Advertisement

ಅಂಜನಾದ್ರಿ ಬೆಟ್ಟದಲ್ಲಿ ನಾಳೆ ಯೋಗ ಶಿಬಿರ: ವಚನಾನಂದ ಶ್ರೀ

10:23 AM Apr 15, 2022 | Team Udayavani |

ಕೊಪ್ಪಳ: ಜಗತ್ತಿಗೆ ಯೋಗವನ್ನು ಪರಿಚಯಿಸಲು ದೇಶದಲ್ಲಿನ 75 ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಯೋಗ ಶಿಬಿರ ಆಯೋಜನೆ ಮಾಡುವ ಉದ್ದೇಶವಿದ್ದು, ಅದರ ಭಾಗವಾಗಿ ನಾಡಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಏ.16ರಂದು ಹನುಮ ಜಯಂತಿ ಪ್ರಯುಕ್ತ ಯೋಗ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಹಂಪಿ, ವಿಜಯಪುರದ ಗೋಲಗುಂಬಜ್‌, ಮೈಸೂರು ಅರಮನೆ ಸೇರಿ 75 ತಾಣಗಳಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಇತರೆ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಇರಲಿವೆ. ಅಂಜನಾದ್ರಿ ಬೆಟ್ಟದಿಂದ ಚಾಲನೆ ನೀಡಲಿದ್ದು, ಏ.16ರ ಬೆಳಗ್ಗೆ 6ರಿಂದ 7 ಗಂಟೆವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಈ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದರು.

ಇನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸರ್ಕಾರ ಹಲವು ಕಾರ್ಯಕ್ರಮ ನಡೆಸುತ್ತಿದೆ. ಹರಿಹರ ಪೀಠದಲ್ಲಿ ಏ.23, 24ರಂದು ಸರ್ಕಾರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಂಚಮಸಾಲಿ ಸಮುದಾಯದ ಅನೇಕ ಮಹನೀಯರ ಹೋರಾಡಿದ್ದಾರೆ. ಕೆಲವರನ್ನು ಇತಿಹಾಸ ಗುರುತಿಸಿದರೆ, ಇನ್ನೂ ಕೆಲವರು ಮರೆಯಾಗಿದ್ದಾರೆ. ಅಂತಹವರ ಬಗ್ಗೆ ಸಮಾಜಕ್ಕೆ ತಿಳಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನೂತನ ಶಿಕ್ಷಣ ನೀತಿ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ ಎಂದರು.

ಏ.24ರಂದು ಬೆಳಗ್ಗೆ ಹರ ಮಾಲೆ ಕಾರ್ಯಕ್ರಮ ನಡೆಯಲಿದೆ. ಯುವಕರು ಸೇರಿ ಎಲ್ಲ ವಯೋ ಮಾನ ದವರು ಹರಮಾಲೆ ಧರಿಸಿ ಜಪ ಮಾಡಲಿ ದ್ದಾರೆ. ಕೋವಿಡ್‌ನ‌ಲ್ಲಿ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅಂತಹವರಿಗೆ ನೆರವಾಗಲೆಂದು ಕೌಶಲ ಅಭಿವೃದ್ಧಿ, ಬೃಹತ್‌ ಕೈಗಾರಿಕೆ ಇಲಾಖೆ ಸಹ ಯೋಗದಲ್ಲಿ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಂಡಿದ್ದೇವೆ. ನೂರಾರು ಕಂಪನಿಗಳು ಭಾಗಿಯಾಗಲಿದ್ದು, ಯುವ ಕರು ಸದುಪಯೋಗ ಪಡೆದುಕೊಳ್ಳಬೇಕಿದೆ. ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮಾಹಿತಿಗಾಗಿ 8971749636, 8095774 802 ಸಂಖ್ಯೆ ಸಂಪರ್ಕಿಸುವಂತೆ ತಿಳಿಸಿದರು. ಪಂಚಮಸಾಲಿ ಸಮುದಾಯ ಮುಖಂಡರಾದ ಬಸನಗೌಡ ತೊಂಡಿಹಾಳ, ಕರಿಯಪ್ಪ ಮೇಟಿ, ಕೆ.ಜಿ. ಪಲ್ಯದ್‌, ಶಿವಪ್ಪ ಯಲಬುರ್ಗಾ, ಕಳಕನಗೌಡ ಕಲ್ಲೂರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next