Advertisement

ಅಡುಗೆಯ ಈ 10 ತಪ್ಪುಗಳೇ ತೂಕದ ಹೆಚ್ಚಳಕ್ಕೆ ಕಾರಣ!

04:10 PM Apr 14, 2018 | |

ಅಡುಗೆ ಒಂದು ಕಲೆ ಮತ್ತು ವಿಜ್ಞಾನದ ಪರಿಪೂರ್ಣ ಮಿಶ್ರಣ. ವಿಶ್ವದ ನಂಬಿಕೆಯ ಪ್ರಕಾರ ಮನೆಯಲ್ಲಿ ತಯಾರಿಸಿದ ಆಹಾರವು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಏಕೆಂದರೆ ಆರೋಗ್ಯ ವೃದ್ಧಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಮನೆಯ ಆಹಾರದಲ್ಲಿ ತುಂಬಿರುತ್ತದೆ.

Advertisement

ನಿಮಗೆ ತಿಳಿದು ಅಚ್ಚರಿ ಆಗಬಹುದು ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರವು ಕೂಡ ನಮಗೆ ಅಪಾಯಕಾರಿಯಾಗಬಹುದು ಮತ್ತು ಅದರ ಹಿಂದಿನ ಕಾರಣವೆನೆಂದರೆ ಅಡುಗೆ ಮಾಡುವ ವಿಧಾನ ಅಥವಾ ನಾವು ಆಗಾಗ್ಗೆ ಬಳಸುವ ಕೆಲವೊಂದು ಆಹಾರಗಳು!.
ಅಡುಗೆಯಲ್ಲಿನ ಈ ಹತ್ತು ತಪ್ಪುಗಳೇ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ…

1. ಹೆಚ್ಚುವರಿ ಎಣ್ಣೆಯನ್ನು ಬಳಸುವುದು: ಅಡುಗೆ ಎಣ್ಣೆಗಳು ಆಹಾರವನ್ನು ಸಿದ್ಧಪಡಿಸುವ ಅವಿಭಾಜ್ಯ ಭಾಗವಾಗಿದೆ.ನಾವು ಉಪಯೋಗಿಸುವ ಎಣ್ಣೆ ಯ ಪ್ರಮಾಣ ಮತ್ತು ಗುಣಮಟ್ಟ ತುಂಬಾ ಮುಖ್ಯವಾದದ್ದು. ಅಧ್ಯಯನದ ಪ್ರಕಾರ ಚಯಾಪಚಯ ಕ್ರಿಯೆಗೆ ಮತ್ತು ಕೊಬ್ಬಿನ ಅಂಶ ಕಡಿತಗೊಳಿಸುವುದರಲ್ಲಿ ಎಲ್ಲಾ ಎಣ್ಣೆಗಳು ಉಪಯೋಗಕಾರಿ ಆದರೆ ನಿಯಂತ್ರಿತ ರೀತಿಯಲ್ಲಿ ಸೇವಿಸಿದಾಗ ಮಾತ್ರ.

2. ಸಿದ್ಧ ತಯಾರಿತ ಸಾಸ್ ಮತ್ತು ಡ್ರೆಸ್ಸಿಂಗ್ ಬಳಕೆ: ಬಾಟಲಿ/ಪ್ಲಾಸ್ಟಿಕ್ನಲ್ಲಿ ದೊರೆಯುವ ಸಿದ್ಧ  ತಯಾರಿತ ಸಾಸ್ ಮತ್ತು ಡ್ರೆಸ್ಸಿಂಗ್ಗಳಲ್ಲಿ ಸಂರಕ್ಷಕಗಳನ್ನು ಉಪಯೋಗಿಸುವುದರಿಂದ ದೇಹದ ಕೊಬ್ಬಿನ ಅಂಶ ಉತ್ತೇಜಿಸುತ್ತದೆ ಮತ್ತು ಅಪಾಯಕರವಾಗಿರುತ್ತದೆ .ಪೌಷ್ಠಿಕಾಂಶಗಳ ಆಧಾರಿತ ಮನೆಯಲ್ಲಿ ಸಿದ್ಧಪಡಿಸಿದ ಸಾಸ್ ಮತ್ತು ಡ್ರೆಸ್ಸಿಂಗ್ಗಳನ್ನು  ಉಪಯೋಗಿಸುವುದು ಆರೋಗ್ಯಕರ.

