Advertisement

ನಾಳೆ “ಗೀತ ಗೋವಿಂದಂ’ಆಡಿಯೋ ರಿಲೀಸ್

12:57 PM Jul 28, 2018 | |

ಪರಶುರಾಮ್ ನಿರ್ದೇಶನದ “ಗೀತ ಗೋವಿಂದಂ’ ಚಿತ್ರದ ಫ‌ಸ್ಟ್‌ಲುಕ್‌, ಮೊದಲ ಹಾಡು, ಮತ್ತು ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡಿತ್ತು. ಅಲ್ಲದೇ “ಇಂಕೇಮ್‌ ಇಂಕೇಮ್‌ ಕಾವಾಲೇ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೆಂಡ್‌ ಸೃಷ್ಟಿಸಿದ್ದು, ಇದೀಗ ಚಿತ್ರತಂಡ  ಚಿತ್ರದ ಆಡಿಯೋ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಮಾಡಿದೆ.

Advertisement

ಇದೇ ತಿಂಗಳ 29 ರಂದು ಭಾನುವಾರ ಹೈದರಾಬಾದ್‌ನಲ್ಲಿ “ಗೀತ ಗೋವಿಂದಂ’ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಸ್ಟೈಲಿಶ್‌ ಸಾರ್‌ ಅಲ್ಲು ಅರ್ಜುನ್‌ ಆಡಿಯೋ ಬಿಡುಗಡೆ ಮಾಡಲಿದ್ದಾರೆ. ಹಾಗೂ ಟಾಲಿವುಡ್‌ನ ಇತರ ಕಲಾವಿದರು ಮತ್ತು ಗಣ್ಯರು ಕೂಡಾ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಇನ್ನು  “ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರವನ್ನು ಗೀತಾ ಆರ್ಟ್ಸ್ 2 ಬ್ಯಾನರ್‌ ಅಡಿ ಬನ್ನಿ ವಾಸ್‌ ನಿರ್ಮಿಸಿದ್ದು, ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ. ಸಿನಿಮಾ ಆಗಸ್ಟ್‌ 15 ರಂದು ತೆರೆಗೆ ಬರಲು ಸಜ್ಜಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next