸಿಗರು ಡ್ಯಾನ್ಸ್ ಮಾಡಿರುವ ಘಟನೆ ನಡೆಯುತ್ತಿದೆ.
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ-ಕೇಳೋರಿಲ್ಲ ಎಂಬಂತಾಗಿದ್ದು, ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಪ್ರವಾಸಿಗರು ಮುಂದಾಗಿದ್ದಾರೆ.
ದಟ್ಟ ಮಂಜು ಕವಿದಂತೆ ಇರುವ ಈ ದಾರಿಯಲ್ಲಿ ಪ್ರವಾಸಿಗರು ವಾಹನ ಪಾರ್ಕಿಂಗ್ ಮಾಡುವುದಲ್ಲದೇ ರಸ್ತೆ ಸಮೀಪದ ಜಲಪಾತಗಳ ಮುಂದೆ ಕುಣಿಯುವ ಭರದಲ್ಲಿ ಪ್ರವಾಸಿಗರು ವಾಹನಗಳಿಗೂ ಅಡ್ಡ ಬರುತ್ತಿರುವ ಘಟನೆಗಳು ನಡೆಯುತ್ತವೆ. ಈ ರಸ್ತೆಗಳಲ್ಲಿ ಪ್ರವಾಸಿಗರು ಅಪಘಾತ, ಟ್ರಾಫಿಕ್ ಜಾಮ್ ಗೂ ಆಹ್ವಾನ ನೀಡುತ್ತಿರುವಂತೆ ಇವೆ.
ಕಿರಿದಾದ ಹಾವು ಬಳುಕಿನ ಮೈಕಟ್ಟಿನಂತಿರುವ ರಸ್ತೆಯಲ್ಲಿ ಹುಚ್ಚಾಟ ನಡೆಸಿತ್ತಿರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಜಲಪಾತಗಳ ಬಳಿ ಪೊಲೀಸರ ಬೀಟ್ ಹಾಕುವಂತೆ ಸ್ಥಳಿಯರ ಮನವಿ ಮಾಡಿಕೊಂಡಿದ್ದಾರೆ.