Advertisement

ಸೌರಮಂಡಲದ ಪ್ರವಾಸಿ ತಾಣಗಳು!

08:40 PM Jul 17, 2019 | mahesh |

ಸೌರಮಂಡಲದ ಪ್ರವಾಸ ಹೋಗುವ ತಂತಜ್ಞಾನ ಮತ್ತು ವ್ಯವಸ್ಥೆ ಇಂದು ಇಲ್ಲದೇ ಇರಬಹುದು. ಆದರೆ ಈ ಕುರಿತು ಈಗಾಗಲೇ ಚಿಂತನೆಗಳು ನಡೆಯುತ್ತಿವೆ. ಮುಂದೊಂದು ದಿನ ಅಂತರಿಕ್ಷ ಪ್ರವಾಸ ಕೈಗೊಳ್ಳುವ ದಿನಗಳು ಬರುತ್ತವೆ. ಆಗ, ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಗೊತ್ತಾ?

Advertisement

ಮಂಗಳನ ಮೇಲಿನ ಹಿಮಾಲಯ
ಭೂಮಿ ಮೇಲಿನ ಅತಿ ಎತ್ತರದ ಪರ್ವತ “ಹಿಮಾಲಯ’. ಅದನ್ನು ಏರುವುದು ಪ್ರತಿಯೊಬ್ಬ ಪರ್ವತಾರೋಹಿಯ ಕನಸು. ಆದರೆ ಹಿಮಾಲಯಕ್ಕಿಂತ ಮೂರುಪಟ್ಟು ಎತ್ತರದ ಪರ್ವತ ಮಂಗಳ ಗ್ರಹದಲ್ಲಿದೆ. ಅದರ ಹೆಸರು “ಒಲಿಂಪಸ್‌ ಮಾನ್ಸ್‌’.

ಐಸ್‌ ಗುಂಡಿಗಳು
ನಮ್ಮಲ್ಲಿ ಪ್ರವಾಸ ಹೋಗುವಾಗ ತಣ್ಣಗಿನ ವಾತಾವರಣವಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗಾಗಿ ಶಿಮ್ಲಾ, ಊಟಿ, ಕೊಡಕೈನಲ್‌ನಂಥ ಪರ್ವತ ಪ್ರಾಂತ್ಯಗಳನ್ನು ಆರಿಸಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಸೌರಮಂಡಲದಲ್ಲಿ ತಣ್ಣಗಿನ ಪ್ರದೇಶವನ್ನು ಹುಡುಕುವುದಾದರೆ ಮಕ್ಯುìರಿ ಗ್ರಹ ಕಣ್ಣಿಗೆ ಬೀಳುತ್ತದೆ. ಇಲ್ಲಿ ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಹಿಡಿದಿಟ್ಟ ಕುಳಿಗಳನ್ನು ಕಾಣಬಹುದಾಗಿದೆ.

ದಾರಿಯಲ್ಲಿ ಸಿಕ್ಕ ಐಡಾ
1993ರಲ್ಲಿ ಜುಪೀಟರ್‌ನ ಅಧ್ಯಯನ ನಡೆಸಲು ಹಾರಿಬಿಟ್ಟ ಗೆಲಿಲಿಯೋ ಉಪಗ್ರಹ ಅಂತರಿಕ್ಷದಲ್ಲಿ ಗ್ರಹದತ್ತ ಹೋಗುವಾಗ ದಾರಿಯಲ್ಲಿ ಕ್ಷುದ್ರ ಗ್ರಹವೊಂದು ಎದುರಾಗಿತ್ತು. ಅದನ್ನು ಐಡಾ ಎಂದು ನಾಮಕರಣ ಮಾಡಲಾಯಿತು. ವಿಜ್ಞಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಕ್ಷುದ್ರಗ್ರಹಕ್ಕೂ ಚಂದ್ರನಿರುತ್ತಾನೆ ಎಂಬ ಸಂಗತಿ ಐಡಾದಿಂದ ತಿಳಿದುಬಂದಿತ್ತು. ಅದನ್ನು ಸುತ್ತುತ್ತಿದ್ದ ಚಂದ್ರನನ್ನು ಡ್ಯಾಕ್ಟೆ„ಲ್‌ ಎಂದು ಕರೆದರು. ಈ ಕ್ಷುದ್ರ ಗ್ರಹ ಎಷ್ಟು ವರ್ಷ ಹಳೆಯದೆಂದು ಇಂದಿಗೂ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಚಂದ್ರವನ್ನು ಹೊಂದಿದ ಈ ಕ್ಷುದ್ರ ಗ್ರಹ ಅಚ್ಚರಿಯ ಕಣಜ!

