Advertisement

ಅಧಿಕಾರಿಗಳು ತನ್ನ ಮನವಿ ತಿರಸ್ಕರಿಸಿದರೆಂದು ಕಚೇರಿಯೊಳಗೆ ಉಡ ತಂದು ಬಿಟ್ಟ ವ್ಯಕ್ತಿ…

05:06 PM Jul 03, 2023 | Team Udayavani |

ಮಧ್ಯಪ್ರದೇಶ: ತಾನು ಸಲ್ಲಿಸಿದ ಮನವಿಯನ್ನು ಸರಕಾರಿ ಅಧಿಕಾರಿಯೊಬ್ಬರು ತಿರಸ್ಕರಿಸಿದ್ದಾರೆ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ಸರಕಾರಿ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ತಂದು ಬಿಟ್ಟಿರುವ ಪ್ರಸಂಗ ಮಧ್ಯಪ್ರದೇಶದ ಚಂದೇರಿಯಲ್ಲಿ ನಡೆದಿದೆ.

Advertisement

ಏನಿದು ಪ್ರಕರಣ: ಮಧ್ಯ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ತನಗೆ ವಾಸಕ್ಕೆ ಮನೆ ನಿರ್ಮಿಸಲು ಸರಕಾರಿ ಜಾಗ ಮಂಜೂರು ಮಾಡುವಂತೆ ಮುನ್ಸಿಪಲ್ ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದಾನೆ ಆದರೆ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಕೊಟ್ಟಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿ ವಾಸ ಮಾಡಲು ಜಾಗವನ್ನು ಗುತ್ತಿಗೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾನೆ ಆದರೆ ಈತನ ಈ ಮನವಿಗೂ ಅಧಿಕಾರಿಗಳು ಬೆಲೆ ಕೊಡಲೇ ಇಲ್ಲ ಇದರಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ತನ್ನ ಮನವಿಗೆ ಯಾವುದೇ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಅಧಿಕಾರಿಗೆ ಏನಾದರು ತೊಂದರೆ ಕೊಡಬೇಕೆಂದು ಆಲೋಚಿಸಿ ಕಚೇರಿ ಒಳಗೆ ಯಾವುದಾದರೂ ವಿಷಕಾರಿ ಸರಿಸೃಪವನ್ನು ಬೀಡಬೇಕೆಂದು ನಿರ್ಧರಿಸಿದ್ದಾನೆ, ಅಸಲಿಗೆ ಈ ವ್ಯಕ್ತಿ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಪ್ರವೃತ್ತಿಯನ್ನೂ ಮಾಡುತ್ತಿದ್ದ ಎನ್ನಲಾಗಿದೆ.

ಅದರಂತೆ ಕಳೆದ ಶನಿವಾರ ಒಂದು ಉಡವನ್ನು ಚೀಲದೊಳಗೆ ತುಂಬಿಸಿಕೊಂಡು ಬಂದು ಮುನ್ಸಿಪಾಲಿಟಿ ಕಚೇರಿಯ ಅಧಿಕಾರಿಯ ಕಚೇರಿ ಒಳಗೆ ಬಿಡಲು ಬಂದಿದ್ದಾನೆ ಆದರೆ ಈ ವೇಳೆ ಕಚೇರಿಯಲ್ಲಿ ಅಧಿಕಾರಿ ಇರಲಿಲ್ಲ ಇದರಿಂದ ಕುಪಿತಗೊಂಡ ವ್ಯಕ್ತಿ ಇದೆ ಕಟ್ಟಡದಲ್ಲಿದ್ದ ಇನ್ನೋರ್ವ ಅಧಿಕಾರಿಯ ಕಚೇರಿಯೊಳಗೆ ಉಡವನ್ನು ಬಿಟ್ಟಿದ್ದಾನೆ.

ಇತ್ತ ಕಚೇರಿ ಒಳಗೆ ಉಡ ಕಾಣಿಸುತ್ತಿದ್ದಂತೆ ಅಧಿಕಾರಿಗಳು ಗಾಬರಿಗೊಂಡಿದ್ದಾರೆ ಬಳಿಕ ಅಧಿಕಾರಿಗಳು ವ್ಯಕ್ತಿಯ ಬಳಿ ಸಾಕಷ್ಟು ಮನವಿ ಮಾಡಿದ ಬಳಿಕ ಉಡವನ್ನು ಹಿಡಿದು ಅಲ್ಲಿಂದ ತೆರಳಿದ್ದಾನೆ, ವ್ಯಕ್ತಿ ತೆರಳುವ ವೇಳೆ ನನ್ನ ವಾಸಕ್ಕೆ ಜಾಗ ಮಂಜೂರು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಕಾರಿ ಹಾವುಗಳನ್ನು ಬಿಡುವುದಾಗಿ ಹೇಳಿಕೊಂಡಿದ್ದಾನೆ.

ಅಧಿಕಾರಿಗಳು ಹೇಳೋದೇನು:
ಚಂದೇರಿ ಮುನ್ಸಿಪಲ್ ಕಾರ್ಪೊರೇಶನ್‌ನ ಸಿಎಂಒ ಸಂತೋಷ್ ಸೈನಿ, ಈ ಜಮೀನಿನಲ್ಲಿ ತೋಟರಾಮ್‌ಗೆ ವಸತಿ ಮಂಜೂರಾಗಿದ್ದು, ಈಗಾಗಲೇ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಮನೆ ನಿರ್ಮಾಣಕ್ಕೆ ಒದಗಿಸಲಾಗಿದೆ, ಆದರೆ ಆ ಹಣವನ್ನು ಆತ ಖರ್ಚು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Cardless Cash: ಎಸ್‌ ಬಿಐನ ಪರಿಷ್ಕೃತ “YONO App” ನಲ್ಲಿ ಏನೇನು ಬದಲಾವಣೆಯಾಗಿದೆ…

Advertisement

Udayavani is now on Telegram. Click here to join our channel and stay updated with the latest news.

Next