Advertisement

ಕೈಬರಹದಲ್ಲಿ ದೂರದೂರಿಗೆ ಬರೆಯುತ್ತಿದ್ದ ಪತ್ರಗಳು ನನ್ನನ್ನು ಬರಹಗಾರನನ್ನಾಗಿಸಿದೆ

07:08 PM Apr 06, 2021 | Team Udayavani |

ಟೊರೊಂಟೊ:  ಸ್ವಭಾವ ಸಾಹಿತ್ಯ ಮತ್ತು ಲಲಿತ ಕಲಾ ವೇದಿಕೆ ಹಾಗೂ ಕನ್ನಡ ಸಂಘ ಟೊರೊಂಟೋದ ಜಂಟಿ ಆಶ್ರಯದಲ್ಲಿ ನಡೆದ ಪುಸ್ತಕ ಸಂಭ್ರಮ ಕಾರ್ಯಕ್ರಮದಲ್ಲಿ ಆಲೋಚನೆಗಳಿಗೆ ಅಕ್ಷರ ರೂಪ ಎಂಬ ವಿಷಯದ ಬಗ್ಗೆ ಖ್ಯಾತ ಅಂಕಣಕಾರ ಶ್ರೀವತ್ಸ ಜೋಶಿ ಅವರು ಮಾತನಾಡಿದರು.

Advertisement

ಬರವಣಿಗೆಯಲ್ಲಿ ತಾನಗೆ ಹೇಗೆ ಆಸಕ್ತಿ ಹುಟ್ಟಿತು ಎಂಬುದರ ಕುರಿತಾಗಿ ಮಾತನಾಡುತ್ತ ಅವರು, ತಾನೇ ಬರೆದ ನನ್ನ ಬರವಣಿಗೆ ಬೆಳೆದ ಬಗ್ಗೆ ಎಂಬ ಬರಹವನ್ನು ನೆನಪಿಸಿಕೊಂಡರು. ನಾನು ಉಡುಪಿ  ಜಿಲ್ಲೆಯ ಮಾಳ ಎಂಬ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಕಾರಣ ಕನ್ನಡ, ತುಳು, ಮರಾಠಿ, ಕೊಂಕಣಿ ಭಾಷೆಗಳ ಪ್ರಭಾವದೊಂದಿಗೆ ಹೈಸ್ಕೂಲ್‌ನಲ್ಲಿ ಸಂಸ್ಕೃತ ಓದಿದ್ದರಿಂದ ಭಾಷೆಯ ಬಗ್ಗೆ ನೈಜ ಆಸಕ್ತಿಯನ್ನು ಹೊಂದಿ ಇಂದು ಒಂಭತ್ತು ಭಾಷೆಗಳನ್ನು ಆಸಕ್ತಿಯಿಂದ ಕಲಿತಿರುವೆ. ಹಿಂದಿನಿಂದಲೂ ಭಾಷೆಗಳನ್ನು ಕಲಿಯುವುದು, ಹೋಲಿಸಿ ನೋಡುವುದರಲ್ಲಿ ಆಸಕ್ತಿ ಇತ್ತು.  ಪ್ಲೇಯಿಂಗ್‌ ವಿದ್‌ ವರ್ಡ್ಸ್‌, (ಫ‌ನ್‌ ಎಟ್‌ ದಿ ಮೊಮೆಂಟೋ) ಸಹ ಇಂದಿಗೂ ಒಂದು ಇಷ್ಟದ ವಿಚಾರವಾಗಿದೆ. ಪ್ರತಿಯೊಂದು ಭಾಷೆಯ ಜ್ಞಾನವು ನಮ್ಮ ವ್ಯಕ್ತಿತ್ವದ ಮೇಲೆ, ಸ್ವಭಾವದ ಮೇಲೆ ಮತ್ತು ನಮ್ಮ ಬರವಣಿಗೆಯ ಮೇಲೆ ಪರಿಣಾಮ ಬೀರುವುದು. ಆಮೇಲೆ ಕೂಡು ಕುಟುಂಬದಲ್ಲಿ ಬೆಳೆದಿರುವ ಕಾರಣ ಪತ್ರ ವ್ಯವಹಾರವನ್ನು ಸಹ ಮನೆಯಲ್ಲಿ ತಂದೆಯವರು ನನ್ನಲ್ಲಿ ಬರೆಸುತ್ತಿದ್ದರು. ಪತ್ರ ಬರವಣಿಗೆ ನನಗೆ ಭದ್ರವಾದ ಅಡಿಪಾಯವನ್ನು ಹಾಕಿದೆ ಎಂದು ತಿಳಿಸಿದರು.

