Advertisement
ಟೂಲ್ ಕಿಟ್ ಹಂಚಿಕೊಂಡ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನವಾಗಿರುವ ದಿಶಾ ರವಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
Related Articles
Advertisement
ಇದಕ್ಕೆ ಪ್ರತಿವಾದ ಮಂಡಿಸಿರುವ ದೆಹಲಿ ಪೊಲೀಸರ ಪರ ವಕೀಲರು, ‘ಭಾರತದ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ಹೆಣೆಯಲಾದ ಜಾಗತಿಕ ಪಿತೂರಿಯ ಭಾಗವಾಗಿ ದಿಶಾ ರವಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಜಾಮೀನು ನೀಡುವುದು ಸಮಂಜಸವಲ್ಲ’ ಡಾಕ್ಯುಮೆಂಟ್ನ ಸೂತ್ರೀಕರಣ ಮತ್ತು ಪ್ರಸಾರದಲ್ಲಿ ದಿಶಾ ರವಿ ಪ್ರಮುಖ ಸಂಚು ಹೂಡಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ ಮತ್ತು ಅವರು ಖಲಿಸ್ತಾನಿ ಪರ ಗುಂಪು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ನೊಂದಿಗೆ “ಭಾರತದ ವಿರುದ್ಧ ಅಸಮಾಧಾನವನ್ನು ಹರಡಲು” ಸಹಕರಿಸಿದರು ಮತ್ತು ಥನ್ ಬರ್ಗ್ ಅವರೊಂದಿಗೆ ಡಾಕ್ಯುಮೆಂಟ್ ಹಂಚಿಕೊಂಡಿದ್ದಾರೆ. ಟೆಲಿಗ್ರಾಮ್ ಆ್ಯಪ್ ಮೂಲಕ ರವಿ ಟೂಲ್ ಕಿಟ್ ನನ್ನು ಥನ್ ಬರ್ಗ್ ಗೆ ಕಳುಹಿಸಿದ್ದಾರೆ ಮತ್ತು ಎಂದು ದೆಹಲಿ ಪೊಲೀಸರು ಹೇಳಿದ್ದರು.
ಇಂದು, ನ್ಯಾಯಾಲಯಕ್ಕೆ ಹಾಜರಾಗುವ ಮುನ್ನಾ, ಸಹ-ಆರೋಪಿಗಳಾದ ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ಅವರನ್ನು ಭೇಟಿಯಾಗಲು ದಿಶಾ ರವಿ ಅವರನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಕಚೇರಿಗೆ ಕರೆದೊಯ್ದಿದ್ದರು. ಜಾಕೋಬ್ ಮತ್ತು ಮುಲುಕ್ ಈ ಹಿಂದೆ ಬಾಂಬೆ ಹೈಕೋರ್ಟ್ ನಿಂದ ಟ್ರಾನ್ಸಿಟ್ ಜಾಮೀನು ಪಡೆದಿದ್ದು, ಬಂಧನದಿಂದ ರಕ್ಷಣೆ ನೀಡಿದ್ದರು.
ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್ಕಿಟ್’ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವಾಗಿತ್ತು.
ಈಗ ಪಟಿಯಾಲ ಹೌಸ್ ನ್ಯಾಯಾಲಯ ದಿಶಾ ರವಿ ಅವರಿಗೆ ತಲಾ ಒಂದು ಲಕ್ಷ ಎರಡು ಶೂರಿಟಿಗಳೊಂದಿಗೆ ಜಾಮೀನು ನೀಡಿದೆ ಎಂದು ದಿಶಾ ಪರ ವಕೀಲ ಸಿದ್ದಾರ್ಥ ಅಗರ್ ವಾಲ್ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.
ಓದಿ : ದೈನಂದಿನ ವೆಚ್ಚ ಭರಿಸಲು ಪರದಾಟ! ಎಪಿಎಂಸಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