Advertisement

ಆ್ಯಪ್‌ಗಳ ಮೂಲಕ ಸಾಲ ನೀಡಿ ಕಿರುಕುಳ: ಬಂಧನ

12:18 PM Dec 29, 2020 | Suhan S |

ಬೆಂಗಳೂರು: ಮೈಕ್ರೋ ಫೈನಾನ್ಸ್‌ (ಲೋನ್‌ ಆ್ಯಪ್‌ಗಳು) ಮೂಲಕ ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ, ಸರ್ವೀಸ್‌ ಚಾರ್ಜ್‌ ಹೆಸರಿನಲ್ಲಿ ದುಬಾರಿ ಬಡ್ಡಿ ವಿಧಿಸಿ ಕಿರುಕುಳ ನೀಡುತ್ತಿದ್ದ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋರಮಂಗಲದಲ್ಲಿರುವ ಹೈಜಿಕಿ ಸರ್ವೀಸ್ಡ್ಪ್ರೈವೇಟ್‌ ಲಿ., ಎಕ್ಸೆ„ಡ್‌ವೆಲ್‌ ಸರ್ವೀಸ್‌ ಪ್ರೈವೇಟ್‌ ಲಿ, ಮ್ಯಾಸ್ಕೊಟ್‌ ಸ್ಟಾರ್‌ ಸರ್ವೀಸ್ಡ್ ಪ್ರೈವೇಟ್‌ ಲಿ., ಅಕ್ಯೂಸ್ಟೆಲರ್‌ ಪ್ರೈವೇಟ್‌ ಲಿ. ಸಂಸ್ಥೆ ಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂಬಂಧ ಕಂಪನಿಗಳ ನಿರ್ದೇಶಕರಾದ ಹೊಸಗುಡ್ಡದಹಳ್ಳಿ ನಿವಾಸಿ ಸೈಯದ್‌ ಅಹಮದ್‌, ಬಿಟಿಎಂ ಲೇಔಟ್‌ನ ಸೈಯದ್‌ ಇರ್ಫಾನ್‌ ಮತ್ತು ರಾಮಗೊಂಡನ ಹಳ್ಳಿಯ ಆದಿತ್ಯಾ ಸೇನಾಪತಿ ಎಂಬವರನ್ನು ಬಂಧಿಸಲಾಗಿದೆ.

Advertisement

ಆರೋಪಿಗಳಿಂದ 35 ಲ್ಯಾಪ್‌ಟಾಪ್‌, 200 ಬೇಸಿಕ್‌ ಮೊಬೈಲ್‌, ವಿವಿಧ ಬ್ಯಾಂಕ್‌ಗಳ 8ಚೆಕ್‌ ಪುಸ್ತಕ, 30ಕ್ಕೂ ಹೆಚ್ಚು ಸಿಮ್‌ ಹಾಗೂವಿವಿಧ ಕಂಪನಿಗೆ ಸೇರಿದ 9 ವಿವಿಧ ಸೀಲುಗಳನ್ನುಜಪ್ತಿ ಮಾಡಲಾಗಿದೆ. ಅಕ್ಯೂಸ್ಟೆಲರ್‌ ಪ್ರೈವೇಟ್‌ ಲಿ. ಕಂಪನಿ ಮೇಲೆ ದಾಳಿ ವೇಳೆ ಇತರೆ ಆರು ಕಂಪನಿಗಳು ಇದೇ ರೀತಿ ಅಕ್ರಮವಾಗಿ ಸಾಲನೀಡಿ ಸಾರ್ವಜನಿಕರಿಗೆ ಕಿರುಕುಳನೀಡುತ್ತಿರುವುದು ಕಂಡು ಬಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್, ಸೀಲ್ ಡೌನ್ ಅಗತ್ಯವಿಲ್ಲ, ಶಾಲಾರಂಭಕ್ಕೆ ತೊಂದರೆಯಿಲ್ಲ: ಸಚಿವ ಸುಧಾಕರ್

ಚೀನಾ ಕಂಪನಿಗಳು ತಮ್ಮದೇ ಲೋನ್‌ ಆ್ಯಪ್‌ಗ್ಳಾದ ಮನಿ ಡೇ, ಪೈಸಾ ಪೇ, ಲೋನ್‌ಟೈಮ್‌, ರುಪಿ ಡೇ, ರುಪಿ ಕಾರ್ಟ್‌, ಇನ್‌ ಕ್ಯಾಶ್‌ಆ್ಯಪ್‌ಗ್ಳನ್ನು ಹೊಂದಿದ್ದು, ಈ ಮೂಲಕ ಗ್ರಾಹಕರಿಗೆ ಲೋನ್‌ ನೀಡುತ್ತಿದ್ದಾರೆ. ಸಾಲ ವಸೂಲಿಗೆ ಕೆಲವು ಕಾಲ್‌ಸೆಂಟರ್‌ಗಳಿಗೆ ಅವರುಗಳೇ ಗುತ್ತಿಗೆ ನೀಡಿರುವುದು ಕಂಡು ಬಂದಿದೆ.ಕಂಪನಿಗಳ ಉಸ್ತುವಾರಿಯನ್ನು ಚೀನಾಮೂಲದ ವ್ಯಕ್ತಿಗಳೇ ನೋಡಿಕೊಳ್ಳುತ್ತಿದ್ದು,ಮೂವರು ಆರೋಪಿಗಳನ್ನು ನಿರ್ದೇಶಕರಾಗಿನೇಮಕ ಮಾಡಲಾಗಿದೆ. ಚೀನಾ ಮೂಲದವ್ಯಕ್ತಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಏಜೆಂಟರ್‌ಗಳ ನಿಂದೆ: ನಿತ್ಯ ಕಿರುಕುಳ :

Advertisement

ಸಾಲ ಪಡೆಯುವಾಗ ಗ್ರಾಹಕರು ಪ್ಲೇ ಸ್ಟೋರ್‌ಗಳ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಆ್ಯಪ್‌ ಕೇಳುವ ವೈಯಕ್ತಿಕ ವಿವರವನ್ನು ನೀಡಬೇಕು.ಸಾಲ ನಿಗದಿತ ಸಮಯಕ್ಕೆ ಹಿಂದಿರುಗಿಸದಿದ್ದಾಗ ಕಂಪನಿಯ ಏಜೆಂಟ್‌ಗಳು ಸಾಲಗಾರನಿಗೆಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು. ಸಾಲಗಾರರ ಮೊಬೈಲ್‌ದತ್ತಾಂಶಗಳನ್ನು ಹ್ಯಾಕ್‌ ಮಾಡಿ ಅವುಗಳನ್ನು ಬಳಸಿಕೊಂಡು ಸಾಲ ಪಡೆದವರ ಕಾಂಟ್ಯಾಕ್ಟ್ನಲ್ಲಿರುವ ಎಲ್ಲ ವ್ಯಕ್ತಿಗಳನ್ನು ಒಳಗೊಂಡಂತೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ಸಾಲ ಪಡೆದವರ ವೈಯಕ್ತಿಕ ಫೋಟೋ ಗಳೊಂದಿಗೆ “ಚೋರ್‌, ಫ್ರಾಡ್‌, ಡಿಫಾಲ್ಟರ್‌’ ಎಂದು ತಲೆಬರಹನೀಡಿ ಅಶ್ಲೀಲವಾಗಿ ಬರೆದು ನಿಂದಿಸುತ್ತಿದ್ದರು. ಈ ಸಂಬಂಧ ಸೈಬರ್‌ ಠಾಣೆಯಲ್ಲಿ ಮೂರುಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next