Advertisement

ಟೊಮೇಟೊ ಥೆರಪಿ

01:06 PM Dec 13, 2017 | |

ಟೊಮೇಟೊ ಕೇವಲ ತರಕಾರಿಯಷ್ಟೇ ಅಲ್ಲ. ಅದರ ಹಿರಿಮೆ ಸಾಸ್‌, ಸೂಪ್‌ಗ್ಳಿಗಷ್ಟೇ ಸೀಮಿತವೂ ಅಲ್ಲ. ಟೊಮೇಟೊ ರಸದಿಂದ ccc ಮತ್ತು ಕೂದಲಿಗೆ ಅನೇಕ ಪ್ರಯೋಜನಗಳಿವೆ. ಟೊಮೇಟೊದ ಅತ್ಯುತ್ತಮ 8 ಉಪಯೋಗಗಳು ಹೀಗಿವೆ…

Advertisement

ಚಳಿಗಾಲದಲ್ಲಿ ಚರ್ಮ ಒಣಗಿ, ಕಿತ್ತು ಬರುತ್ತಿದ್ದರೆ, ಟೊಮೇಟೊ ರಸದ ಜೊತೆಗೆ ಮೊಸರು ಬೆರೆಸಿ, 20 ನಿಮಿಷಗಳ ನಂತರ ಶುಂಠಿ ನೀರಿನಿಂದ ತೊಳೆದುಕೊಳ್ಳಿ. ಟೊಮೇಟೊ ಚರ್ಮಕ್ಕೆ ಆರೋಗ್ಯಕರ ಹೊಳಪು ನೀಡಿದರೆ, ಮೊಸರು ಚರ್ಮವನ್ನು ತಂಪಾಗಿಸುತ್ತದೆ. 

1. ತೆರೆದ ರಂಧ್ರಗಳನ್ನು ಮುಚ್ಚುತ್ತೆ…
ಬೇರೆ ಬೇರೆ ಕಾರಣಗಳಿಂದ ಚರ್ಮದ ಮೇಲಿರುವ ರಂಧ್ರಗಳು ತೆರೆದುಕೊಳ್ಳುತ್ತವೆ. ಹಾಗೆ ತೆರೆದ ರಂಧ್ರಗಳನ್ನು ಕುಗ್ಗಿಸಲು ಟೊಮೇಟೊ ರಸ ಸಹಕರಿಸುತ್ತದೆ. ಒಂದು ಚಮಚ ಟೊಮೇಟೊ ರಸದೊಂದಿಗೆ 2-4 ಹನಿ ಲಿಂಬೆ ರಸ ಸೇರಿಸಿ, ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖ ತೊಳೆದರೆ, ಚರ್ಮ ಕಾಂತಿಯುತವಾಗುತ್ತದೆ.

2. ಮೊಡವೆ ಮಾಯ 
ಮೊಡವೆ ಸಮಸ್ಯೆಯಿದ್ದವರು ಟೊಮೇಟೊವನ್ನು ಮರೆಯಲೇಬಾರದು. ಒಂದು ಟೊಮೇಟೊ ಹಣ್ಣನ್ನು ಹಿಸುಕಿ, ರಸ ತೆಗೆದು ಅದನ್ನು ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ. ಒಂದು ಗಂಟೆ ನಂತರ ಮುಖ ತೊಳೆಯಿರಿ. ಚರ್ಮದ ಎಣ್ಣೆ ಪಸೆಯನ್ನು ಟೊಮೇಟೊ ಹೀರಿಕೊಂಡು ಮೊಡವೆಯನ್ನು ತಡೆಯುತ್ತದೆ. 

3. ಕಪ್ಪುಕಲೆ ನಿವಾರಣೆ
ಟೊಮೇಟೊವನ್ನು ಕತ್ತರಿಸಿ ಕಪ್ಪು ಕಲೆಯ ಮೇಲೆ ನಿಧಾನಕ್ಕೆ ಉಜ್ಜಿ. ಹಾಗೆಯೇ ಬ್ಲಾಕ್‌ಹೆಡ್ಸ್‌ಗಳ ನಿವಾರಣೆಗೂ ಟೊಮೇಟೊ ಸಹಾಯಕ. 

