ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಭಾವದಿಂದ ರೈತರು ಸಂಕಷ್ಟಕ್ಕೆಸಿಲುಕುವಂತಾಗಿದೆ. ಟೊಮೆಟೋ ಉತ್ತಮ ಇಳುವರಿ ಬಂದಿದ್ದರೂ ಕೇಳುವರು ಇಲ್ಲದಂತಾಗಿದೆ. ಬೆಲೆ ಕುಸಿತದಿಂದ ಹೂಡಿದ್ದ ಬಂಡವಾಳ ಕೈಗೆಟುಕದೇ ಬೆಳೆಗಾರ ಕಂಗಾಲಾಗಿದ್ದಾನೆ.
ಎರಡು ಮೂರು ತಿಂಗಳಿಂದ ತರಕಾರಿಗೆ ಕನಿಷ್ಠ ಬೆಲೆ ಸಿಗುತ್ತಿಲ್ಲ. ಇದರ ನಡುವೆ ಕೊರೊನಾಸೋಂಕು, ವಾರಾಂತ್ಯ ಕಪ್ಯೂì ಬೆಳೆಗಾರರನ್ನು ಹೈರಾಣಾಗಿಸಿದೆ. ರೈತರ ಗೋಳು ಕೇಳುವರುಇಲ್ಲದಂತಾಗಿದೆ. ಕಳೆದ ವರ್ಷ ಕೊರೊನಾದಿಂದ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರು,ಈ ಬಾರಿಯಾದ್ರೂ ನಷ್ಟದಿಂದ ಹೊರಬರಲು ಸಾಲಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ತರಕಾರಿಬೆಳೆದಿದ್ದರೂ ಬೆಲೆ ಇಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.
7 ಲಕ್ಷ ರೂ. ಖರ್ಚು: ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಯುವ ರೈತ ತ್ಯಾಗರಾಜ್‌ಎರಡು ಎಕರೆ ಜಮೀನಿನಲ್ಲಿ 7 ಲಕ್ಷ ರೂ. ಖರ್ಚು ಮಾಡಿ ಉತ್ತಮವಾದ ಟೊಮೆಟೋ ಬೆಳೆದಿದ್ದರು.ಈಗ ಕೇಳುವವರೇ ಇಲ್ಲದಂತಾಗಿದೆ. ಇದು ತ್ಯಾಗರಾಜರೊಬ್ಬರ ಸಮಸ್ಯೆ ಅಲ್ಲ, ಟೊಮೆಟೋಬೆಳೆದ ಸಾವಿರಾರು ರೈತರ ಗೋಳೂ ಆಗಿದೆ.
ಹೊಸಹುಡ್ಯ ಗ್ರಾಮದಲ್ಲಿ ಎರಡು ಎಕರೆವಿಸ್ತೀರ್ಣದಲ್ಲಿ ಟೊಮೆಟೋà ಬೆಳೆ ಬೆಳೆಯಲಾಗಿತ್ತು. ಬಿತ್ತನೆ, ಕ್ರಿಮಿನಾಶಕ, ಆಳುಗಳ ಕೂಲಿ,ಇನ್ನಿತರ ವೆಚ್ಚಗಳು ಸೇರಿ 6 ರಿಂದ 7 ಲಕ್ಷ ರೂ.ಖರ್ಚಾಗಿದೆ. ಕಳೆದ ವಾರ 15 ಕೂಲಿ ಆಳುಗಳು 10ಟನ್ ಟೊಮೆಟೋ ಕಟಾವು ಮಾಡಿದ್ದರು. ಒಬ್ಬರಿಗೆ300 ಕೂಲಿ, ಚೀಲದ ವೆಚ್ಚ 4 ರೂ., ಸಾಗಾಟ ವೆಚ್ಚಟೊಮೆಟೋ ಚೀಲ ಒಂದಕ್ಕೆ 25 ರಿಂದ 35 ರೂ.ಗೆಮಾರಾಟವಾಯಿತು. ಟೊಮೆಟೋ ಬೆಲೆಗಿಂತ ಕಟಾವು ಮತ್ತು ಸಾಗಾಟದ ವೆಚ್ಚ ಹೆಚ್ಚಾದ್ದರಿಂದ ಬೆಳೆಯನ್ನು ಕಟಾವು ಮಾಡದೆ ತೋಟದಲ್ಲಿಯೇ ಬಿಟ್ಟಿದ್ದೇವೆ ಎಂದು ಹೊಸಹುಡ್ಯ ಗ್ರಾಮದ ರೈತಆನಂದ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ವ್ಯವಸಾಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕೂಲಿಯಾಳುಗಳ ಬೇಡಿಕೆಜಾಸ್ತಿಯಾಗಿದೆ. ಕೃಷಿಗೆ ಬಳಸುವ ರಸಗೊಬ್ಬರ, ಕ್ರಿಮಿನಾಶಕ, ಸಾಗಾಟದ ವೆಚ್ಚ, ಕೂಲಿಯಾಳುಕೂಲಿ ಸೇರಿ ಇನ್ನಿತರ ವಸ್ತುಗಳ ಬೆಲೆದುಪ್ಪಟ್ಟಾಗುತ್ತಿದ್ದರಿಂದ ಕೃಷಿ ಆದಾಯದಮೂಲವಾಗಿ ಉಳಿಯುತ್ತಿಲ್ಲ. ಹೀಗಾಗಿ ಸರ್ಕಾರಕೃಷಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.