ನಾನೊಬ್ಬ ನಾನ್‌ ಫಿಕ್ಷನ್‌ ಓದುಗ :

ನಾನು ಕಾದಂಬರಿಗಳನ್ನು ಅಷ್ಟಾಗಿ ಓದಿದವನಲ್ಲ. ನನ್ನದು ನಾನ್‌- ಫಿಕ್ಷನ್‌. ಅಂದರೆ ಪ್ರಚಲಿತ ಅಥವಾ ಪ್ರಚಲಿತವಲ್ಲದ ವಿಷಯಗಳಲ್ಲಿ ಮಾಹಿತಿ ಮತ್ತು ರಂಜನೆಯ ಅಂಶಗಳನ್ನು ಬರೆಯುವವನು. ಊರಲ್ಲಿ ಉದಯವಾಣಿ ಓದುವುದು, ಆಕಾಶವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಪತ್ರಗಳನ್ನು ಬರೀತಾ ಇದ್ದೆ. ಅವುಗಳನ್ನು ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದೆ. ಆ ನಾಡಿಮಿಡಿತ ಸಂದರ್ಭ ಮತ್ತು ಪರಿಸ್ಥಿತಿಯಿಂದಾಗಿ ಪತ್ರಿಕೆಗೆ ಬರೆಯುವುದು ಒಂದು ಹವ್ಯಾಸವಾಯಿತು ಎಂದು ಪತ್ರಿಕೆಗೆ ಬರೆಯುವುದನ್ನು ಕಲಿತುಕೊಂಡ ಮತ್ತು ಬೆಳೆಸಿಕೊಂಡ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ಈಗ ಪತ್ರಿಕೆಯ ಸಂಪಾದಕರುನನಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಬರವಣಿಗೆಗೆ ಯಾವುದೇ ನಿರ್ಬಂಧ ಮಾಡುವುದಿಲ್ಲ. ಹಾಗಾಗಿ ನಾನು ಬರೆಯುವುದು ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿಲ್ಲ. ಸಂಗೀತ, ಆಹಾರ, ಕ್ರೀಡೆ, ಇತ್ಯಾದಿ ಸಂಥಿಂಗ್‌ ಎಬೌಟ್‌ ಎವ್ರಿಥಿಂಗ್‌ ಅಂತ ಬರೆಯುತ್ತಿರುವೆನು ಎಂದರು.

Advertisement

ಟಿಪ್ಪಣಿ ಸಂಗ್ರಹ  :

