Advertisement
ಕಳೆದ ಡಿಸೆಂಬರ್ – ಜನವರಿಯಿಂದೀಚೆಗೆ ಇದು ಎರಡನೇ ಬಾರಿಗೆ ಟೊಮೆಟೋ ಬೆಲೆ ಈ ಪ್ರಮಾಣದಲ್ಲಿ ಏರಿದೆ. ಆಗಲೂ 80-90 ರೂ. ಆಸುಪಾಸಿನವರೆಗೆ ಹೆಚ್ಚಿತ್ತು. ಜೂ. 10 ವರೆಗೆ, ಅಂದರೆ ಮಳೆಗಾಲದ ವರೆಗೆ ದರ ಇದೇ ಸ್ಥಿತಿ ಇರಬಹುದು.
ಬಿಸಿಲಿನ ಬೇಗೆ, ಸಮಾರಂಭಗಳು, ಪೂರೈಕೆ ಕೊರತೆಯಿಂದಾಗಿ ಲಿಂಬೆಹುಳಿಯ ಬೆಲೆಯೂ ಹೆಚ್ಚಿದೆ. ಸದ್ಯ ಒಂದು ಲಿಂಬೆ ಹುಳಿಯ ಬೆಲೆ 10-12 ರೂ. ಇದೆ. ಸ್ವಲ್ಪ ಸಮಯದ ಹಿಂದೆ 10 ರೂ.ಗೆ 4 ಲಿಂಬೆ ಸಿಗುತ್ತಿತ್ತು. ಆಗ ಒಂದು ಚೀಲ (1 ಸಾವಿರ ಲಿಂಬೆ)ಕ್ಕೆ 1,500 ರೂ. ಇದ್ದುದು ಈಗ 6-7 ಸಾವಿರ ರೂ. ಆಗಿದೆ. ಈರುಳ್ಳಿ ಬೆಲೆ ಇಳಿಕೆ
ಬೀನ್ಸ್, ತೊಂಡೆ, ನುಗ್ಗೆ, ಬದನೆ, ಸೌತೆ ಸಹಿತ ಬಹುತೇಕ ಇತರ ತರಕಾರಿಗಳ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಈ ವಾರದಲ್ಲಿ ಈರುಳ್ಳಿ ಬೆಲೆ ಮಾತ್ರ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ. 30-35ರ ಆಸುಪಾಸಿನಲ್ಲಿದ್ದ ಈರುಳ್ಳಿ ದರ ಈಗ 20-25 ರೂ. ಆಸುಪಾಸಿನಲ್ಲಿದೆ.