ಶುಕ್ರನ ಮೋಡ ನೋಡಾ
ಶುಕ್ರ ಗ್ರಹ, ಮಂಗಳ ಗ್ರಹದಂತೆಯೇ ಎಂದಿನಿಂದಲೂ ಮನುಷ್ಯನ ಕುತೂಹಲವನ್ನು ಕೆರಳಿಸಿದೆ. ಅದಕ್ಕೆ ಕಾರಣ ಗ್ರಹದ 30 ಮೈಲಿಗಳ ಎತ್ತರದಲ್ಲಿ ಭೂಮಿಯಲ್ಲಿರುವಂಥ ಮೋಡದ ವಾತಾವರಣ ಇರುವುದು. ಆ ಪರಿಸ್ಥಿತಿಯಲ್ಲಿ ಜೀವ ವಿಕಾಸ ಹೊಂದಿರುವ ಜೀವಿಗಳು ಭೂಮಿ ಮೇಲಿರುವುದರಿಂದ, ಅಲ್ಲಿಯೂ ಜೀವ ವಿಕಾಸ ಹೊಂದಿರಬಹುದು ಎಂಬ ಅಭಿಪ್ರಾಯ ಅನೇಕರದು.

Advertisement

ಶನಿಯ ಬೃಹತ್‌ ಉಂಗುರ
ಉಂಗುರವನ್ನು ಧರಿಸಿದಂತೆ ತೋರುವ ಶನಿ ಗ್ರಹಕ್ಕೆ ಭೇಟಿ ನೀಡದೆ ಇರಲು ಹೇಗೆ ಸಾಧ್ಯ. ಜುಪೀಟರ್‌, ಯುರೇನಸ್‌ ಮತ್ತು ನೆಪೂcನ್‌ ಗ್ರಹಗಳಿಗೂ ಉಂಗುರವಿದ್ದರೂ ಅವ್ಯಾವುವೂ ಶನಿಯ ಉಂಗುರದಷ್ಟೂ ಆಕರ್ಷಕವಾಗಿಲ್ಲ. ದೂರದಿಂದ ಉಂಗುರದಂತೆ ಕಾಣುವ ಈ ಪದರ ಮಂಜುಗಡ್ಡೆಯ ತುಣುಕುಗಳು, ಧೂಳಿನ ಕಣಗಳಿಂದ ಮಾಡಲ್ಪಟ್ಟಿವೆ. ಅದು ಸತತವಾಗಿ ಒಂದಕ್ಕೊಂದು ಬಡಿದು ಮತ್ತೆ ತುಣುಕುಗಳಾಗಿ ಸಿಡಿಯುತ್ತಲೇ ಇರುತ್ತವೆ.

ಕ್ಲಿಷ್ಟ ಗುಹಾರಚನೆಗಳ ಮಿರಾಂಡಾ
ಗುಹೆಗಳನ್ನು ಅನ್ವೇಷಿಸುವ ಮಂದಿಗೆ ಯುರೇನಸ್‌ನ ಚಂದ್ರ ಮಿರಾಂಡಾ ಸೂಕ್ತವಾದ ಜಾಗ. ಏಕೆಂದರೆ, ಯಂತ್ರಗಳಿಗೂ ಸವಾಲೆಸೆಯುವ ಗುಹಾರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಸಾಹಸ ಮನೋಭಾವದವರು ಇಲ್ಲೊಮ್ಮೆ ಭೇಟಿ ನೀಡಬಹುದು.

– ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next