Advertisement
ವಿವಿಯ ಪ್ರಥಮ ಘಟಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಬರು ತ್ತಿಲ್ಲ, ಘಟಿಕೋತ್ಸವ ಭಾಷಣವನ್ನು ದೆಹಲಿಯ ಅಖೀಲ ಭಾರ ತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬು ಮಾಡಲಿದ್ದಾರೆ ಎಂದು ತಿಳಿಸಿದರು. ಉತ್ತರ ವಿವಿ 2018-19ರಲ್ಲಿ ಆರಂಭವಾದ ನಂತರ ನಡೆಯುತ್ತಿರುವ ಮೊದಲ ಘಟಿಕೋತ್ಸವವಾಗಿದ್ದು, ಕೋವಿಡ್ ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಈಗಾಗಲೇ ತಡವಾಗಿದೆ ಎಂದು ತಿಳಿಸಿದರು.
Related Articles
Advertisement
ಕೋವಿಡ್ ನಿಯಮ ಪಾಲಿಸಿ ವೇದಿಕೆ ಮುಂಭಾಗ 700 ಮಂದಿಗೆ ಅವಕಾಶ ಕಲ್ಪಿಸಲಾಗಿದೆ, ಇನ್ನು ಹೆಚ್ಚಿನ ಮಂದಿ ಬಂದರೆ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಮತ್ತೂಂದು ಸಭಾಂಗಣ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಚಿನ್ನದ ಪದಕ ಗುಣಮಟ್ಟದ ಕುರಿತು ಖಾತ್ರಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ, 2 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿಯ ಮೆಡಲ್ ಆಗಿದೆ.
ವಿವಿಯಲ್ಲಿ ಯಾವುದೇ ನೇಮಕಾತಿ ಅಕ್ರಮ ನಡೆದಿಲ್ಲ, ಸಂಚಿತ ವೇತನ ನೀಡುವ ಕುರಿತು ಪ್ರಸ್ತಾಪವೂ ಇಲ್ಲ, ಅದು ನೀಡಲು ನಿಯಮಗಳಡಿ ಸಾಧ್ಯವಿಲ್ಲ, ವಿವಿಯಲ್ಲಿ 87 ಬೋಧಕೇತರ, 55 ಬೋಧಕ ಸಿಬ್ಬಂದಿ ತಾತ್ಕಾಲಿಕ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ವಿವಿಯಲ್ಲಿ ಪಾರದರ್ಶಕತೆ ಕಾಪಾಡಲು ಇನ್ನು ಮುಂದೆ ಸಿಂಡಿಕೇಟ್ ಮೀಟಿಂಗ್ ಮಾಹಿತಿ ವೆಬ್ ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:- ಮಾನಸಿಕ ಆರೋಗ್ಯ ಸುಧಾರಣೆಗಾಗಿ ಅನಿರ್ದಿಷ್ಟಾವಧಿ ವಿಶ್ರಾಂತಿ ಮೊರೆ ಹೋದ ಟಿಮ್ ಪೇನ್
ರಾಜ್ಯದ ಇತರೆಲ್ಲಾ ವಿವಿಗಳಲ್ಲೂ ಅತಿಥಿ ಬೋಧಕ ಸಿಬ್ಬಂದಿಗೆ 51 ಸಾವಿರ ವೇತನ ನೀಡುತ್ತಿದ್ದು, ಉತ್ತರ ವಿವಿಯಲ್ಲಿ ಮಾತ್ರ ಏಕೆ ಅನ್ಯಾಯ ಮಾಡಲಾಗಿದೆ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಈ ಸಂಬಂಧ ವಿವಿ ಸಿಂಡಿಕೇಟ್ ಸಭೆ 51 ಸಾವಿರ ರೂ. ವೇತನಕ್ಕೆ ಅನುಮೋದನೆ ನೀಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಾಯಲಾಗುತ್ತಿದ್ದು, ಶೀಘ್ರ ಮಂಜೂರಾತಿ ಸಿಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ವಿವಿ ಉಪ ರಿಜಿಸ್ಟ್ರಾರ್ ಶಿವಣ್ಣ ಇದ್ದರು.