ಏನಾದರೂ ಓದಿದರೆ ಅದರ ಸ್ವಾರಸ್ಯ ಅಂಶಗಳನ್ನು ಹುಡುಕಿ ತೆಗೆಯುವುದು, ಹೊಸ ವಿಚಾರಗಳನ್ನು ಕಲಿತುಕೊಂಡು ಸಂಗ್ರಹಿಸುವುದು ಮತ್ತು ಆಸಕ್ತರೊಂದಿಗೆ  ಹಂಚಿಕೊಳ್ಳುವುದು, ಸೂಕ್ಷ್ಮವಾಗಿ ಅವಲೋಕಿ ಸುವುದು,  ಒಂದು ಹವ್ಯಾಸವಾಗಿ ಬೆಳೆದು ಬಂದಿತ್ತು. ನಮ್ಮ ಜೀವನಕ್ಕೆ ಹತ್ತಿರವಾಗುವ, ಜತೆಗೆ ನಮಗೆ ಹಿತವಾಗುವ ನೋಟ್ಸ್‌ಗಳನ್ನೂ ಮಾಡುತ್ತಿದ್ದೆ. ಎಲ್ಲ ಪಠ್ಯ ವಿಷಯಗಳ ನೋಟ್ಸ್‌ಗಳನ್ನು ಸಹ ಬರೆದುಕೊಂಡು ಇಡುವ ಹವ್ಯಾಸ ಬೆಳೆಸಿ ಕೊಂಡಿದ್ದೆ.

ನಾವು ಬರೆದದ್ದು ಪತ್ರಿಕೆಗಳಲ್ಲಿ ಪ್ರಕಟವಾಗುವ ಯೋಗ್ಯತೆ ಹೊಂದುವುದೇ ಎಂಬ ಗೊಂದಲ ಅನೇಕ ಬರಹಗಾರರಿಗೆ ಸ್ವಾಭಾವಿಕವಾಗಿ ಇರುವಂಥದ್ದು ಎಂಬ ಪ್ರಶಾಂತ ಸುಬ್ಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಜೋಶಿಯವರು ಒಂದು ಉದಾಹರಣೆ ನೀಡುತ್ತಾ ನೀವೆಲ್ಲ ನಿರಂತರ ಓದುಗರು. ಅಂದರೆ ಪ್ರಬುದ್ಧ ಅಥವಾ ಪ್ರಗಾಢವಾದ ಪುಸ್ತಕ ಓದುವ ಬಳಗದವರು ಬರೆದರೆ ಅದು ತೂಕ ಇಲ್ಲದ ಜೊಳ್ಳು ಆಗಿರುವುದಿಲ್ಲ. ನಿಮ್ಮ ಯೋಚನಾ ಶಕ್ತಿಯನ್ನು ಬಳಸಿ ಖಂಡಿತವಾಗಿಯೂ ನೀವು ಬರೆಯಬೇಕು. ಎಂದು ಪುಸ್ತಕ ಸಂಭ್ರಮ ಓದುಗರನ್ನು ಬರೆಯಲು  ಹುರಿದುಂಬಿಸಿದರು. ಬರಹಕ್ಕೆ ಓದಿಸಿಕೊಂಡು ಹೋಗುವ ಗುಣವಿರಬೇಕು.

ತಿಳಿಸು, ಕಲಿಸು, ಮನರಂಜಿಸು :

ಹೇಗೆ ಆಯುರ್ವೇದದಲ್ಲಿ ಮೂರು ಮಹತ್ತರವಾದ ವಾತ, ಪಿತ್ತ, ಕಫ‌ ಎಂಬ ವಿಷಯಗಳಿವೆಯೋ ಹಾಗೆಯೇ ಬರಹದಲ್ಲೂ ತಿಳಿಸು, ಕಲಿಸು, ಮನರಂಜಿಸು (inform,educate, entertain) ಎಂಬ  ಬಹುಮುಖ್ಯ ಅಂಶಗಳು ಅಡಗಿರಬೇಕು. ಹಾಗಿದ್ದಾಗ ಓದುಗರಿಗೆ ಅದು ಆಪ್ತವಾಗಿ ಕಾಣುವುದು. ಹಾಗೆಯೇ, ಅನುಭವ ಕಥನಗಳಲ್ಲಿ  ಓದಿಸಿಕೊಂಡು ಹೋಗುವ ಗುಣ ಜಾಸ್ತಿ ಇರುವುದು. ಅವುಗಳಿಗೆ ಒಳ್ಳೆಯ ಸ್ಪಂದನ ಸಹ ಸಿಗುತ್ತದೆ. ಓದುಗರು ನೀವು ಬರೆದಿರುವುದಕ್ಕೆ ಸಮಾನಾಂತರವಾದ ಅನುಭವವನ್ನು ಕಂಡಿರುತ್ತಾರೆ ಅಥವಾ ಕಾಣುತ್ತಿರುತ್ತಾರೆ. ನಿಮ್ಮ ಯಾವ ಬರಹವಾದರೂ ಸರಿ, ಆರಂಭದಿಂದ ಅಂತ್ಯದವರೆಗೂ ಸಲೀಸಾಗಿ ಓದಿಸಿಕೊಂಡು ಹೋಗುವಂತಿರಬೇಕು.

