Advertisement

Tomato Price Down; ಕರಾವಳಿಯಲ್ಲಿ 60-70 ರೂ.ಗೆ ಮಾರಾಟ

03:42 PM Aug 12, 2023 | Team Udayavani |

ಮಂಗಳೂರು/ಉಡುಪಿ: ಟೊಮೇಟೊ ದರ ರಾಜಧಾನಿಯ ಬಳಿಕ ಕರಾವಳಿಯಲ್ಲಿಯೂ ಇಳಿಕೆ ಕಾಣಲಾರಂಭಿಸಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಶುಕ್ರವಾರ ಕೆ.ಜಿ.ಗೆ 60ರಿಂದ 70 ರೂ. ದರದಲ್ಲಿ ಮಾರಾಟವಾಗುತ್ತಿತ್ತು.

Advertisement

ಕಳೆದ ವಾರ ಕೆಲವೆಡೆ 200 ರೂ.ಗಳವರೆಗೂ ತಲುಪಿದ್ದ ದರ ಸೋಮವಾರದಿಂದ ಇಳಿಕೆಯ ಹಾದಿಯಲ್ಲಿತ್ತು. ಮಂಗಳವಾರ 90-100 ರೂ.ಗಳಿಗೆ ಲಭ್ಯವಾಗಿದ್ದರೆ, ಗುರುವಾರ 80 ರೂ.ಗೆ ಇಳಿದಿತ್ತು. ಇದೀಗ ಮತ್ತಷ್ಟು ಇಳಿಕೆಯಾಗಿದೆ.

ಮಳೆ ಕಡಿಮೆಯಾದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಇದರಿಂದ ದಿನದಿಂದ ದಿನಕ್ಕೆ ದರ ಇಳಿಕೆಯಾಗುತ್ತಿದೆ. ಫ‌ಸಲು ಕೂಡ ಇರುವುದರಿಂದ ದರ ಇನ್ನೂ ಇಳಿಕೆ ಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಮಾಲ್‌ಗ‌ಳಲ್ಲಿ 80ರಿಂದ 90 ರೂ. ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next