Advertisement

ಪ್ರವಾಸೋದ್ಯಮ ಅಭಿವೃದ್ಧಿ:ಕಾಸರಗೋಡು ನಂ. 1

12:30 AM Feb 15, 2019 | Team Udayavani |

ಕಾಸರಗೋಡು: ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕೇರಳ ರಾಜ್ಯದಲ್ಲೇ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಬಿ.ಆರ್‌. ಡಿ.ಸಿ.ಯ “ಸ್ಮೈಲ್‌’ (ಸ್ಮಾಲ್‌ ಆ್ಯಂಡ್‌ ಮೀಡಿಯಂ ಇಂಡಸ್ಟಿಸ್‌  ಲೆವೆರೇಜಿಂಗ್‌ ಎಕ್ಸ್‌ಪೀರಿಮೆಂಟ್‌ ಟೂರಿಸಂ) ಯೋಜನೆಯ ಮುಖಾಂತರ ವಿದೇಶಿ ಪ್ರವಾಸಿಗರನ್ನು ಕಾಸರಗೋಡು ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಆಕರ್ಷಿಸಲು ಸಾಧ್ಯವಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಂಕಿಅಂಶದಂತೆ 2018ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 269ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ನಂ. 1 ಆಗಿದೆ.

Advertisement

4,122 ವಿದೇಶಿ ಪ್ರವಾಸಿಗರು
2018ರಲ್ಲಿ ಕಾಸರಗೋಡು ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಲು ಬಂದಿರುವ ವಿದೇಶಿ ಪ್ರವಾಸಿಗರ ಸಂಖ್ಯೆ 4,122.  2017ರಲ್ಲಿ ಕಾಸರಗೋಡಿಗೆ ಬಂದ ವಿದೇಶಿ ಪ್ರವಾಸಿಗರ ಸಂಖ್ಯೆ 1,115. 

ಎರಡನೇ ಸ್ಥಾನದಲ್ಲಿರುವ ಕೊಲ್ಲಂ ಜಿಲ್ಲೆಯಲ್ಲಿ ಅಭಿವೃದ್ಧಿ ಕೇವಲ ಶೇ. 45. ಕಿರು ಮತ್ತು ಮಧ್ಯಮ ಹೂಡಿಕೆದಾರರನ್ನು ಒಗ್ಗೂಡಿಸಿ ಕಾಸರಗೋಡು ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಾದ ಬಿಆರ್‌ಡಿಸಿಯ “ಸ್ಮೈಲ್‌’ನಿಂದ ಇದು ಸಾಧ್ಯವಾಗಿದೆ. ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದೇಶಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ರೂಪುಕಲ್ಪನೆ ನೀಡಿದ “ಸ್ಮೈಲ್‌’ ಯೋಜನೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ತರಬೇತಿ, ಮಾರುಕಟ್ಟೆ ಸೌಕರ್ಯ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಮತ್ತು ಹೂಡಿಕೆದಾರರನ್ನು ಜತೆಗೂಡಿಸುವ ಬಿಆರ್‌ಡಿಸಿಯ ಯೋಜನೆ “ಸ್ಮೈಲ್‌ ವರ್ಚುವಲ್‌ ಟೂರ್‌ ಗೈಡ್‌’ ಬಿಡುಗಡೆಗೊಳಿಸಿತ್ತು.

ಹೂಡಿಕೆದಾರರ ಉತ್ಸಾಹ
ಕಾಸರಗೋಡು ಜಿಲ್ಲೆಯಲ್ಲಿ 57 ಮಂದಿ ಹೂಡಿಕೆದಾರರು ನಡೆಸುವ 27 ಸ್ಮೈಲ್‌ ಘಟಕಗಳ ಮೂಲಕ   ಪ್ರತಿ ದಿನ  ಕನಿಷ್ಠ    200 ಮಂದಿ ಪ್ರವಾಸಿಗರಿಗೆ ವಸತಿ ಸೌಕರ್ಯ ಒದಗಿಸಲು ಸಾಧ್ಯವಾಗಿದೆ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಇನ್ನಷ್ಟು ಹೂಡಿಕೆದಾರರು ಮುಂದೆ ಬರುತ್ತಿದ್ದು, ಉದ್ಯೋಗ ಸಾಧ್ಯತೆಯೂ ಹೆಚ್ಚಳವಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕಾಸರಗೋಡು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದರೂ, ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಇನ್ನೂ ಹಿಂದಿದೆ. ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕೇವಲ ಶೇ. 5 ರಷ್ಟು ಮಾತ್ರವೇ ಅಭಿವೃದ್ಧಿಯಾಗಿದೆ.

ಮತ್ತಷ್ಟು ಹೊಸ ಯೋಜನೆಗಳು  ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕಾಸರಗೋಡು ಜಿಲ್ಲೆ ರಾಜ್ಯದಲ್ಲಿ  11ನೇ ಸ್ಥಾನದಲ್ಲಿದೆ. ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸಲು ಇನ್ನಷ್ಟು ಅಭಿವೃದ್ಧಿ ಹಾಗೂ ಹೊಸ ಹೊಸ ಯೋಜನೆಗಳು ಅಗತ್ಯವಿದೆ. ಪ್ರಥಮ ಸ್ಥಾನಕ್ಕೆ ಬರಬೇಕಿದ್ದಲ್ಲಿ ನೂತನ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಇದು ಯಶಸ್ವಿಯಾದರೆ ಕಾಸರಗೋಡು ಜಿಲ್ಲೆಗೆ ಬರುವ ಸ್ವದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಲಿದೆ.
– ಟಿ.ಕೆ.ಮನ್ಸೂರ್‌
ಮ್ಯಾನೇಜಿಂಗ್‌ ಡೈರೆಕ್ಟರ್‌ ಬಿ.ಆರ್‌.ಡಿ.ಸಿ. ಕಾಸರಗೋಡು

Advertisement
Advertisement

Udayavani is now on Telegram. Click here to join our channel and stay updated with the latest news.

Next