Advertisement

ಗೋವಾದ ಪೋಲಿಸ್ ಮಹಾನಿರ್ದೇಶಕರಾಗಿ ಇಂದ್ರದೇವ್ ಶುಕ್ಲಾ ಅಧಿಕಾರ ಸ್ವೀಕಾರ

12:10 PM Nov 24, 2021 | Team Udayavani |

ಪಣಜಿ: ಮಹಿಳೆಯರು ಮತ್ತು ಪ್ರವಾಸಿಗರ ಸುರಕ್ಷತೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆದಾರರ ವಿರುದ್ಧ ಕಠಿಣ ಕ್ರಮ ಹಾಗೂ ಸೈಬರ್ ಅಪರಾಧ ಪತ್ತೆಗೆ ಅತ್ಯಾಧುನಿಕ ಉಪಕರಣಗಳ ಖರೀದಿಗೆ ಒತ್ತು ನೀಡುವುದಾಗಿ ಗೋವಾದ ನೂತನ ಪೋಲಿಸ್ ಮಹಾನಿರ್ದೇಶಕ ಇಂದ್ರದೇವ್ ಶುಕ್ಲಾ ಹೇಳಿದ್ದಾರೆ.

Advertisement

ಗೋವಾದ ಪೋಲಿಸ್ ಮಹಾನಿರ್ದೇಶಕರಾಗಿ ಬುಧವಾರ ಅಧಿಕಾರ ಸ್ವೀಕರಿಸಿ ಪಣಜಿ ಪೋಲಿಸ್ ಮುಖ್ಯಾಲಯದಲ್ಲಿ ಮಾತನಾಡಿದ ಅವರು- ಗೋವಾ ನನಗೆ ಹೊಸತೇನಲ್ಲ ಎಂದ ಅವರು, ಪೋಲಿಸ್ ತನಿಖೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವು ಮುಖ್ಯವಾಗಿದೆ. ಆದ್ದರಿಂದ ಈ ತಂತ್ರಜ್ಞಾನಗಳನ್ನು ಇಲಾಖೆಗೆ ಲಭ್ಯವಾಗುವಂತೆ ಪ್ರಯತ್ನಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನವಿಲ್ಲದೆಯೇ ತನಿಖೆ ನಡೆಸುವುದು ಕಷ್ಟ. ಸೈಬರ್ ಅಪರಾಧ ತಡೆಗೆ ತಂತ್ರಜ್ಞಾನ ಬಹುಮುಖ್ಯವಾಗಿದೆ ಎಂದು ಪೋಲಿಸ್ ಮಹಾನಿರ್ದೇಶಕ ಇಂದ್ರದೇವ್ ಶುಕ್ಲಾ ನುಡಿದರು.

ಜನತೆ ನನ್ನನ್ನು ಭೇಟಿಯಾಗಲು ಮತ್ತು ಚರ್ಚಿಸಲು ಪೋಲಿಸ್ ಪ್ರಧಾನ ಕಛೇರಿಯಲ್ಲಿರುವ ನಮ್ಮ ಕಛೇರಿಯ ಬಾಗಿಲು ಸದಾ ತೆರೆದಿರುತ್ತದೆ. ಸಲಹೆಗಳನ್ನು ನೀಡಲು ಜನತೆಗೆ ಸ್ವಾಗತವಿದೆ ಎಂದು ಇಂದ್ರದೇವ್ ಶುಕ್ಲಾ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next