Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಾಧಿಪತಿ ಪ್ರೊ. ಎಂ.ಆರ್. ದೊರೆಸ್ವಾಮಿ, ಈ ಬಾರಿ ಒಟ್ಟಾರೆ ಐವರಿಗೆ ಪಿಎಚ್.ಡಿ, ಒಬ್ಬರಿಗೆ ಎಂ.ಟೆಕ್ ಸಂಶೋಧನಾ ಪದವಿ, ರ್‍ಯಾಂಕ್ ಪಡೆದ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 59 ವಿದ್ಯಾರ್ಥಿಗಳಿಗೆ ರಜತ ಪದಕ ಒಳಗೊಂಡಂತೆ 2168 ಪ್ರಷರ್ಸ್ (ಪ್ರಸಕ್ತ ಶೈಕ್ಷಣಿಕ ಸಾಲಿನವರು) ಸೇರಿ 2249 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೋಮವಾರ ಬೆಳಗ್ಗೆ 11.30ಕ್ಕೆ ಪಿಇಎಸ್ ವಿವಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ.
Related Articles
Advertisement
ಇಲ್ಲಿಯವರೆಗೂ 114 ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿವೆ. ಇನ್ನೂ 71 ಸಂಸ್ಥೆಗಳು ಸಂದರ್ಶನ ನಡೆಸಲು ವಿವಿಯನ್ನು ಸಂಪರ್ಕಿಸಿವೆ ಎಂದು ವಿವಿ ಕುಲಸಚಿವ ಡಾ.ಕೆ.ಎಸ್. ಶ್ರೀಧರ್ ಮಾಹಿತಿ ನೀಡಿದರು. ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಸ್ಟಾರ್ಟ್ ಅಪ್ ಕಂಪನಿಗಳನ್ನು ನಿರ್ಮಾಣ ಮಾ ಡುವ ಹಂಬಲವಿರುವ ಯುವಕರಿಗೆ “ಪೆಸು ವೆಂ ಚರ್ ಲ್ಯಾಬ್ಸ್’ ಹೆಸರಿನಲ್ಲಿ ಪ್ರೋತ್ಸಾಹ ನೀಡುತ್ತಿದೆ.
ಹೊಸ ಕಂಪನಿಗಳನ್ನು ನಿರ್ಮಿಸು ವವರಿಗಾಗಿ ಅರ್ಜಿ ಕರೆದಿದ್ದು, ಈ ವರೆಗೆ 200 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 10 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್ ಅಪ್ ಕಂಪನಿಗಳನ್ನು ಆರಂಭಿಸಲು ಸಹಕಾರ ಮತ್ತು ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾ ಗುತ್ತಿದೆ ಎಂದು “ಪೆಸು ವೆಂಚರ್ ಲ್ಯಾಬ್ಸ್’ ಮುಖ್ಯಸ್ಥರಾಗಿರುವ ಸುರೇಶ್ ನರಸಿಂಹ ತಿಳಿಸಿದರು. ಕುಲಪತಿ ಡಾ.ಜೆ. ಸೂರ್ಯಪ್ರಸಾದ್ ಇದ್ದರು.