Advertisement

ಮುನಾವರ್ ಫಾರುಕಿ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಟ್ರೆಂಡಿಂಗ್ ಆದ ಜಾಕಿರ್ ಖಾನ್

12:00 PM Nov 29, 2021 | Team Udayavani |

ಬೆಂಗಳೂರು: ಬೆಂಗಳೂರು ಪೊಲೀಸರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮಕ್ಕೆ ಭಾನುವಾರ ತಡೆ ಒಡ್ಡಿದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಭಾರೀ ಚರ್ಚೆಯಾಗುತ್ತಿದ್ದು, ಈ ನಡುವೆ ಝಾಕಿರ್ ಖಾನ್ ಎನ್ನುವ ಇನ್ನೊಬ್ಬ ಕಲಾವಿದ ಟ್ರೆಂಡಿಂಗ್ ಆಗುತ್ತಿದ್ದಾರೆ.

Advertisement

ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತಂದ ಆರೋಪದಲ್ಲಿ ಮುನಾವರ್ ಫಾರುಕಿ ಕಾರ್ಯಕ್ರಮ ರದ್ದು ಮಾಡಲಾಗಿತ್ತು, ಆ ಬಳಿಕ ಸಾಮಾಜಿಕ ತಾಣಗಳಲ್ಲಿ ಹಲವರು ಪೋಲೀಸರ ಕ್ರಮವನ್ನು ಬೆಂಬಲಿಸಿದರೆ, ಹಲವರು ಮುಸ್ಲಿಂ ಆಗಿರುವುದರಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ಇನ್ನೊಬ್ಬ ಮುಸ್ಲಿಂ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಝಾಕಿರ್ ಖಾನ್ ಟ್ರೆಂಡಿಂಗ್ ಆಗುತ್ತಿದ್ದಾರೆ. ಹಲವಾರು ಝಾಕಿರ್ ಖಾನ್ ಅವರು ಉತ್ತಮ ಹಾಸ್ಯ ಕಲಾವಿದ ಎಲ್ಲರೂ ಅವರ ಹಾಸ್ಯವನ್ನು ಸ್ವೀಕರಿಸುತ್ತಾರೆ.ಕಾರಣ, ಅವರೊಬ್ಬ ಉತ್ತಮ ಹಾಸ್ಯಗಾರ ಎಂದು ಬರೆದಿದ್ದಾರೆ.

ಭಾರತದ ಟಾಪ್ ಹಾಸ್ಯನಟ ಜಾಕಿರ್ ಖಾನ್, ಭಾರತದ ಟಾಪ್ ನಟರು,ಸಲ್ಮಾನ್ ಶಾರುಖ್, ಅಮೀರ್ ಖಾನ್, ಭಾರತದ ಅಗ್ರ ವೇಗದ ಬೌಲರ್ ಜಹೀರ್ ಖಾನ್, ಧರ್ಮದ ಕಾರಣದಿಂದ ಯಾರೂ ತಮ್ಮ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಜನರು ಅಸಹಿಷ್ಣುತೆ ಹೊಂದಿದ್ದರೆ, ಈ ವ್ಯಕ್ತಿಗಳು ಎಂದಿಗೂ ಅಗ್ರಸ್ಥಾನದಲ್ಲಿರುತ್ತಿರಲಿಲ್ಲ.ಆದ್ದರಿಂದ ನಿಮ್ಮ ಪ್ರಚಾರವನ್ನು ನಿಲ್ಲಿಸಿ ಎಂದು ಹಲವರು ಬೆಂಗಳೂರು ಪೊಲೀಸರ ಕ್ರಮ ವನ್ನು ಬೆಂಬಲಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next