3. ಪೋಷಕಾಂಶಗಳ ಮೇಲೆ ಪರಿಮಳ ಮತ್ತು ರುಚಿ ಹೆಚ್ಚಿಸುವ ಸಾಮಾಗ್ರಿಗಳ ಪ್ರಭಾವ:  ಉಪ್ಪು ಮತ್ತು ಸಕ್ಕರೆಯು ಪರಸ್ಪರ ಬಲಪಡಿಸುವ ಸಂಯುಕ್ತಗಳಾಗಿದ್ದು ಕೊಬ್ಬಿನ ಪ್ರಮಾಣ ಹೆಚ್ಚಿಸುತ್ತದೆ ಎರಡರ ಮಿತವಾದ ಬಳಕೆ ಆರೋಗ್ಯಕರ . ಪರಿಮಳ ಹೆಚ್ಚಿಸುವ ಸಾಮಾಗ್ರಿಗಳ ಬಳಕೆಯ ಬದಲು ಪೋಷಕಾಂಶಗಳತ್ತ ಗಮನ ಹರಿಸುವುದು ಉತ್ತಮ.

Advertisement

4. ಆಹಾರ ಹೆಚ್ಚು ಹುರಿಯುವುದು(ಕರಿಯುವುದು): ಆಹಾರವನ್ನು ಅತಿಯಾಗಿ ಹುರಿಯುವುದರಿಂದ .ಪೌಷ್ಠಿಕಾಂಶ ಕಳೆದುಕೊಳ್ಳುತ್ತದೆ ಮತ್ತು ವಿಷಕಾರಿಯಾಗುತ್ತದೆ.

5. ಆಹಾರವನ್ನು ಅತಿಯಾಗಿ ಬೇಯಿಸುವುದು:  ಹೆಚ್ಚು ಬೇಯಿಸಿದ ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಬೇಯಿಸಿದ ತರಕಾರಿಗಳು ಹೆಚ್ಚು ರುಚಿಯಾಗಿ ಆರೋಗ್ಯಕರವಾಗಿ ಹಾಗೂ ಪೌಷ್ಠಿಕಾಂಶವಾಗಿರುತ್ತದೆ.

6. ಆಹಾರವನ್ನು ದೀರ್ಘಕಾಲದವರೆಗೆ ಸುಡುವುದು: ಅಧ್ಯಯನದ ಪ್ರಕಾರ ಸುಟ್ಟ ಮಾಂಸ ಸೇವಿಸುವುದು ಅಥವಾ ಮಾಂಸ ಸುಡುವಿಕೆಯ ಇತರ ವಿಧಾನಗಳಿಂದ ಪೋಸ್ಟ್ ಮೆನೊಪೊಸ್(ಸ್ತನ ಕ್ಯಾನ್ಸರ್) 47% ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ಸುಟ್ಟ ಆಹಾರದಲ್ಲಿ ಕೊಬ್ಬಿನ ಅಂಶ ಇಲ್ಲ ಮತ್ತು ಸುರಕ್ಷಿತವಾಗಿದೆ ಎನ್ನುವ ಬಗ್ಗೆ ಪುನ: ಆಲೋಚಿಸಿ.

