Advertisement

ನಾಳೆ ವಿಶ್ವ ಮೂತ್ರಕೋಶ ದಿನ ಮ್ಯಾರಥಾನ್‌-2019

06:46 AM Mar 13, 2019 | Team Udayavani |

ಬೆಂಗಳೂರು: ನಗರದ ಕೆ.ಆರ್‌.ಪುರಂನ ಶ್ರೀ ಲಕ್ಷ್ಮೀ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ವತಿಯಿಂದ ಮಾ.14 ರಂದು ವಿಶ್ವ ಮೂತ್ರಕೋಶ ದಿನ ಮ್ಯಾರಥಾನ್‌-2019 ಹಮ್ಮಿಕೊಳ್ಳಲಾಗಿದೆ. ಮೂತ್ರಕೋಶದ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮ್ಯಾರಥಾನ್‌ ಕೆ.ಆರ್‌. ಪುರಂ ಓಲ್ಡ್‌ ಎಕ್ಸ್‌ಟೆನ್ಶನ್‌ನಿಂದ ಆರಂಭಗೊಂಡು ಹ್ಯಾಂಗಿಂಗ್‌ ಬ್ರಿಡ್ಜ್ ಯುಟರ್ನ್ವರೆಗೆ ಸಾಗಿ ಆಸ್ಪತ್ರೆ ಸೇರಲಿದೆ.

Advertisement

ಕಾರ್ಯಕ್ರಮದಲ್ಲಿ ಶಾಸಕ ಬೈರತಿ ಬಸವರಾಜ್‌, ಆಸ್ಪತ್ರೆ ಚೇರ್ಮನ್‌ ಡಾ. ಸಾಂಬಶಿವ, ವ್ಯವಸ್ಥಾಪಕ ನಿರ್ದೇಶಕ ಜಯಮಾಲಾ ಸಾಂಬಶಿವ ಭಾಗವಹಿಸಲಿದ್ದು, ಕೆ.ಆರ್‌.ಪುರಂ ಠಾಣೆ ಇನ್ಸಪೆಕ್ಟರ್‌ ಜಯರಾಜ್‌ ವಿಶೇಷ ಅತಿಥಿಗಳಾಗಲಿದ್ದಾರೆ. ಮ್ಯಾರಥಾನ್‌ನಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಹಾಸ್ಪಿಟಲ್‌ ಚೇರ್ಮನ್‌ ಡಾ. ಸಾಂಬಶಿವ ತಿಳಿಸಿದ್ದಾರೆ.

ಡಯಾಲಿಸಿಸ್‌ ಕೇಂದ್ರ ಉದ್ಘಾಟನೆ: ಇದೇ ಸಂದರ್ಭದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಯಾಲಿಸಿಸ್‌ ಕೇಂದ್ರದ ಉದ್ಘಾಟನೆಯಾಗಲಿದ್ದು, ಇದರ ವಿಶೇಷವಾಗಿ ಮೊದಲು ನೋಂದಣಿ ಮಾಡಿಸಿದ 50 ಮಂದಿ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಮಾಡಲಾಗುವುದು. ಹೆಚ್ಚಿನ ಮಾಹಿತಿ ಮೊ.9901711716ಕ್ಕೆ ಕರೆ ಮಾಡಿ ತಿಳಿದುಕೊಳ್ಳಬಹುದು ಎಂದು ಆಸ್ಪತ್ರೆ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next