Advertisement

ಬಿರುಗಾಳಿ ಸಹಿತ ಧಾರಾಕಾರ ಮಳೆ

09:49 AM May 23, 2019 | Team Udayavani |

ಆಲ್ದೂರು: ಆಲ್ದೂರು ಸುತ್ತಮುತ್ತ ಬುಧವಾರ ಸಂಜೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿರುವೆ.

Advertisement

ಬುಧವಾರ ಸಂಜೆ ಇದ್ದಕ್ಕಿದ್ದಂತೆ ಜೋರಾಗಿ ಬಿರುಗಾಳಿ ಆರಂಭವಾಯಿತು. ನೋಡು ನೋಡುತ್ತಿದ್ದಂತೆ ದಟ್ಟ ಮೋಡ ಕವಿದು ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿಯಿತು. ರಭಸವಾಗಿ ಬೀಸಿದ ಬಿರುಗಾಳಿಗೆ ಹಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಮಳೆಯ ಜೊತೆ ಭಾರೀ ಆಲಿಕಲ್ಲು ಸುರಿದಿದ್ದು ಕಾಫಿ , ಕಾಳು ಮೆಣಸು ಹಾಗೂ ಮಾವಿನ ಫಸಲಿಗೆ ಹಾನಿ ಉಂಟು ಮಾಡಿದೆ.

ಪಟ್ಟಣದ ಪೂರ್ಣ ಪ್ರಜ್ಞ ಶಾಲೆಯ ಬಳಿ 2 ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿವೆ. ಮೂಡಿಗೆರೆ ರಸ್ತೆಯಲ್ಲಿ ಮರ ಮುರಿದು ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾರಳ್ಳಿ ಗ್ರಾಮದ ಬಳಿ 3 ವಿದ್ಯುತ್‌ ಕಂಬಗಳು ಬಿದ್ದಿರುವ ಬಗ್ಗೆ ವರದಿಯಾಗಿದ್ದು, ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.

ಮೂಡಿಗೆರೆ ರಸ್ತೆಯಲ್ಲಿರುವ ಪೂರ್ಣ ಪ್ರಜ್ಞ ಹಾಸ್ಟೆಲ್ ಮುಂಭಾಗ ವಿದ್ಯುತ್‌ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಬುಧವಾರ ಶಾಲೆ ಪುನಃ ಪ್ರಾರಂಬವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್ಗೆ ಬಿಡಲು ಬಂದಿದ್ದರು. ವಿದ್ಯುತ್‌ ಸಂಪರ್ಕವಿದ್ದ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ವಿದ್ಯುತ್‌ ಕಂಬಗಳು ಮುರಿದು ಬಿದ್ದ ಕಾರಣ ಪಟ್ಟಣದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next