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ :  

ಡಾ| ಶಿವರುದ್ರಪ್ಪನವರ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ… ಎಂಬ ಕವನದ ಸಾಲಿನಂತೆ ನಿಮ್ಮ ಬರಹ ಪ್ರತಿಯೊಬ್ಬ ಓದುಗರಿಗೂ ಇಷ್ಟವಾಗಲೇಬೇಕೆಂದೇನಿಲ್ಲ. ಆದರೆ ಬರೆದ ಮೇಲೆ ಓದುಗರಿಗೆ ಉಪಯೋಗವಾಗುವ ಹಾಗೆ ಅಂತಹ ಲೇಖನಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ಸಲಹೆ ನೀಡಿದರು.

ಪತ್ರಿಕೆಯನ್ನು ಸಮಾಜದ ಎಲ್ಲ ಬಗೆಯ ಜನರು ಓದುತ್ತಾರೆ. ಎಲ್ಲರ ರುಚಿ ಒಂದೇ ಇರುವುದಿಲ್ಲ. ಬೇರೆ ಬೇರೆ ಓದುಗರ ದೃಷ್ಟಿಯನ್ನು ಜ್ಞಾಪಕದಲ್ಲಿಟ್ಟು ಬರೆಯಬೇಕು. ನಾವು ಬರೆದದ್ದು ಒಬ್ಬ ಗೃಹಿಣಿಗೆ, ವೈದ್ಯನಿಗೆ, ದಿನಗೂಲಿ ನೌಕರನಿಗೆ ..ಹೀಗೆ ಎಲ್ಲ ರೀತಿಯ ವ್ಯವಹಾರಿತರಿಗೆ ಇಷ್ಟವಾಗಬೇಕು. ಬರೆದು ಆದ ಮೇಲೆ ಕನಿಷ್ಠ 4-5 ಸಲ ಓದಬೇಕು. ಓದುಗರಿಗೆ ನೀವು ಬರೆದದ್ದು ಅವರ ತಲೆಯಲ್ಲಿ ಉಳಿಯುವಂತಿರಬೇಕು.

ನಾಡಿನ ಪ್ರಸಿದ್ಧ ಪತ್ರಿಕೆಗಳ ಎನ್‌ಆರ್‌ಐ ವಿಭಾಗ :

ಅಂತರ್ಜಾಲ ತಾಣದ ಓದುಗರಿಗೂ, ಮುದ್ರಿತ ಕಾಗದದಲ್ಲಿ ಒದುವವರಿಗೂ ವ್ಯತ್ಯಾಸವಿದೆ. ಆಕಡೆಗೆ  ಹೆಚ್ಚಿನ ಗಮನವಿರಬೇಕಾದ ಅಗತ್ಯತೆ ಇದೆ ಎಂದ ಶ್ರೀವತ್ಸ ಜೋಶಿ ಅವರು, ಬರೆಯುವಾಗ ಲೇಖನಕ್ಕೆ ಒಂದು ಸಮಗ್ರತೆ ಬರಬೇಕು ಎನ್ನುವ ಉದ್ದೇಶ ಇರಬೇಕು. ಇತ್ತೀಚಿಗೆ ಕನ್ನಡ ಪತ್ರಿಕೆಗಳಲ್ಲಿ ಎನ್‌ಆರ್‌ಐಗಳಿಗಾಗಿಯೇ ಪ್ರತ್ಯೇಕ ವಿಭಾಗವಿದೆ. ಇವು ಒಳ್ಳೆಯ ವೇದಿಕೆ ಆಗಿದೆ. ಅದನ್ನು ಬಳಸಿಕೊಳ್ಳಬೇಕು. ಅಂತೆಯೇ, ಒಂದೆರಡು ಬರಹಗಳು ಪ್ರಕಟವಾದರೆ ನಿಮಗೆ ಅದು ಬಹಳ ಪ್ರೋತ್ಸಾಹಿಕವಾಗಲಿದೆ ಎಂದೂ ಬರಹಾಸಕ್ತಿಯುಳ್ಳವರನ್ನು ಹುರಿದುಂಬಿಸಿದರು.

