Advertisement
ಸಾವನದುರ್ಗ ನಿಸರ್ಗ ಪ್ರಿಯರ ಸ್ವರ್ಗವಾಗಿದೆ. ದುರ್ಗಮದ ಹಾದಿ ಮೈಮರೆತರೆ ಸಾವಿನ ದುರ್ಗವೂಹೌದು. ಮಾಗಡಿ ತಾಲೂಕಿನಲ್ಲಿಯೇ ಸುಪ್ರಸಿದ್ಧ ಪ್ರವಾಸಿತಾಣ ಎಂದೇ ಪ್ರಖ್ಯಾತಗೊಂಡಿದ್ದು, ಪ್ರಕೃತಿ ಮಡಿಲಲ್ಲಿರುವ ಸಾವನದುರ್ಗ ದಿನೇ ದಿನೆಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಾರಣಿಗರನ್ನುಮತ್ತು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.ಏಷ್ಯಾ ಖಂಡದಲ್ಲೇ ಅತಿ ಎತ್ತರದ ಬೃಹತ್ ಏಕಶಿಲಾಎರಡು ಬೆಟ್ಟಗಳಿವೆ. ಕರಿ ಮತ್ತು ಬಿಳಿ ಕಲ್ಲು ಬೆಟ್ಟವೆಂದೇಪ್ರಖ್ಯಾತಿಗೊಂಡಿದೆ. ಇಲ್ಲಿನ ಅವಶೇಷಗಳೇ ಕಥೆಹೇಳುತ್ತವೆ. ಈ ಸಾವನದುರ್ಗವನ್ನುವಶಪಡಿಸಿಕೊಳ್ಳಲು ಲಾರ್ಡ್ ಕಾರ್ನ್ ವಾಲಿಸ್‌ಪಟ್ಟಪಾಡನ್ನು ಕಣ್ಣಾರೆ ಕಂಡ ಕರ್ನಲ್ ವಿಲ್ಸ್‌ರೋಮಾಂಚಕಾರಿಯೂ ಮೈನವಿರೇಳಿಸುವಂತಹ ಈದುರ್ಗ ಎಚ್ಚರ ತಪ್ಪಿದರೆ ಸಾವಿನ ದುರ್ಗವೆಂದಿದ್ದರು.
Related Articles
Advertisement
ಚೆಕ್‌ಪೋಸ್ಟ್ ಇಲ್ಲ: ಪ್ರವಾಸಿಗರು ಅನುಮತಿ ಇಲ್ಲದೆ ಕಾಡಿನೊಳಗೆ ಪ್ರವೇಶ ನಿಷೇಧಿಸಿದೆ ಎಂಬ ನಿರ್ಬಂಧ ಹೇರಿದರೂ ಸಹ ಕಣ್ತಪ್ಪಿಸಿ ಕಾಡಿನೊಳಗೆ ಪ್ರವೇಶಿಸಿಮೋಜುಮಸ್ತಿ ಮಾಡುವವರೂ ಇದ್ದಾರೆ. ಇವೆಲ್ಲವನ್ನುತಪ್ಪಿಸಲೆಂದೇ ಪೊಲೀಸರು ಸಹ ಸಾವನದುರ್ಗದಲ್ಲಿಪೊಲೀಸರು ಚೆಕ್‌ಪೋಸ್ಟ್ ತೆರೆದು ಕೆಲದಿನಗಳ ಕಾಲಎರಡು ಪಾಳಿಯಲ್ಲಿ ಹಗಲುರಾತ್ರಿ ಕಾದರು. ಕೊನೆಗೆಸಿಬ್ಬಂದಿ ಕೊರತೆ ಎಂದು ಟೆಂಟ್ ಕಿತ್ತಿಕೊಂಡು ಖಾಲಿಮಾಡಿ ಬಂದಿದ್ದಾರೆ. ಅರಣ್ಯ ಕಾವಲುಗಾರರಿದ್ದಾರೆ. ಚೆಕ್ ಪೋಸ್ಟ್ ಇಲ್ಲದೆ ಕಾರಣ ಕಾವಲುಗಾರರೇ ಇಲ
ಬೆಟ್ಟದ ತಪ್ಪಲಿನಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ :
