Advertisement
ಬಜಾಜ್ ಪ್ಲಾಟಿನಂಬಜಾಜ್ ಪ್ಲಾಟಿನಂ ಕಡಿಮೆ ದರ, ಅಧಿಕ ಮೈಲೇಜ್, ಸುದೀರ್ಘ ಬಾಳಿಕೆಯ ಎಂಜಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿತ್ತು. ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಇದು ಸುಮಾರು 90-100 ಕಿ.ಮೀ. ಮೈಲೇಜ್ ಕೊಡುತ್ತದೆ. ಇದು 102 ಸಿಸಿ ಎಂಜಿನ್, 8.1 ಬಿಎಚ್‌ಪಿ ಸಾಮರ್ಥ್ಯ, 7,500 ಆರ್‌ಪಿಎಂ ಹೊಂದಿದೆ.
“ಹೀರೋ ಸ್ಪೆಂಡರ್ ಐ ಸ್ಮಾರ್ಟ್’ನ ಇಂಧನ ದಕ್ಷತೆ ಉತ್ತಮವಾಗಿದ್ದು, ಒಂದು ಲೀಟರ್‌ಗೆ 92 ಮೈಲೇಜ್ ನೀಡುತ್ತದೆ. ಏರ್ ಕೂಲ್ಡ್ ಆಗಿದ್ದು, ಸಿಂಗಲ್ ಸಿಲಿಂಡರ್ ಇರುವ ಬೈಕ್ ಇದಾಗಿದ್ದು, 110 ಸಿಸಿ ಮೈಲೇಜ್, 8.24ಪಿಎಸ್ ಸಾಮರ್ಥ್ಯ ಹೊಂದಿದೆ. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಹೊಸ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಕಿಕ್‌ಸ್ಟಾರ್ಟ್, ಎಲೆಕ್ಟ್ರಿಕ್, ಕಿಕ್ ಸ್ಟಾರ್ಟ್ ಸೇರಿದಂತೆ ಸುಮಾರು 5ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಲಭ್ಯ. 109.7 ಸಾಮರ್ಥ್ಯದ ಸಿಸಿ ಹೊಂದಿದ್ದು, 7,000 ಆರ್‌ಪಿಎಂನೊಂದಿಗೆ 8.28 ಬಿಎಚ್‌ಪಿ, ಕಾಬ್ಯುìಯರೇಟರ್ ತಂತ್ರಜ್ಞಾನ, 86 ಕಿ.ಮೀ. ಮೈಲೇಜ್ ನಿರೀಕ್ಷಿಸಬಹುದು.
Related Articles
ಹೋಂಡಾ ಡ್ರೀಮ್ ಗ್ರಾಹಕರ ಡ್ರೀಮ್ ಬೈಕಾಗಿದೆ. ಸುಮಾರು 4 ಬಣ್ಣಗಳಲ್ಲಿ ಲಭ್ಯವಿದ್ದು, 110 ಸಿಸಿ ಸಾಮರ್ಥ್ಯದ ಎಂಜಿನ್, 8.25 ಬಿಎಚ್‌ಪಿ-7500 ಆರ್‌ಪಿಂ ಬಲ ಹೊಂದಿದೆ. ಸಂಸ್ಥೆಯೇ ಹೇಳುವಂತೆ 74 ಕಿ.ಮೀ. ಮೈಲೇಜ್ ಹೊಂದಿದೆ.
Advertisement
ಯಮಹಾ ಸಲುಟೋ ಆರ್ಎಕ್ಸ್ಯಮಹಾದ ಸಲುಟೋ ಆರ್‌ಎಕ್ಸ್ 110 ಸಿಸಿ ಬೈಕಾಗಿದೆ. 82 ಕಿ.ಮೀ. ಮೈಲೇಜ್ ಹೊಂದಿದ್ದು, 7 ಬಿಎಚ್‌ಪಿ /7000 ಆರ್‌ಪಿಎಂ ಸಾಮರ್ಥ್ಯ ಇದಕ್ಕಿದೆ. ಇದೇ ಮಾದರಿಯಲ್ಲಿ ಅಧಿಕ ಸಿಸಿಯ
ಬೈಕುಗಳೂ ಇವೆ.