Advertisement

ಟೊಮಾಟೊ ಬೆಲೆ ಕೆಜಿಗೆ 259 ರೂ.!

09:17 PM Aug 02, 2023 | Team Udayavani |

ನವದೆಹಲಿ: ಕಳೆದ ಒಂದು ತಿಂಗಳಿಂದ ಟೊಮಾಟೊ ಬೆಲೆ ಗಗನಕ್ಕೇರಿದೆ. ಬುಧವಾರ ಮದರ್‌ ಡೇರಿಯ ಸಫ‌ಲ್‌ ಚಿಲ್ಲರೆ ಮಳಿಗೆಗಳಲ್ಲಿ ಟೊಮಾಟೊ ಬೆಲೆ ಕೆಜಿಗೆ ದಾಖಲೆಯ 259 ರೂ.ಗೆ ಮುಟ್ಟಿದೆ. ಅತಿವೃಷ್ಟಿ ಕಾರಣದಿಂದ ಇಳುವರಿ ಕಡಿಮೆಯಾಗಿ, ಪೂರೈಕೆಯಲ್ಲಿ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ಟೊಮಾಟೊ ಬೆಲೆಯಲ್ಲಿ ಇಳಿಕೆ ಕಾಣುತ್ತಿಲ್ಲ.

Advertisement

ಏರಿಕೆ ಹಾದಿಯನ್ನೇ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ದೇಶದ ಕೆಲವು ನಗರಗಳಲ್ಲಿ ಸಬ್ಸಿಡಿ ಬೆಲೆಗೆ ಮೊಬೈಲ್‌ ವಾಹನಗಳ ಮೂಲಕ ಟೊಮಾಟೊ ಮಾರಾಟ ಮಾಡಲಾಗುತ್ತಿದೆ. ಆದರೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ಪ್ರಕಾರ, ಬುಧವಾರ ಟೊಮಾಟೊ ಚಿಲ್ಲರೆ ಮಾರಾಟ ಬೆಲೆ ಕೆಜಿಗೆ 203 ರೂ. ಆಗಿದೆ. ಇದೇ ವೇಳೆ ಮದರ್‌ ಡೇರಿಯ ಸಫ‌ಲ್‌ ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 259 ರೂ.ಗೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next