Advertisement

Supreme court: ರಾಜಿ ಮಾಡಿಕೊಂಡರೂ ಲೈಂ*ಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ…

02:53 PM Nov 07, 2024 | Team Udayavani |

ನವದೆಹಲಿ: ಲೈಂ*ಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಕೊಂಡ ಕೂಡಲೇ ಲೈ*ಂಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ (Supreme court) ಗುರುವಾರ (ನ.07) ಆದೇಶ ನೀಡಿದೆ.

Advertisement

ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಲೈಂ*ಗಿಕ ಕಿರುಕುಳ ನೀಡಿದ್ದ ಶಿಕ್ಷಕನ ವಿರುದ್ಧ ದಾಖಲಾಗಿದ್ದ ಎಫ್‌ ಐಆರ್‌ ರದ್ದುಪಡಿಸುವಂತೆ ನೀಡಿದ್ದ ರಾಜಸ್ಥಾನ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಆತನ ವಿರುದ್ಧ‌ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ.

ಇದು 2022ರಲ್ಲಿ ರಾಜಸ್ಥಾನದ ಗಂಗಾಪುರ್‌ ನಗರದಲ್ಲಿ ನಡೆದ ಪ್ರಕರಣ. ತನಗೆ ಸರ್ಕಾರಿ ಶಾಲೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಳು. ಆ ಪ್ರಕಾರ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಸೇರಿದಂತೆ ಎಸ್‌ ಸಿ/ಎಸ್‌ ಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದರು.

ಏತನ್ಮಧ್ಯೆ ಆರೋಪಿ ಶಿಕ್ಷಕ ವಿಮಲ್‌ ಕುಮಾರ್‌ ಗುಪ್ತಾ, ಬಾಲಕಿಯ ಪೋಷಕರಿಂದ ಸ್ಟ್ಯಾಂಪ್‌ ಪೇಪರ್‌ ನಲ್ಲಿ ಹೇಳಿಕೆ ಪಡೆದುಕೊಂಡಿದ್ದ. “ ತಪ್ಪು ತಿಳಿವಳಿಕೆಯಿಂದಾಗಿ ನಾವು ದೂರು ದಾಖಲಿಸಿದ್ದು, ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದರು. ಈ ಹೇಳಿಕೆಯನ್ನು ಪೊಲೀಸರು ಒಪ್ಪಿ, ಎಫ್‌ ಐಆರ್‌ ರದ್ದು ಮಾಡಲು ವರದಿ ನೀಡಿದ್ದರು. ಆದರೆ ಬಾಲಕಿ ಪೋಷಕರ ಹೇಳಿಕೆಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಆರೋಪಿ ಶಿಕ್ಷಕ ಹೈಕೋರ್ಟ್‌ ಮೆಟ್ಟಿಲೇರಿದ್ದ. ಹೈಕೋರ್ಟ್‌, ಪೋಷಕರ ಹೇಳಿಕೆಯನ್ನು ಒಪ್ಪಿ, ಎಫ್‌ ಐಆರ್‌ ರದ್ದುಪಡಿಸುವಂತೆ ಆದೇಶ ನೀಡಿತ್ತು.

ಮತ್ತೊಂದೆಡೆ ಸಾಮಾಜಿಕ ಕಾರ್ಯಕರ್ತ ರಾಮ್‌ ಜೀ ಲಾಲ್‌ ಬೈರ್ವಾ ಅವರು ರಾಜಸ್ಥಾನ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Advertisement

ಸುಪ್ರೀಂಕೋರ್ಟ್‌ ಪೀಠದ ಜಸ್ಟೀಸ್‌ ಸಿ.ಟಿ.ರವಿಕುಮಾರ್‌ ಮತ್ತು ಜಸ್ಟೀಸ್‌ ಪಿ.ವಿ.ಸಂಜಯ್‌ ಕುಮಾರ್‌, ರಾಜಸ್ಥಾನ ಹೈಕೋರ್ಟ್‌ ನೀಡಿರುವ ಆದೇಶವನ್ನು ವಜಾಗೊಳಿಸಿ, ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next