Advertisement

ಬೆಂಗಳೂರು: ಮಹಿಳೆಯ ಎದುರೇ ಕ್ಯಾಬ್‌ ಚಾಲಕನಿಂದ ಹಸ್ತಮೈಥುನ

12:10 PM Dec 04, 2021 | Team Udayavani |

ಬೆಂಗಳೂರು: ಒಲಾ ಕ್ಯಾಬ್‌ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಸಂತ್ರಸ್ತೆ ಸಾಮಾಜಿಕ ಜಾಲ ತಾಣ ಟ್ವಿಟರ್‌ ಮೂಲಕ ಘಟನೆಯನ್ನು ವಿವರಿಸಿದ್ದಾರೆ.

“ಗುರುವಾರ ತಡರಾತ್ರಿ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಲು ಒಲಾ ಕ್ಯಾಬ್‌ ಬುಕ್‌ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಅದನ್ನು ಗಮನಿಸಿದೆ. ತಕ್ಷಣ ಆತ ಮುಚ್ಚಿಕೊಂಡು ಏನು ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ. ಈ ವೇಳೆ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್‌ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೂಂದು ಕ್ಯಾಬ್‌ನಲ್ಲಿ ಮನೆಗೆ ತೆರಳಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳೆಯರು ಸುರಕ್ಷಿತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‌ಗಳಲ್ಲಿ ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್‌ ಮಾಡಲು ಲೈವ್‌ ಲೊಕೇಶನ್‌ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಒಲಾ ಕಂಪನಿಗೆ ದೂರು ನೀಡಿದ್ದೆ. ಒಲಾ ಕಂಪನಿ ಚಾಲಕನನ್ನು ಕೆಲಸದಿಂದ ತೆಗೆದಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ ಎಂದು ಉಲ್ಲೇಖೀಸಿದ್ದಾರೆ.

ಇದನ್ನೂ ಓದಿ :ಉದ್ಘಾಟನೆಗೆ ತೆಂಗಿನಕಾಯಿ ಒಡೆದಾಗ ಬಿರುಕು ಬಿಟ್ಟ ಹೊಸ ರಸ್ತೆ !

Advertisement

ಆರೋಪಿ ಬಂಧನಕ್ಕೆ ಕ್ರಮ

ಟ್ವಿಟ್‌ರ್‌ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಈ ಘಟನೆ ಬಗ್ಗೆ ಕ್ಷಮೆ ಇರಲಿ. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸಭ್ಯ  ವರ್ತನೆ ತೋರಿದ ಕ್ಯಾಬ್‌ ಚಾಲಕನ ಬಂಧನಕ್ಕೆ ಕೇಂದ್ರ ವಿಭಾಗದ ಡಿಸಿಪಿಗಳಿಗೆ ಸೂಚಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next