Advertisement

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಪ್ರತಿಭಟನೆ

05:07 PM May 19, 2022 | Team Udayavani |

ಲಕ್ಷ್ಮೇಶ್ವರ: ಎಸ್‌ಟಿ, ಎಸ್‌ಟಿ ಜನಾಂಗದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಂದು ಲಕ್ಷ್ಮೇಶ್ವರದಲ್ಲಿ ನಡೆಯುವ ತಾಲೂಕು ಮಟ್ಟದ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ತಳವಾರ ಮನವಿ ಮಾಡಿದರು.

Advertisement

ಬುಧವಾರ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ವಾಲ್ಮೀಕಿ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಎಸ್‌ಟಿ, ಎಸ್‌ಟಿ ಜನಾಂಗದ ಮೀಸ ಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳು ಕೈಗೊಂಡ ಪ್ರತಿಭಟನಾ ಧರಣಿಗೆ ನೂರು ದಿನ ಕಳೆಯುತ್ತಿದೆ. ಹಾಗಾಗಿ, ರಾಜ್ಯಾದ್ಯಂತ ದಲಿತ ಮತ್ತು ವಾಲ್ಮೀಕಿ ಸಮಾಜ ಬಾಂಧವರು ಮೇ 20ರಂದು ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಲಕ್ಷ್ಮೇಶ್ವರದಲ್ಲೂ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದರು.

ಎಸ್‌ಸಿ ಎಸ್‌ಟಿ ಜನಾಂಗದ ಎಲ್ಲ ಶೋಷಿತರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಎಲ್ಲ ರಂಗಗಳಲ್ಲೂ ಹಿಂದುಳಿದಿದ್ದಾರೆ. ಈ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಮೀಸಲಾತಿ ಹೆಚ್ಚಳ ಪ್ರಮುಖ ಅಸ್ತ್ರವಾಗಿದೆ. ಜನಾಂಗದ ನ್ಯಾಯಯುತ ಮೀಸಲಾತಿ ಹೆಚ್ಚಳದ ಬೇಡಿಕೆಗಾಗಿ ಮೇ 20 ರಂದು ಕೈಗೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಎಸ್‌ಸಿ, ಎಸ್‌ಸಿ ಜನಾಂಗದ ಎಲ್ಲ ಉಪ ಜಾತಿಯವರೂ ಪಾಲ್ಗೊಳ್ಳಬೇಕು. ಅಂದು ಸೋಮೇಶ್ವರ ದೇವಸ್ಥಾನದಿಂದ ಹೊರಡುವ ಪ್ರತಿಭಟನಾ ಮೆರವಣಿಗೆ ಮುಖ್ಯ ಬಜಾರ್‌ ರಸ್ತೆಯ ಮೂಲಕ ಸಾಗಿ ಶಿಗ್ಲಿ ನಾಕಾದಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಡಲಿದೆ. ಈ ವೇಳೆ ತಹಶೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ವಾಲ್ಮೀಕಿ ಸಮಾಜದ ಹಿರಿಯರು, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಎನ್‌. ರಾಟಿ ಮಾತನಾಡಿ, ಎಸ್‌ಸಿ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು. ಈ ಬೇಡಿಕೆಗಾಗಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ಹಮ್ಮಿಕೊಂಡಿರುವ ಪ್ರತಿಭಟನೆ 100ನೇ ದಿನಕ್ಕೆ ಕಾಲಿಡಲಿದೆ ಮತ್ತು ಅಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಈ ಹೋರಾಟಕ್ಕೆ ಬೆಂಬಲಾರ್ಥವಾಗಿ ಲಕ್ಷ್ಮೇಶ್ವರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದ ಎಲ್ಲರೂ ಪಾಲ್ಗೊಳ್ಳಬೇಕೆಂದರು.

ಈ ವೇಳೆ ಫಕ್ಕೀರೇಶ ಮ್ಯಾಟೆಣ್ಣವರ, ಪ್ರಕಾಶ ಬೆಂತೂರ, ರಾಜಶೇಖರ ದೊಡ್ಡಮನಿ, ಕೃಷ್ಣಪ್ಪ ಹುಲಿಕಟ್ಟಿ, ನಾಗರಾಜ ದೊಡ್ಡಮನಿ, ಗಾಳೆಪ್ಪ ಹರಿಜನ, ಹನುಮಂತಪ್ಪ ಹರಿಜನ, ಗುಡ್ಡಪ್ಪ ಮತ್ತೂರ, ಶಿವು ಕರಡಿ, ಭೀಮಪ್ಪ ಯಂಗಾಡಿ, ಚನ್ನಪ್ಪಬೆಟಸೂರ, ಮಲಕಾಜಪ್ಪ ನಾಗಣ್ಣವರ, ಬಸಣ್ಣ ಕುಕನೂರ, ರಮೇಶ ದೊಡ್ಡಮನಿ, ಹನುಮಂತ ಜಾಲಿಮರದ ಸೇರಿ ದಲಿತ ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next