Advertisement

ಅಫ್ಘಾನ್ ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಉನ್ನತ ಕಮಾಂಡರ್ ಸೇರಿ ಮೂವರ ಹತ್ಯೆ

05:23 PM Aug 08, 2022 | Team Udayavani |

ಇಸ್ಲಾಮಾಬಾದ್ : ಪೂರ್ವ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಪಾಕಿಸ್ಥಾನದ ತೆಹ್ರೀಕ್-ಇ -ತಾಲಿಬಾನ್ (ಟಿಟಿಪಿ) ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಒಮರ್ ಖಾಲಿದ್ ಖೊರಾಸಾನಿ ಮತ್ತು ಇತರ ಮೂವರು ಉಗ್ರ ನಾಯಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಮಾಧ್ಯಮ ವರದಿ ಸೋಮವಾರ ತಿಳಿಸಿದೆ.

Advertisement

ಅಫ್ಘಾನಿಸ್ಥಾನದ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಖೊರಾಸಾನಿ ಸೇರಿದಂತೆ ಉಗ್ರರ ಗುಂಪಿನ ಹಿರಿಯ ಕಮಾಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಭಾನುವಾರ ನಿಗೂಢ ಸ್ಫೋಟಕ ಸಾಧನದಿಂದ ಗುರಿಪಡಿಸಲಾಗಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಉನ್ನತ ಉಗ್ರರು ಬಿರ್ಮಲ್ ಜಿಲ್ಲೆಯಲ್ಲಿ ಸಭೆಗಾಗಿ ಪ್ರಯಾಣಿಸುತ್ತಿದ್ದಾಗ ಅವರ ವಾಹನವು ರಸ್ತೆಬದಿಯ ಗಣಿಗೆ ಢಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ವಾಹನದಲ್ಲಿದ್ದ ಟಿಟಿಪಿ ಕಮಾಂಡರ್‌ಗಳಾದ ಅಬ್ದುಲ್ ವಾಲಿ ಮೊಹಮದ್, ಮುಫ್ತಿ ಹಸನ್ ಮತ್ತು ಹಫೀಜ್ ದೌಲತ್ ಖಾನ್ ಸಹ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಮೊಹಮಂಡ್ ಬುಡಕಟ್ಟು ಜಿಲ್ಲೆಗೆ ಸೇರಿದ ಖೊರಾಸಾನಿಯನ್ನು ಪಾಕಿಸ್ಥಾನದಾದ್ಯಂತ ಷರಿಯಾ ಕಾನೂನನ್ನು ಹೇರಲು ಬಯಸುವ ಉಗ್ರಗಾಮಿ ಗುಂಪು ಟಿಟಿಪಿಯ ಉನ್ನತ ಸದಸ್ಯ ಎಂದು ಪರಿಗಣಿಸಲಾಗಿದೆ . ಖೊರಾಸಾನಿ ಹುಡುಕಿ ಕೊಟ್ಟವರಿಗೆ ಭಾರಿ ಇನಾಮು ನೀಡುವುದಾಗಿ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next