ಪುಸ್ತಕ-ಸಂವಾದ :

ಕಾರ್ಯಕ್ರಮದ ಮೊದಲ ಅಂಗವಾಗಿ ಕನ್ನಡದ ಹಿರಿಯ ಸಾಹಿತಿ ಡಾ| ಎಸ್‌.ಎಲ್‌. ಭೈರಪ್ಪ ಅವರ ಗ್ರಹಣ ಕಾದಂಬರಿಯ ಬಗ್ಗೆ ಪುಸ್ತಕ ಸಂವಾದ ನಡೆಯಿತು. ಸುಬ್ರಹ್ಮಣ್ಯ ಶಿಶಿಲ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಶಾಂತ್‌ ಸುಬ್ಬಣ್ಣ ಅವರು ಶ್ರೀವತ್ಸ ಜೋಶಿ ಅವರನ್ನು ಪರಿಚಯಿಸಿದರು.

ಕನ್ನಡ ಸಂಘ ಟೊರೊಂಟೊದ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಮಾತನಾಡಿ, ಟೊರೊಂಟೊದಲ್ಲಿರುವ ಎಲ್ಲ ಕನ್ನಡಪರ ಸಂಸ್ಥೆಗಳೊಂದಿಗೆ ಕೈಜೋಡಿಸಿ ಇಂತಹ ಒಂದು ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸುವುದು ಕನ್ನಡ ಸಂಘ ಟೊರೊಂಟೊದ ಆದ್ಯತೆಗಳÇÉೊಂದು. ಸ್ವಭಾವ ವೇದಿಕೆ ಮತ್ತು ಕನ್ನಡ ಸಂಘ ಟೊರೊಂಟೊವು ಜಂಟಿಯಾಗಿ ಪುಸ್ತಕ ಸಂಭ್ರಮ ಕಾರ್ಯಕ್ರಮದೊಂದಿಗೆ ಶ್ರೀವತ್ಸ ಜೋಶಿ ಅವರಂತ ಅಂಕಣಕಾರರಿಂದ ಉಪನ್ಯಾಸ ಏರ್ಪಡಿಸಿರುವುದಕ್ಕೆ ಸಂತಸವಾಗಿದೆ ಎಂದರು. ಜೋಶಿಯವರ ಸ್ವತ್ಛ ಭಾಷೆ ಅಭಿಯಾನ ಬರಹಗಳು ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ ಎಂದು ಜೋಶಿಯವರ ಕನ್ನಡ ತಿದ್ದುವ ಪ್ರಕ್ರಿಯೆಯನ್ನು ಶ್ಲಾ ಸಿದರು. ಕಾರ್ಯಕ್ರಮದ ಕೊನೆಯಲ್ಲಿ “ಪತ್ರಿಕೆಗೆ ಬರೆಯುವುದು ಹೇಗೆ?’ಎಂಬ 180 ಪುಟಗಳ ಪುಸ್ತಕದ ಪಿಡಿಎಫ್ ಅನ್ನು ವಿತರಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next