ವಿದ್ಯಾರ್ಥಿನಿಯರೇ ಮೇಲುಗೈ
ಸ್ನಾತಕೋತ್ತರ ವಿಭಾಗದಲ್ಲಿ ಶೇ.60 ವಿದ್ಯಾರ್ಥಿನಿಯರೇ ಮೇಲುಗೈ ಸಾಧಿ ಸಿದ್ದಾರೆ, ಈ ಸಾಲಿನ ಪ್ರಥಮ ಘಟಿಕೋತ್ಸವದಲ್ಲಿ 2,644 ಮಂದಿಗೆ ಪದವಿ ಪ್ರದಾನವಾಗಲಿದ್ದು, ಅದರಲ್ಲಿ 1,118 ವಿದ್ಯಾರ್ಥಿಗಳು, 1,526 ವಿದ್ಯಾರ್ಥಿನಿಯರಿದ್ದಾರೆ ಮತ್ತು ಪ್ರಥಮ ರ್‍ಯಾಂಕ್ ಸಾಧಕರಲ್ಲೂ 6 ವಿದ್ಯಾರ್ಥಿಗಳು, 21 ವಿದ್ಯಾರ್ಥಿನಿಯರಿದ್ದು, ಸಾಧನೆಯಲ್ಲೂ ವಿದ್ಯಾರ್ಥಿನಿಯರೇ ಮುಂದಿದ್ದಾರೆ.
ಸ್ನಾತಕೋತ್ತರ ಪದವಿ ಪ್ರಥಮ ರ್‍ಯಾಂಕ್ ಸಾಧಕರು
ಕೋಲಾರ: ಬೆಂಗಳೂರು ಉತ್ತರ ವಿವಿ ಆರಂಭವಾದ ನಂತರ ಮೊದಲ ಘಟಿಕೊತ್ಸವ ನ.27ರಂದು ನಡೆಯುತ್ತಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಥಮ ರ್‍ಯಾಂಕ್ ಗಳಿಸಿದ 27 ಮಂದಿಗೆ ಪದವಿ ಪ್ರಧಾನ ಮಾಡಲಿದ್ದಾರೆ. ಪ್ರಥಮ ರ್‍ಯಾಂಕ್ ಸಾಧಕರೆಂದರೆ ಎಂಎ ಕನ್ನಡ ದಲ್ಲಿ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೈ.ವಿ.ಮಮತಾ, ಎಂಎ ಇಂಗ್ಲಿಷ್‌ನಲ್ಲಿ ಕೆ.ಆರ್.ಪುರಂನ ಬೆಂಗಳೂರು ಸಿಟಿ ಕಾಲೇಜಿನ ಎಂ.ಎಸ್.ಲತಾ, ಎಂಎ ಅರ್ಥಶಾಸ್ತ್ರದಲ್ಲಿ ಕೆ.ಆರ್. ಪುರಂನ ಎಸ್.ಇ.ಎ. ಕಾಲೇಜಿನ ಯಾನಾನಿಕಾ ಮಂಜುಮ್‌ದಾರ್, ಎಂಎ ಇತಿಹಾಸದಲ್ಲಿ ಚಿಂತಾಮಣಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎಲ್.ಮಂಜುಳಾ ಸಾಧಕರಾಗಿದ್ದಾರೆ.
ಎಂಎ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಕೇಂದ್ರದ ಎ.ಎನ್.ಚಂದ್ರಶೇಖರ, ಎಂಎ ಪತ್ರಿಕೋದ್ಯಮದಲ್ಲಿ ಉತ್ತರ ವಿವಿಯ ಎಂ.ಗೌತಮ್, ಮಾಸ್ಟರ್ ಆಫ್ ಸೋಸಿಯಲ್ ವರ್ಕ್‌ನಲ್ಲಿ ವಿವಿಯ ಎನ್.ಶಿಲ್ಪಾ, ಎಂಕಾಂ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಆಸ್ಮಾ ಪ್ರಥಮ ರ್‍ಯಾಂಕ್ ಸಾಧಕರಾಗಿದ್ದಾರೆ.