Advertisement

4. ಜಿಡ್ಡಿನಾಂಶ ದೂರ
ಟೊಮೇಟೊ ರಸದ ಜೊತೆಗೆ ಸೌತೆಕಾಯಿ ರಸ ಬೆರೆಸಿ ಪ್ರತಿದಿನ ಮುಖಕ್ಕೆ ಹಚ್ಚಿ. ಎಣ್ಣೆ ಚರ್ಮದವರು ಟೊಮೇಟೊ ಬಳಸಿದರೆ ಮೊಡವೆ ಹತ್ತಿರ ಸುಳಿಯುವುದಿಲ್ಲ. ಬಿಸಿಲಿನಲ್ಲಿ ಚರ್ಮ ಸುಟ್ಟಿದ್ದರೆ, 2 ಚಮಚ ಬೆಣ್ಣೆ ಜೊತೆಗೆ 2 ಚಮಚ ಟೊಮೇಟೊ ರಸ ಸೇರಿಸಿ ಹಚ್ಚಬೇಕು. ಟೊಮೇಟೊ ಅಲ್ಟ್ರಾ ವೈಲೆಟ್‌ ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. 
ಅಷ್ಟೇ ಅಲ್ಲ, ಬೆಳಗ್ಗೆ ಎದ್ದು ಒಂದು ಟೊಮೇಟೊ ತಿನ್ನುವುದರಿಂದ ದೇಹದಲ್ಲಿ ಶೇಖರಣೆಯಾದ ಅನಗತ್ಯ ಕೊಬ್ಬು ಕರಗುತ್ತದೆ. 

5. ಚರ್ಮದ ಕೂಲೆಂಟ್‌ 
ಚಳಿಗಾಲದಲ್ಲಿ ಚರ್ಮ ಒಣಗಿ, ಕಿತ್ತು ಬರುತ್ತಿದ್ದರೆ, ಟೊಮೇಟೊ ರಸದ ಜೊತೆಗೆ ಮೊಸರು ಬೆರೆಸಿ, 20 ನಿಮಿಷಗಳ ನಂತರ ಶುಂಠಿ ನೀರಿನಿಂದ ತೊಳೆದುಕೊಳ್ಳಿ. ಟೊಮೇಟೊ ಚರ್ಮಕ್ಕೆ ಆರೋಗ್ಯಕರ ಹೊಳಪು ನೀಡಿದರೆ, ಮೊಸರು ಚರ್ಮವನ್ನು ತಂಪಾಗಿಸುತ್ತದೆ. ವಿಟಮಿನ್‌ “ಎ’ ಮತ್ತು “ಸಿ’ಯನ್ನು ಒಳಗೊಂಡಿರುವ ಟೊಮೇಟೊವನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ.

6. ಚರ್ಮದ ಶುದ್ಧೀಕರಣ
ಅವಕಾಡೊ ಹಣ್ಣಿನ ತಿರುಳಿಗೆ ಟೊಮೇಟೊ ರಸ ಸೇರಿಸಿ ಫೇಸ್‌ ಪ್ಯಾಕ್‌ ತಯಾರಿಸಬಹುದು. ಅವಕಾಡೊದ ಹೈಡ್ರೇಟಿಂಗ್‌ ಮತ್ತು ಆ್ಯಂಟಿಸೆಪ್ಟಿಕ್‌ ಗುಣಗಳು ಟೊಮೇಟೊದ ಸಂಕೋಚನ ಶಕ್ತಿಯೊಂದಿಗೆ ಸೇರಿಕೊಂಡು ಚರ್ಮದ ಕಲ್ಮಶಗಳನ್ನು ದೂರ ಮಾಡುತ್ತವೆ. 

7. ಕೂದಲ ಹೊಳಪಿಗೆ
ನೈಸರ್ಗಿಕ ಕಂಡಿಷನರ್‌ ಆಗಿ ಕೆಲಸ ಮಾಡುವ ಟೊಮೇಟೊ ರಸವನ್ನು ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುತ್ತದೆ. 

8. ತಲೆಹೊಟ್ಟು ನಿವಾರಣೆ
ಡ್ಯಾಂಡ್ರಫ್ ಸಮಸ್ಯೆ ನಿಮ್ಮ ತಲೆ ಕೆಡಿಸಿದ್ದರೆ, ಟೊಮೇಟೊ ತಿರುಳನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಹೀಗೆ ಐದಾರು ವಾರಗಳ ಕಾಲ ಮಾಡಿದರೆ ತಲೆಹೊಟ್ಟು ನಿಯಂತ್ರಣಕ್ಕೆ ಬರುತ್ತದೆ. 

ಮೇಘಾ ಬಿ. ಗೊರವರ 

Advertisement

Udayavani is now on Telegram. Click here to join our channel and stay updated with the latest news.

Next