ಹೊಸದಿಲ್ಲಿ: ಟೊಮ್ಯಾಟೋ ಬೆಲೆ ಇಳಿಸುವ ಸಲುವಾಗಿ ನೇಪಾಳದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಲಕ್ನೋ, ವಾರಾಣಸಿ ಮತ್ತು ಕಾನ್ಪುರದಂತಹ ನಗರಗಳನ್ನು ತಲುಪಲಿವೆ” ಎಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ”ಹಣದುಬ್ಬರವನ್ನು ತಗ್ಗಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮತ್ತು ಟೊಮ್ಯಾಟೋ ಬೆಲೆಯನ್ನು ನಿಯಂತ್ರಿಸಲು ಸರಕಾರ ಏನು ಮಾಡುತ್ತಿದೆ ಎಂಬುದರ ಕುರಿತು ವಿವರವಾಗಿ ಮಾತನಾಡಿ, ಭಾರತದ ಆರ್ಥಿಕತೆಯನ್ನು ಶ್ಲಾಘಿಸಿದರು, ಜಾಗತಿಕ ಆರ್ಥಿಕತೆಯು ಹೆಣಗಾಡುತ್ತಿರುವಾಗ ದೇಶವು ಅದರ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಧನಾತ್ಮಕವಾಗಿರುವ ವಿಶಿಷ್ಟ ಸ್ಥಾನದಲ್ಲಿದೆ ಎಂದರು.
ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ತಟ್ಟುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ”ಎಂದರು.
ತೊಗರಿ ಬೇಳೆಯನ್ನು ಮೊಜಾಂಬಿಕ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ, ಉದ್ದಿನಬೇಳೆಯನ್ನು ಮ್ಯಾನ್ಮಾರ್‌ನಿಂದ ತರಲಾಗುತ್ತಿದೆ. ಬಫರ್ ಸ್ಟಾಕ್ ಸುಮಾರು ಮೂರು ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸರಕಾರವು ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಖರೀದಿಸಿ ರಾಷ್ಟ್ರ ರಾಜಧಾನಿ, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ನಾಫೆಡ್ ಮತ್ತು ಇತರ ಮೂಲಕ ವಿತರಿಸುತ್ತಿರುವ ಕಾರಣ ದೆಹಲಿ-ಎನ್‌ಸಿಆರ್‌ನಲ್ಲಿ ಟೊಮ್ಯಾಟೋ ಬೆಲೆ ಕೆಜಿಗೆ 70ರೂ.ಗೆ ಇಳಿಯಲಿದೆ ಎಂದು ಭರವಸೆ ನೀಡಿದರು.