Advertisement

ನಾಳೆ ಸಿಇಟಿ, ಪಿಯುಸಿ ಫ‌ಲಿತಾಂಶ

07:49 PM Sep 19, 2021 | Team Udayavani |

ಬೆಂಗಳೂರು : ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಫ‌ಲಿತಾಂಶ ಸೆ.20ರ ಸಂಜೆ ಹೊರಬೀಳಲಿದೆ.

Advertisement

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಿಇಟಿ ಫ‌ಲಿತಾಂಶ ಪ್ರಕಟ ಮಾಡಲಿದ್ದಾರೆ. ಅಭ್ಯರ್ಥಿಗಳು https://cetonline.karnataka.gov.in/kea/ ಲಿಂಕ್‌ ಬಳಸಿ ಸಂಜೆ 4 ಗಂಟೆಯ ನಂತರ ಫ‌ಲಿತಾಂಶ ಪಡೆಯಬಹುದಾಗಿದೆ.

ಆಗಸ್ಟ್‌ 28ರಿಂದ 30ರ ವರೆಗೆ ಸಿಇಟಿ ಪರೀಕ್ಷೆ ನಡೆದಿದ್ದು, 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸಿಇಟಿ ಬರೆದಿದ್ದು, ಎಲ್ಲರ ಫ‌ಲಿತಾಂಶವೂ ಪ್ರಕಟವಾಗಲಿದೆ. ಅಭ್ಯರ್ಥಿಗಳ ರ್‍ಯಾಂಕ್‌ಗೆ ಅನುಗುಣವಾಗಿ ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಆಯುಷ್‌ ಹಾಗೂ ಡಿ-ಫಾರ್ಮಾ, ಬಿ-ಫಾರ್ಮಾ ಕೋರ್ಸ್‌ಗಳಿಗೆ ಸರ್ಕಾರಿ ಕೋಟದಡಿ ಸೀಟು ಪಡೆಯಲಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಪರೀಕ್ಷೆ ನಡೆದು 20 ದಿನದೊಳಗೆ ಫ‌ಲಿತಾಂಶ ನೀಡುತ್ತಿರುವುದು ದಾಖಲೆಯ ವಿಷಯವಾಗಿದೆ.

ಇದನ್ನೂ ಓದಿ:ಎನ್‌ಬಿಎಫ್ ಸಿಗಳಿಗೂ ಆಧಾರ್‌ ಆಧರಿತ ಇ-ಕೆವೈಸಿ ಹೊಂದಲು ಅವಕಾಶ

ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟ
ದ್ವಿತೀಯ ಪಿಯುಸಿ ಹೊಸ ಹಾಗೂ ಪುನರಾವರ್ತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್‌ ಮಾಡಲಾಗಿತ್ತು. ಆದರೂ, ಫ‌ಲಿತಾಂಶದಿಂದ ತೃಪ್ತಿಕಾಣದ ಕೆಲವು ವಿದ್ಯಾರ್ಥಿಗಳು ಫ‌ಲಿತಾಂಶ ಹಿಂದಿರುಗಿಸಿ, ಪರೀಕ್ಷೆ ಬರೆದಿದ್ದರು. ಇದೇ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆ ಖಾಸಗಿ ಅಭ್ಯರ್ಥಿಗಳಿಗೂ ಪರೀಕ್ಷೆ ನಡೆಸಲಾಗಿತ್ತು. ಈ ಎಲ್ಲ ವಿದ್ಯಾರ್ಥಿಗಳ ಫ‌ಲಿತಾಂಶ ಸೆ.20ರ ಬೆಳಗ್ಗೆ ಪ್ರಕಟವಾಗಲಿದೆ.

Advertisement

592 ಹೊಸ ಅಭ್ಯರ್ಥಿಗಳು, 351 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 17470 ಖಾಸಗಿ ಅಭ್ಯರ್ಥಿಗಳು ಸೇರಿ 18413 ಅಭ್ಯರ್ಥಿಗಳ ಫ‌ಲಿತಾಂಶವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ಬಿಡುಗಡೆ ಮಾಡಲಿದ್ದು, ಅಭ್ಯರ್ಥಿಗಳು www.karresults.nic.in ಲಿಂಕ್‌ ಬಳಸಿ ಫ‌ಲಿತಾಂಶ ನೋಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next