Advertisement

ಪ್ರವಾಸೋದ್ಯಮ ಕುಸಿತ ಕಾಶ್ಮೀರ: 1.44 ಲಕ್ಷ ಉದ್ಯೋಗ‌ ನಷ್ಟ

09:52 AM Feb 05, 2020 | sudhir |

ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 370ನೇ ವಿಧಿಯನ್ನು ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಬಳಿಕ ಕೆಲವು ವಿದ್ಯಮಾನಗಳಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಪರಿ ಣಾಮವಾಗಿ ಸ್ಥಳೀಯರಿಗೆ ಆರ್ಥಿಕ ಸಮಸ್ಯೆಗಳು ಎದುರಾಗಿವೆ. ಪ್ರವಾಸೋದ್ಯಮ ಕುಸಿತದಿಂದ ಭಾರೀ ಪ್ರಮಾಣ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಐಎಸ್‌ ವರದಿಯೊಂದು ಹೇಳಿದೆ.

Advertisement

ಏನಾಯಿತು?
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಜನರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ಗೃಹಬಂಧನದಲ್ಲಿಡಲಾಗಿದ್ದು, ಶಾಂತಿ ಕದಡುವ ಸಾಧ್ಯತೆಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ವಿಧಿಸಲಾಗಿತ್ತು. ಮಾತ್ರವಲ್ಲದೇ, ಅಂತರ್ಜಾಲ ಸೇರಿದಂತೆ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗಷ್ಟೇ 2ಜಿ ತರಂಗ ಸೇವೆಯನ್ನು ಪ್ರಾರಂಭಿಸಲಾಗಿದೆ.

3,16,434
ಕಾಶ್ಮೀರ ಪ್ರವಾಸೋದ್ಯಮಕ್ಕೆ ಒಳ್ಳೆಯ ಹೆಸರನ್ನು ಪಡೆದಿದೆ. 2018ರ ಅಗಸ್ಟ್‌-ಡಿಸೆಂಬರ್‌ ತಿಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 3,16,434 ಮಂದಿ ಪ್ರವಾಸಿಗರು ಅಲ್ಲಿಗೆ ತೆರಳಿದ್ದರು.

86 ಶೇ. ಇಳಿಕೆ
2019ರ ಅಗಸ್ಟ್‌-ಡಿಸೆಂಬರ್‌ ತಿಂಗಳಲ್ಲಿ 43,059 ಪ್ರವಾಸಿಗರು ಮಾತ್ರ ಕಾಶ್ಮೀರಕ್ಕೆ ತೆರಳಿದ್ದಾರೆ. ಅಂದರೆ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 86ರಷ್ಟು ಪ್ರವಾಸಿಗರು ಕಡಿಮೆಯಾಗಿದ್ದಾರೆ.

ಕೇವಲ 4,562
2019ರ ಜುಲೈ (ಕೇಂದ್ರಾಡಳಿತವಾಗುವ ಮುನ್ನ) ಯಲ್ಲಿ 1,52,525 ಪ್ರವಾಸಿಗರು ಭೇಟಿ ನೀಡಿದ್ದರೆ, ಅದೇ ವರ್ಷದ ಅಗಸ್ಟ್‌ನಲ್ಲಿ ಕೇವಲ 4,562 ಮಂದಿ ಸಂದರ್ಶಿಸಿದ್ದಾರೆ. ಇವರೆಲ್ಲ ತಿಂಗಳ ಮೊದಲ ವಾರ ಬಂದವರು.

Advertisement

ನವೆಂಬರ್‌ನಲ್ಲಿ ಏರಿಕೆ
ಸೆಪ್ಟಂಬರ್‌ನಲ್ಲಿ 4,562 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರೆ, ನವೆಂಬರ್‌ನಲ್ಲಿ 12,086ಕ್ಕೆ ಏರಿಕೆಯಾಗಿತ್ತು. ನವೆಂಬರ್‌ನಲ್ಲಿ ಗುಲ್ಮಾರ್ಗ್‌ ಆಚರಣೆ ಇದ್ದ ಕಾರಣ ಹೆಚ್ಚಾಗಿತ್ತು. ಆದರೆ ಡಿಸೆಂಬರ್‌ನಲ್ಲಿ 6,954ಕ್ಕೆ ಕುಸಿಯಿತು.

ಉದ್ಯೋಗ ನಷ್ಟ
ಪ್ರವಾಸೋದ್ಯಮದಲ್ಲಿ ಭಾರೀ ಕುಸಿತವಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ನಷ್ಟ ಸಂಭವಿಸಿದೆ. ಅಲ್ಲಿನ ಜನರು ಪ್ರವಾಸೋದ್ಯಮ ಮತ್ತು ಗುಡಿ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಈಗ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿರುವ ಕಾರಣದಿಂದ ಸುಮಾರು 1,44,500 ಉದ್ಯೋಗ ನಷ್ಟವಾಗಿದೆ.

ಲಡಾಖ್‌ನಲ್ಲಿ ಹೆಚ್ಚಳ
ಮತ್ತೂಂದು ಹೊಸ ಕೇಂದ್ರಾಡಳಿತಗಸ್ಟ್‌ 5ರ ಬಳಿಕ ಅಂದಾಜು 15 ಸಾವಿರ ಕೋಟಿ ರೂ. ನಷ್ಟವನ್ನು ಅಲ್ಲಿನ ವಾಣಿಜ್ಯ ವಿಭಾಗ ಅನುಭವಿಸಿದೆ ಎಂದು ಹೇಳ ಲಾಗುತ್ತಿದೆ. ಶ್ರೀನಗರದ ದಾಲ್‌ ಲೇಕ್‌ನಲ್ಲಿ ಬೋಟಿಂಗ್‌ ಇಲ್ಲದೇ ಹಲವು ತಿಂಗಳುಗಳು ಕಳೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next