ಹೊಸದಿಲ್ಲಿ: ಕಳೆದ ವರ್ಷ, ಸೂರ್ಯ ಗ್ರಹಣವನ್ನು ನೋಡಿ ಖುಷಿಪಟ್ಟಿದ್ದ ಖಗೋಳ ವಿಜ್ಞಾನದ ಆಸಕ್ತರು ಈ ಬಾರಿ ಮತ್ತೊಂದು ಕೌತುಕಕ್ಕೆ ಸಜ್ಜಾಗಿದ್ದಾರೆ. ಇದೇ ತಿಂಗಳ ಕೊನೆಯ ದಿನ ಸಾಮಾನ್ಯವಾಗಿ ಬೆಳ್ಳಗೆ ಕಂಗೊಳಿಸುತ್ತಾ ಹಾಲಿನ ಬೆಳದಿಂಗಳನ್ನು ಸುರಿಸುವ ಚಂದಮಾಮ, ಅದು ರಾತ್ರಿ ಶ್ಯಾಮನಾಗುತ್ತಾನೆ, ರಕ್ತ ವರ್ಣಕ್ಕೆ ತಿರುಗಲಿದ್ದಾನೆ.
ಚಂದ್ರನ ಇಂಥ ಬದಲಾವಣೆಗೆ ಕಾರಣ ಅಂದು ಸಂಭವಿಸಲಿರುವ, ವಿಶೇಷವಾದ ಚಂದ್ರಗ್ರಹಣ. “ಸೂಪರ್ ಬ್ಲೂ ಬ್ಲಡ್‌ಮೂನ್’ ಎಂದು ಬಣ್ಣಿ ಸಲ್ಪಡುವ ಈ ಮಾದರಿಯ ಚಂದ್ರಗ್ರಹಣ 150 ವರ್ಷಗಳಿಗೊಮ್ಮೆ ನಡೆ ಯುತ್ತದೆ. ಈ ಬಾರಿಯ ಇಂಥದ್ದೊಂದು ಕೌತುಕ ಜ. 31ರಂದು ನಡೆಯುತ್ತದೆ.
ಎಲ್ಲೆಲ್ಲಿ ಹೇಗೆ ಕಾಣುತ್ತೆ?: ಈ ಗ್ರಹಣ, ಭಾರತದ ಪೂರ್ವ ಕರಾವಳಿ, ಏಷ್ಯಾ, ಪೆಸಿಫಿಕ್, ಯೂರೋಪ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ಗೋಚರಿಸುತ್ತದೆ. ಭಾರತ, ಮಧ್ಯಪ್ರಾಚ್ಯ ಹಾಗೂ ಪೂರ್ವ ಯೂರೋಪ್‌ಗ್ಳಲ್ಲಿ ಚಂದ್ರೋದಯವಾಗುತ್ತಲೇ ಗ್ರಹಣ ಆರಂಭವಾಗಿರುತ್ತದೆ. ಕೇಂದ್ರ ಹಾಗೂ ಪೂರ್ವ ಏಷ್ಯಾ, ಇಂಡೋನೇಷ್ಯಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಸಂಜೆ ಹೊತ್ತಿಗೆ ಈ ಗ್ರಹಣ ಆಂಶಿಕವಾಗಿ ಗೋಚರಿಸುತ್ತದೆ. ಅನಂತರ ಅಲಾಸ್ಕಾ, ಹವಾಯ್ ಹಾಗೂ ವಾಯವ್ಯ ಕೆನಡಾದಲ್ಲಿ ಮಾತ್ರ ಈ ಗ್ರಹಣವನ್ನು ಸಂಪೂರ್ಣವಾಗಿ ನೋಡಬಹುದಾಗಿದೆ. ಉತ್ತರ, ಕೇಂದ್ರ ಅಮೆರಿಕಗಳಲ್ಲಿ ಮುಕ್ಕಾಲುಭಾಗ ಗ್ರಹಣ ವೀಕ್ಷಣೆ ಸಾಧ್ಯ. ಭಾರತದಲ್ಲಿ ಆ ದಿನ 6.21ಕ್ಕೆ ಶುರುವಾಗಿ ಸಂಜೆ 7.31ಕ್ಕೆ ಮುಕ್ತಾಯವಾಗಲಿದೆ.
ಕಾರಣ
ಚಂದ್ರನ ಮೇಲೆ ನಮ್ಮ ಭೂಮಿಯ ದಕ್ಷಿಣ ಧ್ರುವದ ಛಾಯೆ ಗಾಢವಾಗಿ ಆವರಿಸುವುದು
ಮತ್ತೆ ಯಾವಾಗ?
ಡಿ. 31, 2028,
ಜ. 31, 2037ರಲ್ಲಾಗುತ್ತದೆ.