Advertisement

ರಾಜ್ಯದಲ್ಲೂ  ಪ್ರವಾಸಿ ಥೀಮ್‌ಪಾರ್ಕ್‌

01:03 AM Jul 02, 2021 | Team Udayavani |

ಬೆಂಗಳೂರು: ಒಡಿಶಾದ ಕೊನಾರ್ಕ್‌ ಸೂರ್ಯ ದೇಗುಲದಲ್ಲಿ ಇರುವ ಥೀಮ್‌ ಪಾರ್ಕ್‌ ಮಾದರಿಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ತಾಣಗಳಲ್ಲಿ ಥೀಮ್‌ ಪಾರ್ಕ್‌ ಸ್ಥಾಪಿಸುವ ಇರಾದೆ ರಾಜ್ಯ ಸರಕಾರಕ್ಕೆ ಇದೆ.

Advertisement

ಮೊದಲ ಹಂತದಲ್ಲಿ ಹಂಪಿಯ 200 ಎಕರೆ ಪ್ರದೇಶ ದಲ್ಲಿ ಥೀಮ್‌ ಪಾರ್ಕ್‌ ಸ್ಥಾಪನೆಯಾಗಲಿದೆ. ಅದರಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಕುರಿತು ಡಿಜಿಟಲ್‌ ಸ್ಪರ್ಶದೊಂದಿಗೆ ಕಿರುಚಿತ್ರ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಸಮೀಪದಲ್ಲೇ ಆಂಜನೇಯನ ಜನ್ಮಸ್ಥಳ ಎಂದು ಪ್ರತೀತಿ ಇರುವ ಅಂಜನಾದ್ರಿ ಬೆಟ್ಟವೂ ಇರುವುದರಿಂದ ಸುತ್ತಮುತ್ತಲ 100 ಕಿ.ಮೀ. ವ್ಯಾಪ್ತಿಯ ತಾಣಗಳನ್ನು ಸೇರಿಸಿ ಒಂದು ಪ್ರವಾಸಿ ಕಾರಿಡಾರ್‌ ಆಗಿ ಅಭಿವೃದ್ಧಿಪಡಿಸಿ ಪ್ಯಾಕೇಜ್‌ ರೂಪದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಮಾಲೋಚನೆ ನಡೆದಿದೆ.

ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಸಾಮ್ರಾಜ್ಯಗಳ ಬಗ್ಗೆ ಕಿರುಚಿತ್ರ ತಯಾರಿಸಿ ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ “ದರ್ಶನ’ ಮಾಡಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.

ಏನೇನು ಇರಲಿದೆ? :

  • ವಿಜಯನಗರ ಸಾಮ್ರಾಜ್ಯ ಕುರಿತು ಕಿರುಚಿತ್ರ
  • ಧ್ವನಿ- ಬೆಳಕು ವ್ಯವಸ್ಥೆ
  • 1,000 ವಿದ್ಯಾರ್ಥಿಗಳು, ಪ್ರವಾಸಿಗರಿಗೆ ವಸತಿ
  • 100 ಕಿ.ಮೀ. ವ್ಯಾಪ್ತಿಯ ಪ್ರವಾಸಿ ಕಾರಿಡಾರ್‌
  • 500 ಕೋ.ರೂ.: ವೆಚ್ಚವಾಗಲಿರುವ ಮೊತ್ತ
  • 200 ಎಕರೆ: ಹಂಪಿ ಥೀಮ್‌ ಪಾರ್ಕ್‌ನ ವ್ಯಾಪ್ತಿ

ಲಾಕ್‌ಡೌನ್‌ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು ವಿದೇಶಿ ಮತ್ತು ದೇಶೀಯ ಪ್ರವಾಸಿಗರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಇಲಾಖೆ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದೆ.  – ಸಿ.ಪಿ.ಯೋಗೇಶ್ವರ್‌, ಪ್ರವಾಸೋದ್ಯಮ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next