Advertisement
ದಾಂಡೇಲಿಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಕವಳಾ ಗುಹೆ ದಟ್ಟ ಅರಣ್ಯದ ಮಧ್ಯೆ ಇರುವ ಬೆಟ್ಟದ ಮೇಲಿದ್ದು ಇಲ್ಲಿಗೆ ತಲುಪಬೇಕಾದರೆ ಸುಮಾರು ಮೂನ್ನೂರ ಐವತ್ತಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಲೇ ಬೇಕು ಆ ಬಳಿಕ ಗುಹೆಯ ಪ್ರವೇಶ ದ್ವಾರ ಸಿಗುತ್ತದೆ ಅಲ್ಲಿಂದ ಮುಂದುವರೆದಂತೆ ಕಡಿದಾದ ದಾರಿಸಿಗುತ್ತದೆ ಅಲ್ಲಿಂದ ಮುಂದೆ ಪ್ರವೇಶಿಸಿದರೆ ಪ್ರಕೃತಿಯಿಂದಲೇ ನಿರ್ಮಾಣಗೊಂಡ ಐದು ಅಡಿ ಎತ್ತರದ ದುಂಡಾಕಾರದ ಶಿವಲಿಂಗ ಕಾಣಸಿಗುತ್ತದೆ ಈ ಶಿವಲಿಂಗದ ಮೇಲೆ ಬಂಡೆಕಲ್ಲುಗಳು ಆವರಿಸಿಕೊಂಡಿದ್ದು ಇದರಿಂದ ಚಿಮ್ಮುವ ನೀರಿನಿಂದಲೇ ಶಿವಲಿಂಗಕ್ಕೆ ನಿತ್ಯ ಅಭಿಷೇಕ.
Related Articles
ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಈ ಗುಹೆ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ ಅದಕ್ಕೆ ಪೂರಕವೆಂಬಂತೆ ಇಲ್ಲಿನ ಕಲ್ಲು ಬಂಡೆಗಳು ಜ್ವಾಲಾಮುಖಿ ಸ್ಪೋಟಗೊಂಡು ನಿರ್ಮಾಣವಾದಂತೆ ಭಾಸವಾಗುತ್ತದೆ.
Advertisement
ಅರಣ್ಯ ಇಲಾಖೆಯ ಅನುಮತಿ ಅಗತ್ಯ :ಕವಳಾ ಗುಹೆಗೆ ಶಿವರಾತ್ರಿ ದಿನ ಬಿಟ್ಟು ಉಳಿದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಅಲ್ಲದೆ ಪ್ರವಾಸಿಗರಿಗೆ ಗುಹೆ ಪ್ರವೇಶಿಸಲು ಪ್ರವೇಶ ಶುಲ್ಕ ಪಾವತಿಸಬೇಕು. ಮುಖ್ಯ ವಿಚಾರ ಏನೆಂದರೆ ಈ ಗುಹೆಗೆ ಭೇಟಿ ನೀಡಲು ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ಮಾತ್ರ ಅರಣ್ಯ ಇಲಾಖೆಯ ಅನುಮತಿ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸ್ವಚ್ಛತೆ ಕಾಪಾಡಿ :
ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು ನಾನು ಅಲ್ಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದು ನಮ್ಮ ಕರ್ತವ್ಯ ಹಾಗಾಗಿ ನಾವು ಕೊಂಡುಹೋದ ತಿಂಡಿ ತಿನಿಸುಗಳ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ ಜೊತೆಗೆ ಇತರರಿಗೂ ಈ ವಿಚಾರ ತಿಳಿಸಿ. ಎಚ್ಚರವೂ ಅಗತ್ಯ :
ಕವಳಾ ಗುಹೆ ಪ್ರದೇಶ ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಕಾಡು ಪ್ರಾಣಿಗಳು, ಹಾವುಗಳಂತ ವಿಷಕಾರಿ ಜೀವಿಗಳು ಇರುವ ಸಾಧ್ಯತೆ ಹೆಚ್ಚು ಅದೂ ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುವ ಕಾರಣ ಎಚ್ಚರ ಅಗತ್ಯ. ಮಾರ್ಗ ಹೇಗೆ :
ಕವಳಾ ಗುಹೆ ಪ್ರವೇಶಿಸಲು ಎರಡು ಮಾರ್ಗಗಳಿವೆ ಮೊದಲನೆಯದು ಜೋಯಿಡಾ ತಾಲೂಕಿನ ಪಣಸೋಲಿಯಿಂದ ದಟ್ಟ ಅರಣ್ಯದ ಮಧ್ಯೆ ಸಾಗುವ ದಾರಿಯಾದರೆ, ಎರಡನೆಯದು ಅಂಬಿಕಾನಗರದ ನಾಗಝರಿಯಿಂದ ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗುವ ಮಾರ್ಗವಾಗಿದೆ. ನೀವು ಮೂರು ನಾಲ್ಕು ದಿನಗಳ ಲೆಕ್ಕಾಚಾರದಲ್ಲಿ ದಾಂಡೇಲಿ ಪ್ರವಾಸ ಕೈಗೊಂಡರೆ ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿರುವ ಸ್ಕೈ ಪಾಯಿಂಟ್ ಮೂಲಕ ಕಾಳಿ ಕಣಿವೆಯ ರುದ್ರ ರಮಣೀಯ ನೋಟವನ್ನು ನೋಡಬಹುದಾಗಿದೆ. ಅಲ್ಲದೆ ರಿವರ್ ರಾಫ್ಟಿಂಗ್ ಗೂ ಕಾಳಿ ನದಿ ಹೆಸರುವಾಸಿ. ದಾಂಡೇಲಿ ಅಭಯಾರಣ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಅರಣ್ಯ ಇಲಾಖೆಯ ಅನುಮತಿ ಪಡೆದು ಎಲ್ಲ ಪ್ರದೇಶವನ್ನು ವೀಕ್ಷಿಸಬಹುದಾಗಿದೆ, ಇಲ್ಲಿ ಪ್ರವಾಸಿಗರಿಗೆ ಉಳಿಯಲು ಹೋಟೆಲ್, ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ. – ಸುಧೀರ್ ಆಚಾರ್ಯ