Advertisement
ಪ್ರವಾಸಿ ತಾಣಗಳ ನಿರ್ಬಂಧ ತೆರವು: ಜಿಲ್ಲೆಯ ಪ್ರವಾಸಿ ತಾಣಗಳಾದ ರಾಮನಗರದ ಶ್ರೀ ರಾಮ ದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣದ ಕಣ್ವ ಡ್ಯಾಂ, ಮಾಗಡಿಯ ಮಂಚನಬೆಲೆ ಡ್ಯಾಂ, ಸಾವನದುರ್ಗ, ಕನಕಪುರ ತಾಲೂಕಿನ ಸಂಗಮ,ಮೇಕೆದಾಟು, ಚುಂಚಿ ಜಲಪಾತ ಈ ತಾಣಗಳಲ್ಲಿ ಜಿಲ್ಲಾಡಳಿತ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ ಸರ್ಕಾರ ವೀಕ್‌ಎಂಡ್ ಕರ್ಫ್ಯೂ ಹಿಂಪಡೆದ ಕಾರಣ ಡೀಸಿ ಡಾ.ರಾಕೇಶ್ ಕುಮಾರ್ ನಿಷೇಧಾಜ್ಞೆ ಹಿಂಪಡೆದಿದರು.
Related Articles
Advertisement
ಮೀನೂಟಕ್ಕೆ ಮುಗಿಬಿದ್ದ ಪ್ರವಾಸಿಗರು: ಮಾಗಡಿ ತಾಲೂಕಿನಲ್ಲಿ ಪ್ರವಾಸಿಗರ ಮತ್ತೂಂದು ನೆಚ್ಚಿನ ತಾಣ ಮಂಚನಬೆಲೆ. ಇಲ್ಲಿ ಮೀನು ಖಾದ್ಯಗಳಿಗೆ ಪ್ರವಾಸಿಗರು ಮುಗಿ ಬೀಳುವುದು ಸಹಜ. ಭಾನುವಾರವೂಸಹ ಮೀನು ಖಾದ್ಯಗಳಿಗೆ ಪ್ರವಾಸಿಗರುಮುಗಿ ಬಿದ್ದಿದ್ದರು ಎಂದು ಕೆಲವು ಪ್ರವಾಸಿಗರು ತಿಳಿಸಿದ್ದಾರೆ.
ಶ್ರೀ ರಾಮದೇವರ ಬೆಟ್ಟದಲ್ಲೂ ಖಾಲಿ-ಖಾಲಿ: ರಾಮನಗರ ಬಳಿಯ ಶ್ರೀ ರಾಮ ದೇವರ ಬೆಟ್ಟ ಕೂಡ ಬೆಂಗಳೂರುನಗರ ನಿವಾಸಿಗಳಿಗೆ ನೆಚ್ಚಿನ ತಾಣ. ವಿಶೇಷವಾಗಿ ಯುವಕ-ಯುವತಿಯರಿಗೆ ಹರಟೆಯ ಸ್ಥಳ. ಇಲ್ಲಿರುವ ಬಂಡೆಗಳನ್ನು ಹತ್ತು ಇಳಿಯುವುದು, ಒನಕಂಬಿ ಎಂಬ ಎತ್ತರದಸ್ಥಳಕ್ಕೆ ಹೋಗಿ ಬರುವುದೇ ರೋಚಕ. ಯುವಸಮುದಾಯಕ್ಕೆ ಕಲ್ಲು-ಬಂಡೆಗಳ ಸೆಳೆತ.
ಸ್ಥಳೀಯರು ಇಲ್ಲಿ ನೆಲಸಿರುವ ಶ್ರೀರಾಮನದರ್ಶನಕ್ಕೆ ಧಾವಿಸುವುದುಂಟು. ನಿರ್ಬಂಧಗಳ ತೆರವಿನ ಪ್ರಥಮ ವಾರ ಇಲ್ಲಿಯೂ ನಿರೀಕ್ಷಿಸಿದಷ್ಟು ಜನ ಕಂಡು ಬರಲಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಗಾಗಿ ತೆರೆದಿರುವ ವಿಚಾರ ಈಗಷ್ಟೆ ಜನಸಮುದಾಯಕ್ಕೆ ಗೊತ್ತಾಗಿದ್ದು, ಬಹುಶಃ ಮುಂದಿನವಾರದಿಂದ ಇಲ್ಲಿ ಜನ ಎಂದಿನಂತೆ ಬರಬಹುದು ಎಂದು ಪ್ರವಾಸಿ ತಾಣಗಳಲ್ಲಿನ ಸಿಬ್ಬಂದಿ ಹೇಳಿದ್ದಾರೆ.
ನಿಯಮ ಪಾಲಿಸದ ಜನ! ಜಿಲ್ಲೆಯಲ್ಲಿ ಜನರಿಗಾಗಿ ತೆರೆದುಕೊಂಡಿರುವ ಪ್ರವಾಸಿ ತಾಣಗಳತ್ತ ಎಂದಿನ ಪ್ರಮಾಣದ ಜನ ಸಂಖ್ಯೆ ಮುಖಮಾಡಲಿಲ್ಲ. ಆದರೆ ಶನಿವಾರ ಮತ್ತು ಭಾನುವಾರ ಭೇಟಿ ಕೊಟ್ಟಿದ್ದ ಪ್ರವಾಸಿಗರ ಪೈಕಿ ಬಹಳಷ್ಟು ಮಂದಿ ಕೋವಿಡ್ ನಿಯಮ ಪಾಲಿಸಲಿಲ್ಲ. ಕೆಲವರು ಮಾಸ್ಕ್ ಧರಿಸಿರಲೇಇಲ್ಲ. ಬೆರಳಣಿಕೆಯಷ್ಟು ಮಂದಿ ಮಾತ್ರಮಾಸ್ಕ್ ಸರಿಯಗಿ ಧರಿಸಿದ್ದರು. ಈ ವಿಚಾರಗಳನ್ನು ಕಂಡ ಪ್ರವಾಸಿ ಮಿತ್ರರು ಮತ್ತು ಪೊಲೀಸರು ಕೇವಲ ಎಚ್ಚರಿಕೆ ನೀಡಿದರೆ ವಿನಃ ಕಾನೂನು ಕ್ರಮ ಕೈಗೊಳ್ಳಲಿಲ್ಲ.