7. ಮೇಲೋಗರಗಳಿಗೆ ಮಿತಿಮೀರಿದ ಬಳಕೆ: ಚೀಸ್ನಿಂದ ಸಾಸ್ವರೆಗೆ ಅನಾರೋಗ್ಯಕರ ಟೋಪಿಂಗ್ಸ್ಗಳ ಅತಿಯಾದ ಬಳಕೆಯಿಂದ ಆಹಾರವು ಆಕರ್ಷಿತವಾಗುದೇನೋ ನಿಜ ಜೊತೆಗೆ ಅನಾರೋಗ್ಯವಾಗುತ್ತದೆ.

8.ಅಡುಗೆ  ಮಾಡುವಾಗ ತಿನ್ನುವುದು: ನಿಮ್ಮ ತಾಯಿ ಅಥವಾ ಅಜ್ಜಿ ಧಾರ್ಮಿಕ ದೃಷ್ಟಿಕೋನದಿಂದ ಅಡುಗೆ ಮಧ್ಯದಲ್ಲಿ ತಿನ್ನುವ ಅಭ್ಯಾಸವನ್ನು ಅನೇಕ ಬಾರಿ ವಿರೋಧಿಸಿರಬಹುದು. ತಿನ್ನುವಾಗ ಮೆದುಳಿಗೆ ಕಳಿಸುವ ಇಂದ್ರೀಯಗಳ ಎಚ್ಚರಿಕೆಯನ್ನು ಗೊಂದಲಗೊಳಿಸುತ್ತದೆ. ಹಾಗಾಗಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ತೂಕ ಹೆಚ್ಚುತ್ತದೆ.

9.ಪ್ಲಾಸ್ಟಿಕ್ ಕಂಟೇನರ್ನಲ್ಲಿ ಅಡುಗೆ: ಮೈಕ್ರೋವೇವ್ನಲ್ಲಿ ಪ್ಲಾಸ್ಟಿಕ್ ಕಂಟೇನರ್ನ್ನು ಉಪಯೋಗಿಸುವುದರಿಂದ ಅಪಾಯಕಾರಿ ರಾಸಾಯನಿಕಗಳಿಗೆ ನಿಮ್ಮನ್ನು ಪರಿಚಯಿಸುವಿರಿ ಮೈಕ್ರೋವೇವ್ ಆಹಾರವನ್ನು ತಪ್ಪಿಸಲು ಸೂಚಿಸಲಾಗಿದೆ.ತಪ್ಪಿಸಲು ಅಸಾಧ್ಯವಾದಲ್ಲಿ ಎಫ್ಡಿಎ ಅನುಮೋದಿತ ಕಂಟೇನರ್ ಅನ್ನೇ ಬಳಸಿ.

10. ಕುರುಡು ಪಾಕ ವಿಧಾನ ಅನುಸರಣೆ: ಪ್ರತಿಯೊಂದು ವ್ಯಕ್ತಿಗೆ ಅಡುಗೆ ಮಾಡುವಾಗ ಸಾಮಾನ್ಯ ಜ್ಞಾನ ಇರಬೇಕು. ಬೇಕಿಂಗ್ ವಿಷಯದಲ್ಲಿ ಕೆಳಗಿನ ಕ್ರಮಗಳು ಮುಖ್ಯವಾದದ್ದು  ಚೀಸ್, ಕ್ರೀಮ್ ಮತ್ತು ಎಣ್ಣೆ ಕುರುಡು ಬಳಕೆ ತೂಕ ಹೆಚ್ಚಳದ ಮುರ್ಖತನ. ಹಾಗಾಗಿ ಯಾವಾಗಲೂ ನಿಮ್ಮ  ಪೌಷ್ಠಿಕಾಂಶದ ಅಗತ್ಯಗಳಿಗೆ ಅನುಗುಣವಾಗಿ ಪಾಕವಿಧಾನವನ್ನು ಟ್ವಿಸ್ಟ್ ಮಾಡಲು ಪ್ರಯತ್ನಿಸಿ.
 

Advertisement

Udayavani is now on Telegram. Click here to join our channel and stay updated with the latest news.

Next