Advertisement

Rafah ಕಾರ್ಯಾಚರಣೆ ಅಂತ್ಯಗೊಳಿಸಲು ಇಸ್ರೇಲ್‌ಗೆ ಯುಎನ್ ನ್ಯಾಯಾಲಯದ ಆದೇಶ

08:39 PM May 24, 2024 | Team Udayavani |

ಹೇಗ್‌:  ದಕ್ಷಿಣ ಗಾಜಾದಲ್ಲಿ ತನ್ನ ನೆಲದ ಆಕ್ರಮಣವನ್ನು ತತ್ ಕ್ಷಣ ನಿಲ್ಲಿಸುವಂತೆ ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಉನ್ನತ ನ್ಯಾಯಾಲಯ ಆದೇಶಿಸಿದೆ.

Advertisement

ಇಸ್ರೇಲ್‌ ಆಕ್ರಮಣವನ್ನು ನಿಲ್ಲಿಸುವಂತೆ ಆದೇಶಿಸುವಂತೆ ದಕ್ಷಿಣ ಆಫ್ರಿಕಾ ವಿನಂತಿಸಿತ್ತು.  ಇಸ್ರೇಲ್ ಯುದ್ಧದ ವಿಚಾರದಲ್ಲಿ ಅದರ ನಡವಳಿಕೆ ಬದಲಿಸಲು ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಬೇಕು ಎಂದು ಯು.ಎನ್ ನ್ಯಾಯಾಲಯ ತೀರ್ಪು ನೀಡಿದೆ.

ರಾಫಾದಲ್ಲಿ ಉಗ್ರರ ಶಸ್ತ್ರಾಸ್ತ್ರಗಳು ಮತ್ತು ಸುರಂಗಗಳನ್ನು ನಾಶಪಡಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ. ಇದೆ ವೇಳೆ ಇಸ್ರೇಲಿ ಪಡೆಗಳು ಉತ್ತರ ಗಾಜಾದಲ್ಲಿ ಇನ್ನೂ ಮೂವರು ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿವೆ. ಶವಗಳು ಅಕ್ಟೋಬರ್ 7 ರಂದು ಉತ್ತರ ಗಾಜಾದಲ್ಲಿ ರಾತ್ರಿ ಕಾರ್ಯಾಚರಣೆಯಲ್ಲಿ ಹಮಾಸ್ ದಾಳಿ ನಡೆಸಿ ಒತ್ತೆಯಾಳುಗಳಾಗಿ ಇರಿಸಿದ್ದ ಬಲಿಪಶುಗಳದ್ದು ಎಂದು ಇಸ್ರೇಲಿ ಮಿಲಿಟರಿ ಶುಕ್ರವಾರ ಹೇಳಿದೆ. ಗಾಜಾದಲ್ಲಿ ಹಿಡಿದಿಟ್ಟಿರುವ ಉಳಿದ ಒತ್ತೆಯಾಳುಗಳ ವಿಚಾರದಲ್ಲಿ ಭಯವನ್ನು ಮತ್ತಷ್ಟು ಹೆಚ್ಚಿಸಿದೆ.

ಮೂವರು ಒತ್ತೆಯಾಳುಗಳನ್ನು ಫ್ರಾನ್ಸ್ ನ ಹನಾನ್ ಯಾಬ್ಲೋಂಕಾ(42 ) ಮೈಕೆಲ್ ನಿಸೆನ್ಬಾಮ್(59)ಮತ್ತು ಮೆಕ್ಸಿಕೋದ ಓರಿಯನ್ ಹೆರ್ನಾಂಡೆಜ್ ರಾಡೌಕ್ಸ್ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next