Advertisement
ಈ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿ ಸಲಾಗಿತ್ತು. ಆದ್ಯತೆ ಮೇಲೆ ಈ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಬುಧವಾರದಿಂದಲೇ ನಂದಿಗಿರಿಧಾಮವು ಸಾರ್ವಜನಿಕರು, ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾ ಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಗಿರಿಧಾಮದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ವಾರಾಂತ್ಯದ ಶನಿವಾರ, ಭಾನುವಾರದಂದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
Related Articles
Advertisement
ವಾಹನಗಳಿಗೆ ಮಿತಿ: ಗಿರಿಧಾಮಕ್ಕೆ ಬರುವ ವಾಹನಗಳ ಸಂಖ್ಯೆಗೆ ಮಿತಿ ಹೇರಲಾಗಿದೆ. ಗಿರಿಧಾಮದ ವಾಹನ ನಿಲುಗಡೆ ಪ್ರದೇಶದಲ್ಲಿನ ಸ್ಥಳಾವಕಾಶಕ್ಕೆ ಅನುಗುಣವಾಗಿ 350 ನಾಲ್ಕು ಚಕ್ರ, 1500 ದ್ವಿಚಕ್ರ ವಾಹನವನ್ನು ಗಿರಿಧಾಮದ ಕೆಳಭಾಗದಲ್ಲಿರುವ ಮುಖ್ಯ ಪ್ರವೇಶದ್ವಾರದಲ್ಲಿಯೇ ತಪಾಸಣೆ ನಡೆಸಿ, ಪಾಸ್ ಹೊಂದಿರುವವರಿಗೆ ಮಾತ್ರ ಬಿಡಲಾಗುವುದು. ಗಿರಿಧಾಮದ ಪ್ರವೇಶ ಬಯಸುವವರು ಪಾಸ್‌ಗಳನ್ನು ಹೊಂದುವುದು ಕಡ್ಡಾಯವಾಗಿದೆ. ಪಾಸ್ ವಿತರಿಸಲು ಆನ್‌ಲೈನ್, ಆಫ್‌ಲೈನ್ ಎರಡೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಾರ್ಗಸೂಚಿ ಉಲ್ಲಂಘಿಸಿದ್ರೆ ದಂಡ: ಎಸ್ಪಿ ಜಿ. ಕೆ.ಮಿಥುನ್‌ಕುಮಾರ್ ಮಾತನಾಡಿ, ಈ ಹಿಂದೆ ನಂದಿಗಿರಿಧಾಮದಲ್ಲಿ ಜಾರಿಯಲ್ಲಿದ್ದ ಪೊಲೀಸ್ ಗಸ್ತನ್ನು ಬುಧವಾರದಿಂದ ಮುಂದುವರಿಸ ಲಾಗುವುದು. ವಾರಾಂತ್ಯ ಸೇರಿ ಎಲ್ಲಾ ದಿನಗಳಲ್ಲಿಯೂ ನಂದಿಗಿರಿಧಾಮದಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದಂಡ ವಿ ಧಿಸಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೀತಿ ನಿಯಮ ಪಾಲಿಸಿ: ಗಿರಿಧಾಮದ ತಪ್ಪಲಿನ ಪ್ರವೇಶ ದ್ವಾರದಲ್ಲಿಯೂ ಈ ಹಿಂದಿನಂತೆ ವಾಹನಗಳ ತಪಾಸಣೆ ನಡೆಯಲಿದೆ. ಗಿರಿಧಾಮದ ಪ್ರವೇಶಕ್ಕೆ ಸರ್ಕಾರ ನೀಡಿರುವ ಎಲ್ಲಾ ನೀತಿ ನಿಯಮಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ಎಂದು ತಿಳಿಸಿದರು. ತಹಶೀಲ್ದಾರ್ ಗಣಪತಿಶಾಸ್ತ್ರಿ, ಪಿಡಬ್ಲೂéಡಿ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್, ವಿವಿಧ ಇಲಾಖೆ ಅ ಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.