ನವದೆಹಲಿ:ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್(ಎಸ್ ಯುವಿ) ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಜನವರಿ ತಿಂಗಳಿನಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಟಾಪ್ 5 ಎಸ್ ಯುವಿಗಳ ವಿವರ ಇಲ್ಲಿದೆ…
ಇದನ್ನೂ ಓದಿ:ಗ್ರ್ಯಾಮಿ ಅವಾರ್ಡ್ ಗೆದ್ದ ಮೊದಲ ತೃತೀಯ ಲಿಂಗಿ: ಸಂತಸದಿಂದ ಭಾವುಕರಾದ ಗಾಯಕಿ
ಎಸ್ ಯುವಿ ಹೈ-ಸೆಟ್ ಹೊಂದಿರುವ ಪ್ರೀಮಿಯಮ್ ವಾಹನವಾಗಿ ಮಾರ್ಪಟ್ಟಿದೆ. ಇದು ರಸ್ತೆಯ ನೋಟದ ಉತ್ತಮ ಕಮಾಂಡಿಂಗ್ ನೀಡುವ ಮೂಲಕ ಹೆಚ್ಚು ಆಪ್ತವಾಗಿದೆ. 2023ರಲ್ಲಿ ಭಾರತದಲ್ಲಿ ನೂತನ ಶ್ರೇಣಿಯ ಎಸ್ ಯುವಿ ಅತ್ಯಧಿಕ ಮಾರಾಟ ಕಂಡಿದ್ದು, ಇದರಲ್ಲಿ ಐದು ಪ್ರಮುಖ ಎಸ್ ಯುವಿ ಹೆಸರು ಹೀಗಿದೆ…
ಜನವರಿಯಲ್ಲಿ ಟಾಟಾ ನೆಕ್ಸಾನ್ 15,567 ಎಸ್ ಯುವಿ ಮಾರಾಟವಾಗಿದೆ. ಹುಂಡೈ ಕ್ರೆಟಾ 15,037 ಕಾರುಗಳು ಮಾರಾಟವಾಗಿದ್ದು, ಮಾರುತಿ ಸುಜುಕಿ ಬ್ರೆಜ್ಜಾ 14,359 ಯೂನಿಟ್ಸ್ ಮಾರಾಟವಾಗಿದೆ. ಟಾಟಾ Punch-12,006 ಮತ್ತು ಹುಂಡೈ ವೆನ್ಯೂ 10,738 ಎಸ್ ಯುವಿ ಸೇಲ್ಸ್ ಆಗಿರುವುದಾಗಿ ವರದಿ ತಿಳಿಸಿದೆ.
ಸುರಕ್ಷತೆ ಮತ್ತು ವೈಶಿಷ್ಟ್ಯತೆಗಳಲ್ಲಿ ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನೆಕ್ಸಾನ್ ಎಸ್ ಯುವಿ ಭಾರತದಲ್ಲಿ ಅತೀ ಹೆಚ್ಚು(ಜನವರಿ ತಿಂಗಳು) ಮಾರಾಟವಾಗಿದೆ. ಕಳೆದ ವರ್ಷ ಜನವರಿಯಲ್ಲಿ 13,816 ಟಾಟಾ ನೆಕ್ಸಾನ್ ಎಸ್ ಯುವಿ ಮಾರಾಟವಾಗಿತ್ತು. ಹುಂಡೈ ಕ್ರೆಟಾ ಕೂಡಾ ಅತೀ ದುಬಾರಿ ಮಧ್ಯಮ ಗಾತ್ರದ ಎಸ್ ಯುವಿ ಆಗಿದ್ದರೂ ಕೂಡಾ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿರುವುದಾಗಿ ವರದಿ ವಿವರಿಸಿದೆ.