ಸಾವನದುರ್ಗದಲ್ಲಿ ಪ್ರಸಿದ್ಧವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ಸಾವಂದಿ ವೀರ ಭದ್ರಸ್ವಾಮಿ ದೇವಸ್ಥಾನ ಭಕ್ತರನ್ನ ಆಕರ್ಷಿಸಿದೆ. ಈ ದೇವಸ್ಥಾನಗಳು ಮುಜರಾಯಿ ಇಲಾಖೆಗೆಒಳಪಟ್ಟಿವೆ. ನಿತ್ಯ ಭಕ್ತರು
ಆಗಮಿಸುತ್ತಿದ್ದು, ಭಕ್ತರು ನಡೆಸುವ ಸೇವಾಕಾರ್ಯ ಗಳಿಗೆ ಇಲ್ಲಿ ಕಲ್ಯಾಣ ಮಂಟಪದೊರಕುತ್ತವೆ. ಇಲ್ಲಿನ ರುದ್ರ ರಮಣೀಯ ದೃಶ್ಯಕ್ಕೆ ಮನಸೋತವರೇ ಹೆಚ್ಚು.
ಮೋಜು-ಮಸ್ತಿಗೆ ಕಡಿವಾಣ ಅನಿವಾರ್ಯ : ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತುಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ. ಇಂತಹ ನಿಸರ್ಗದತ್ತ ಸಂರಕ್ಷಿತಅರಣ್ಯ ಪ್ರದೇಶದ ನಡುವೆ ಚಾರಣದಹೆಸರಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಸುಂದರವಾದ ಪರಿಸರಕ್ಕೆ ಮತ್ತು ಕಾಡುಪ್ರಾಣಿ,ಪಕ್ಷಿಗಳಿಗೆ ಧಕ್ಕೆ ತರುವಂತಹ ಕೆಲಸ ಯಾರೂಮಾಡಬಾರದು ಎಂಬುದೇ ಪರಿಸರ ಪ್ರೇಮಿಗಳ ಆಶಯವಾಗಿದೆ.
ಕಾಡಂಚಿನಲ್ಲಿ ವಾಸಿಸುವ ಸ್ಥಳೀಯರಿಗೆ ಅರಣ್ಯಾಧಿಕಾರಿಗಳು ತೊಂದರೆ ಕೊಡಬಾರದು. ನಗರ ಪ್ರದೇಶದಿಂದಬರುವ ಯುವಕರು ಕಾಡಿನಲ್ಲಿಯೇಕುಳಿತು ಮೋಜು, ಮಸ್ತಿಗೆ ಅವಕಾಶ ಕೊಡಬಾರದು. ಪ್ರಕೃತಿದತ್ತ ಪರಿಸರಉಳಿಸಲು ಸ್ಥಳೀಯರ ಸಂಪೂರ್ಣ ಸಹಕಾರವಿದೆ. – ಶಿವರಾಜು, ಮಂಚನಬೆಲೆ ನಿವಾಸಿ
ಸಾವನದುರ್ಗ ಕಾಯ್ದಿಟ್ಟ ಅರಣ್ಯ ಪ್ರದೇಶ. ಗಿಡಮರಗಳ ಸಂರಕ್ಷಣೆಮಾಡಲಾಗಿದೆ. ಕಾಡಿನೊಳಗೆ ಅನುಮತಿಇಲ್ಲದೆ ಪ್ರವೇಶ ಮಾಡುವಂತಿಲ್ಲ.ಗಮನಕ್ಕೆ ಬಂದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು. – ಜಗದೀಶ್, ವಲಯ ಅರಣ್ಯಾಧಿಕಾರಿ, ಮಾಗಡಿ
– ತಿರುಮಲೆ ಶ್ರೀನಿವಾಸ್