Advertisement
ಇಂತಹ ಸ್ಥಳಗಳು ಸಾವಿರಾರು ಜನರ ಮನಸ್ಸನ್ನು ಸೆಳೆಯುತ್ತದೆ. ಪ್ರಕೃತಿ ಸೃಷ್ಟಿಯಾಗಿರುವ ನದಿ, ಹೊಳೆ, ಜಲಪಾತಗಳು ನಮಗೆ ನೋಡಲು ಸಿಕ್ಕಂತ ವರವಾಗಿದೆ. ಆ ನೀರಿನ ರಭಸ, ಗಂಭೀರವಾದ ಸದ್ದು, ಹಾಲ್ನೊರೆಯಂತಹ ಬಣ್ಣ ಆಹಾ! ಭೂಮಿಯ ಮೇಲಿನ ಸ್ವರ್ಗ ವೀಕ್ಷಣೆಯೆಂದರೆ ತಪ್ಪಾಗಲ್ಲ.
Related Articles
Advertisement
ಒಂದು ರೀತಿಯಾಗಿ ನೋಡಿದರೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯೇ ಮೇಲ್ನೋಟಕ್ಕೆ ಕಾರಣವೆನ್ನಬಹುದು. ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಇತರ ಜನರಿಗೆ ತಲುಪಿಸುತ್ತಾರೆ. ಸ್ಥಳದ ಶ್ರೇಷ್ಠತೆಯನ್ನು ಹೆಚ್ಚಿಸುತ್ತಾರೆ. ಅದನ್ನು ನೋಡಿ ಬರುವ ಮಾನವರು ನೋಡುವ ಬದಲಿಗೆ ಮಾಲಿನ್ಯ ಮಾಡುವುದೇ ಹೆಚ್ಚು. ಒಟ್ಟಾರೆಯಾಗಿ ಈ ಸುಂದರ ಪ್ರಕೃತಿಯ ವರವಾದ ಇಂಥ ಸ್ಥಳಗಳನ್ನು ಸ್ವಾರ್ಥಿಯಾದ ಮಾನವ ನಾಶಮಾಡುತ್ತಿದ್ದಾನೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಪ್ರವಾಸಿ ತಾಣಗಳು ನೋಡಲು ಸಿಗುವುದೇ ಕಷ್ಟಕರವಾಗಬಹುದು. ಮಾನವರಿಗೆ ಇಂಥ ಕೃತ್ಯಗಳನ್ನು ಮಾಡಬಾರದೆಂಬ ಮನವರಿಕೆ ಮೂಡಬೇಕಾಗಿದೆ. ತಮ್ಮಂತೆ ಇತರ ಜಲಚರಗಳಿಗೆ ಬದುಕುವ ಅರ್ಹತೆ ಇದೆ ಎಂಬ ಸತ್ಯ ಮನವರಿಕೆಗೆಯಾಗಬೇಕು. ನಮ್ಮೀ ಪ್ರಕೃತಿಯ ಸೌಂದರ್ಯ ಕಾಪಾಡಲು ಮಾನವರೇ ಮುಂದಾಗಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮದ್ದಾಗಿದೆ. ಹಾಗಾಗಿ ಇನ್ನಾದರೂ ಪ್ರವಾಸಿ ತಾಣಗಳನ್ನು ಶುಚಿಯಿಂದಿರಿಸಿ.
-ತೃಪ್ತಿ ಗುಡಿಗಾರ್
ಎಂ. ಪಿ. ಎಂ. ಕಾಲೇಜು
ಕಾರ್ಕಳ