Advertisement

ನಿಟ್ಟೆ ತಾಂತ್ರಿಕ ಕಾಲೇಜಿನ ತಂಡದಿಂದ “ಟಚ್‌ಲೆಸ್‌ ಸ್ಯಾನಿಟೈಸರ್‌ ಡಿಸ್ಪೆಂಸರ್‌’

10:12 PM May 17, 2020 | Sriram |

ಕಾರ್ಕಳ: ನಿಟ್ಟೆ ತಾಂತ್ರಿಕ ಕಾಲೇಜಿನ ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಒಂದು ಸರಳ ಹಾಗೂ ಅತಿ ಕಡಿಮೆ ವೆಚ್ಚದ “ಟಚ್‌ಲೆಸ್‌ ಸ್ಯಾನಿಟೈಸರ್‌ ಡಿಸ್ಪೆಂಸರ್‌’ ಉಪಕರಣವನ್ನು ವಿನ್ಯಾಸಗೊಳಿಸಿರುತ್ತಾರೆ.

Advertisement

ಕೋವಿಡ್-19 ವೈರಸ್‌ ಹರಡುವುದನ್ನು ತಡೆಗಟ್ಟುವಲ್ಲಿ ಸ್ಯಾನಿಟೈಸರ್‌ ಗಳ ಬಳಕೆ ಅತ್ಯಗತ್ಯ. ಒಂದೇ ಸ್ಯಾನಿಟೈಸರ್‌ ಡಿಸ್ಪೆಂಸರ್‌ನ್ನು ಪದೇಪದೇ ಹಲವರು ಬಳಸುವುದು ಅಪಾಯಕಾರಿ. ಈ ಅಪಾಯವನ್ನು ದೂರವಾಗಿಸುವ ನಿಟ್ಟಿನಲ್ಲಿ ಟಚ್‌ಲೆಸ್‌ ಸ್ಯಾನಿಟೈಸರ್‌ ಡಿಸ್ಪೆಂಸರ್‌ ಬಳಕೆ ಅನಿವಾರ್ಯ. ಇದಕ್ಕೊಂದು ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಕರಣವೊಂದನ್ನ ಅಭಿವೃದ್ಧಿಪಡಿಸಿರುತ್ತಾರೆ.

ಹ್ಯಾಂಡ್‌ ಡಿಟೆಕ್ಷನ್‌, ಪವರ್‌ ಇಂಡಿಕೇಟರ್‌ ಹಾಗೂ ಉಳಿದಿರುವ ಸ್ಯಾನಿಟೈಸರ್‌ ನ ಪ್ರಮಾಣವನ್ನು ತಿಳಿಯುವ ತಂತ್ರಜ್ಞಾನ ಇದರಲ್ಲಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣ್ಕರ್ ಮೇ 13ರಂದು ಸಂಸ್ಥೆಯ ಆವರಣದಲ್ಲಿ ಉಪಕರಣ ಉದ್ಘಾಟಿಸಿದರು. ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ| ಸೂರ್ಯನಾರಾಯಣ ಕೆ. ಸ್ವಾಗತಿಸಿ, ಉಪಕರಣದ ಕುರಿತು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next