Advertisement

Thothapuri-2: ಹಾಸ್ಯದ ಜೊತೆ ಸಾಗುವ ಭಿನ್ನ ಪ್ರೇಮಯಾನ.. ʼತೋತಾಪುರಿ-2ʼ ಟ್ರೇಲರ್‌ ಔಟ್

01:06 PM Sep 18, 2023 | Team Udayavani |

ಬೆಂಗಳೂರು: ವಿಜಯ್‌ ಪ್ರಸಾದ್‌ ನಿರ್ದೇಶನದ ʼತೋತಾಪುರಿ-2ʼ ಸಿನಿಮಾದ ಟ್ರೇಲರ್‌ ಸೋಮವಾರ(ಸೆ.18 ರಂದು) ರಿಲೀಸ್‌ ಆಗಿದೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಟ್ರೇಲರ್‌ ರಿಲೀಸ್‌ ಮಾಡಿ ಸಿನಿಮಾ ತಂಡಕ್ಕೆ ಶುಭಕೋರಿದ್ದಾರೆ.

Advertisement

ʼತೋತಾಪುರಿʼ ಸಿನಿಮಾದ ಮೊದಲ ಭಾಗಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಮಾಜಿಕವಾಗಿ ಸಂದೇಶವನ್ನು ಸಾರಿದ ಸಿನಿಮಾದಲ್ಲಿ ಒಂದಷ್ಟು ಕಚಗುಳಿ ಇಡುವ ಹಾಗೂ ಮೂಗು ಮುಚ್ಚಿಕೊಂಡು ನಗುವ ಡೈಲಾಗ್ಸ್‌ ಗಳು ಸಿನಿಮಾದಲ್ಲಿತ್ತು.

ಇದೀಗ ಎರಡನೇ ಆ ಭಾಗದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದರಲ್ಲೂ ಮನರಂಜನೆವುಳ್ಳ ಹಾಸ್ಯಮಯ ಡೈಲಾಗ್ಸ್‌ ಹಾಗೂ ಒಳಾರ್ಥದ ಸಂಭಾಷಣೆಗಳಿವೆ. ಮುಖ್ಯವಾಗಿ ಇಲ್ಲಿ ಡಾಲಿ ಧನಂಜಯ ಅವರು ನ್ಯೂ ಲುಕ್‌ ನಲ್ಲಿ ಲವರ್‌ ಬಾಯ್‌ ಆಗಿ ವಿಕ್ಟೋರಿಯಾ (ಸುಮನ್‌ ರಂಗನಾಥನ್) ಹಿಂದೆ ಪ್ರೇಮ ನಿವೇದನೆಗಾಗಿ ಬಿದ್ದಿದ್ದಾರೆ.‌

ಇದನ್ನೂ ಓದಿ: WC 23; ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ; ಆರ್ಚರ್ ಗಿಲ್ಲ ಜಾಗ; ಯುವ ಆಟಗಾರನಿಗೆ ಒಲಿದ ಅದೃಷ್ಟ

ಇನ್ನೊಂದೆಡೆ ಅದಿತಿ ಪ್ರಭುದೇವ( ಮುಸ್ಲಿಂ ಹುಡುಗಿಯ ಪಾತ) ಅವರ ಪಾತ್ರ ಹಾಗೂ ನವರಸ ನಾಯಕ ಜಗ್ಗೇಶ್‌ ಅವರ ಉರ್ದು ಮಿಶ್ರಿತ ಸಂಭಾಷಣೆಗಳು ನೋಡುಗರನ್ನು ಸೆಳೆಯುತ್ತದೆ. ಜಾತಿ – ಧರ್ಮ ಮೀರಿದ ಪ್ರೇಮ ಬಂಧವನ್ನು ಟ್ರೇಲರ್‌ ನಲ್ಲಿ ಮೇಲ್ನೋಟಕ್ಕೆ ತೋರಿಸಲಾಗಿದೆ.

Advertisement

ಧನಂಜಯ್‌ ಹಾಗೂ ಜಗ್ಗೇಶ್‌ ಅವರ ಕ್ಯಾರೆಕ್ಟರ್‌ ಲುಕ್‌ ಗುರುಪೂರ್ಣಿಮೆಯ ದಿನ ಬಿಡುಗಡೆಯಾಗಿತ್ತು. ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್‌, ಅದಿತಿ ಪ್ರಭುದೇವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಎರಡನೇ ಭಾಗದಲ್ಲೂ ಮೊದಲ ಭಾಗದಲ್ಲಿರುವ ಪಾತ್ರಗಳೇ ಹೈಲೈಟ್‌ ಆಗಿವೆ.

ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್‌, ವೀಣಾ ಸುಂದರ್‌, ಹೇಮಾದತ್‌ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ. ಶೀಘ್ರದಲ್ಲಿ ಸಿನಿಮಾದ ರಿಲೀಸ್‌ ಡೇಟ್‌ ರಿವೀಲ್‌ ಆಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next