Advertisement

ನಾಳೆ ಲಲಿತಾ ಪಂಚಮಿ ಮಹೋತ್ಸವ

02:10 PM Oct 12, 2018 | |

ಒಡಿಯೂರು: ಇಲ್ಲಿನ ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ. 13ರಂದು ಶ್ರೀ ಲಲಿತಾ ಪಂಚಮಿ ಮಹೋತ್ಸವವು ನಡೆಯಲಿದೆ. ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ, ವೇ| ಮೂ| ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ.

Advertisement

ಬೆಳಗ್ಗೆ 10ಕ್ಕೆ ಶ್ರೀಗಳ ಹಾಗೂ ಸಾಧ್ವಿ ಮಾತಾನಂದಮಯೀ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌, ಯಕ್ಷಗಾನ ಕಲಾವಿದ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್‌, ಚಲನಚಿತ್ರ ಸಂಗೀತ ನಿರ್ದೇಶಕ ಎ.ಕೆ. ವಿಜಯ ಕೋಕಿಲ, ಯಕ್ಷಗಾನ ಕಲಾವಿದೆ, ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಹಾಗೂ ನಾಟ್ಯ ವಿದುಷಿ ಸುನೀತಾ ಜಯಂತ್‌ ಉಳ್ಳಾಲ್‌ ಅವರನ್ನು ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಸಮ್ಮಾನಿಸಲಾಗುವುದು.

ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ಸಂಪನ್ನಗೊಳ್ಳ ಲಿದೆ. ಅಪರಾಹ್ನ 3ರಿಂದ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದವರಿಂದ ವೃದ್ಧಾಂಜನೇಯ ತಾಳಮದ್ದಳೆ ಜರಗಲಿದೆ. ಸಂಜೆ ಸಾರ್ವಜನಿಕ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ, ಮಹಾಪೂಜೆ ಮಹಾಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next