Advertisement
ಗೈಡ್ ಎಂಬುದು ಸಾಮಾನ್ಯ ವಿಷಯವಲ್ಲ. ಯಾವುದೇ ಪ್ರದೇಶದ ಹಿನ್ನಲೆ, ಆಗಿರುವ ಬದಲಾವಣೆಯನ್ನು ತಿಳಿದು ಪ್ರವಾಸಿಗರಿಗೆ ತನ್ನ ಮಾತಿನಿಂದ ಸಂಪೂರ್ಣವಾಗಿ ಪರಿಚಯಿಸುವುದು ಆತನ ಕರ್ತವ್ಯ. ಹಾಗಾಗಿ ಈ ಗೈಡ್ ಬರೀ ಒಂದು ಭಾಷೆಯನ್ನು ತಿಳಿದಿದ್ದರೆ ಸಾಕಾಗುವುದಿಲ್ಲ. ಬದಲಾಗಿ ಕನಿಷ್ಠ ಐದು- ಆರು ಭಾಷೆಗಳನ್ನಾದರು ಕಲಿತಿರಬೇಕು. ಏಕೆಂದರೆ ಪ್ರವಾಸಿಗರು ದೇಶದ ನಾನಾ ಕಡೆಗಳಿಂದ ಬರುತ್ತಿರುತ್ತಾರೆ. ಅವರಿಗೆ ಅವರದೇ ಭಾಷೆಯಲ್ಲಿ ಇಲ್ಲಿನ ವೈಶಿಷ್ಟ್ಯವನ್ನು ತಿಳಿಸುವುದು ಬಹುಮುಖ್ಯ.
ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಭಾರತದಲ್ಲಿ ಈಗಂತೂ ಇಂತಹ ಟೂರಿಸಂ ಗೈಡ್‌ಗಳ ಅವಶ್ಯಕತೆ ತುಂಬಾನೇ ಇದೆ. ದಿನಕ್ಕೊಂದು ಪ್ರದೇಶಗಳು ಅಭಿವೃದ್ಧಿ ಹೊಂದಿ ಪ್ರವಾಸೋದ್ಯಮ ತಾಣಗಳಾಗುತ್ತಿವೆ. ಹಾಗಾಗಿ ಖಾಸಗಿ ಉದ್ಯೋಗ ಮಾತ್ರವಲ್ಲದೆ ಸರಕಾರಿ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯೂ ಹೆಚ್ಚಿದೆ. ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಈ ಟೂರಿಸಂಗಳು ವಿಸ್ತರಿಸಿ ದೆ. ಇದರಿಂದ ರೈಲು, ವಿಮಾನ, ಹಡಗು ಎನ್ನದೆ ಎಲ್ಲವೂಗಳಲ್ಲಿ ಪ್ರಯಾಣಿಸುವ ಸಂದರ್ಭ ಸಿಕ್ಕರೂ ಆಶ್ಚರ್ಯ ಪಡುವಂತಹದ್ದೇನಿಲ್ಲ. ಹಲವು ಕೋರ್ಸ್‌ಗಳು
ಟೂರಿಸಂ ಗೈಡ್ ಅನ್ನು ಕೋರ್ಸ್‌ಗಳ ಮುಖಾಂತರ ಕಲಿಯಬೇಕೆಂದಿಲ್ಲ. ಆದರೂ ಹಲವು ಕೋರ್ಸ್‌ಗಳು, ಪದವಿಗಳು ಈಗಾಗಲೇ ಹಲವರ ಬದುಕನ್ನು ರೂಪಿಸಿದೆ. ಐಐಟಿಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್), ಹಾಗೂ ಡಿಪ್ಲೊಮಾ ಕೋರ್ಸ್‌ಗಳು ಇವೆ. ನಮ್ಮ ಶಿಕ್ಷಣದ ಜತೆ ಜತೆಗೂ ಇದನ್ನು ಕಲಿ ತರೆ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಇದೇ ವೃತ್ತಿಯಲ್ಲಿ ಮುಂದುವರಿಯಬಹುದು. ದೇಶ ಸುತ್ತಿ ನೋಡು ಕೋಶ ಓದಿ ನೋಡು ಅನ್ನುವಂತೆ ಈ ಗೈಡ್ ಕೆಲಸ ಒಂದು ಮಜಾ ನೀಡುವ ಹಾಗೂ ಸದಾ ಹುಮ್ಮಸ್ಸಿನಿಂದ ಇರುವಂತೆ ಮಾಡುವುದಂತು ಸತ್ಯ. ಜತೆಗೆ ಇಂಥವರಿಗೆ ಅವಕಾಶಗಳು ಸಾಕಷ್ಟಿವೆ.
Related Articles
ಕೆಲವರು ಹಲವು ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಮಾತುಗಾರಿಕೆಯಲ್ಲಿ ತುಂಬಾ ನಿಪುಣರೂ ಆಗಿರುತ್ತಾರೆ. ಟೂರ್ ಗೈಡ್‌ನ ಮುಖ್ಯ ಬಂಡವಾಳವೇ ಮಾತು. ಕಾಲೇಜುಗಳಲ್ಲಿ ಚಾರಣಕ್ಕೆ ಹೋದಾಗ ಕೆಲವೊಂದು ವ್ಯಕ್ತಿಗಳು ತಾನು ಕಂಡಂದ್ದನ್ನು ಅದ್ಭುತವಾಗಿ ವರ್ಣಿಸುತ್ತಾರೆ. ಇಂಥವರು ಟೂರ್ ಗೈಡ್ ಆಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು.
Advertisement
. ಭರತ್ ರಾಜ್ ಕರ್ತಡ್ಕ