ಎಂಬಿಎನಲ್ಲಿ ಬೆಂಗಳೂರಿನ ಸಿಎಂಆರ್ ಸೆಂಟರ್ ನ ಜಿ.ಹರ್ಷಿತಾ, ಗ್ರಂಥಾಲಯ ವಿಜ್ಞಾನದಲ್ಲಿ ವಿವಿಯ ಕೆ.ವಿ.ಅಶ್ವಿನಿ, ಎಂಎಸ್ಸಿ ಆಡಿಯೋಲಾಜಿ ಯಲ್ಲಿ ಬೆಂಗಳೂರಿನ ಲಿಂಗರಾಜಪುರಂನ ಡಾ.ಎಸ್. ಆರ್.ಚಂದ್ರಶೇಖರ್ ಇನ್ಸಿಟ್ಯೂಟ್‌ನ ಕೆ.ಕೆ. ಜುಲಿಯಾ, ಎಂಎಸ್‌ಸಿ ಸಸ್ಯಶಾಸ್ತ್ರದಲ್ಲಿ ವಿವಿಯ ವಿ. ಪ್ರವೀಣ್ ಕುಮಾರ್, ಸೂಕ್ಷ್ಮ ಜೀವಶಾಸ್ತ್ರದಲ್ಲಿ ಸರ್ವಜ್ಞ ನಗರದ ಸಾಸರಿ ಮಾನವಿತಾರಾಣಿ, ಎಂಎಸ್ಸಿ ಗಣಕಶಾಸ್ತ್ರದಲ್ಲಿ ವಿವಿಯ ಕೆ.ವಿ.ಬಿಂದು, ಎಂಎಸ್ಸಿ ಫ್ಯಾಷನ್ ಟಪರಿಲ್ ಡಿಸೈನ್‌ನಲ್ಲಿ ಕೆ.ಆರ್.ಪುರಂನ ಆರ್ಮಿ ಇನ್ಸಿಟ್ಯೂಟ್‌ನ ಆರ್.ಮೀನಾಕ್ಷಿ ಸಾಧಕರಾಗಿದ್ದಾರೆ.
ಎಂಎಸ್ಸಿ ಸ್ಪೀಚ್ ಲಾಂಗ್‌ವೇಜ್ ಪೆಥಾಲಜಿಯಲ್ಲಿ ಲಿಂಗರಾಜಪುರಂನ ಡಾ.ಎಸ್.ಆರ್.ಚಂದ್ರಶೇಖರ್ ಇನ್ಸಿಟ್ಯೂಟ್‌ನ ಸೈಯದ್ ಆತೀಪ್ ಉರ್ ರೆಹ ಮಾನ್, ಎಂಎಸ್ಸಿ ಮೈಕ್ರೋ ಬಯಾಲಜಿ ಎಸ್. ಮೋನಿಕಾ, ಎಂಎಸ್ಸಿ ಗಣಿತಶಾಸ್ತ್ರದಲ್ಲಿ ವಿವಿಯ ಶಹನಾಜ್, ಎಂಎಸ್ಸಿ ಭೌತಶಾಸ್ತ್ರದಲ್ಲಿ ವಿವಿಯ ಜಿ. ಆರ್.ಮಮತಾ, ಎಂಎಸ್ಸಿ ಪಿಸಿಯಾಲಜಿಯಲ್ಲಿ ಬೆಂಗಳೂರಿನ ಮೆಥೋಡಿಸ್ಟ್ ಕಾಲೇಜಿನ ಸಿಂದೂರಾ ಲಕ್ಷ್ಮೀಕಾಂತ್, ಎಂಎಸ್ಸಿ ಪ್ರಾಣಿಶಾಸ್ತ್ರದಲ್ಲಿ ಚಿಕ್ಕಬಳ್ಳಾಪುರದ ಬಿಜಿಎಸ್ ಕಾಲೇಜಿನ ಎಂ.ಸೌಂದರ್ಯ, ಎಂಎಸ್ಸಿ ಕೌನ್ಸಿಲಿಂಗ್ ಫಿಸಿಯಾಲಜಿಯಲ್ಲಿ ಬೆಂಗಳೂ ರಿನ ಮೆಥೋಡಿಸ್ಟ್ ಕಾಲೇಜಿನ ನೂರೈನ್ ಫಾತೀಮಾ ಸಾಧಕರಾಗಿದ್ದಾರೆ. ಉಳಿದಂತೆ ಬ್ಯಾಚಲರ್ ಆಫ್ ಎಜುಕೇಷನ್‌ನಲ್ಲಿ ಇಂದಿರಾನಗರದ ಮಿರಂಡಾ ಕಾಲೇಜಿನ ಟಿ.ಕೆ.ರೇಮ್ಯಾ ಬಿಪಿಎಡ್‌ನಲ್ಲಿ ಚಿಕ್ಕಬಳ್ಳಾ ಪುರದ ಕೆ.ವೆಂಕಟಪತೆಪ್ಪ ಕಾಲೇಜಿನ ಪಿ.ಎ.ದಾರಕೇಶ್ ಪ್ರಥಮ ರ್‍ಯಾಂಕ್ ಗಳಿಸಿರುವ ಸಾಧಕರಾಗಿದ್ದಾರೆ.