Advertisement

ಬಾಂಗ್ಲಾದೇಶ, ಪಾಕ್‌ ಸರಣಿಗೆ  32 ಸದಸ್ಯರ ನ್ಯೂಜಿಲ್ಯಾಂಡ್‌ ತಂಡ

10:13 PM Aug 12, 2021 | Team Udayavani |

ವೆಲ್ಲಿಂಗ್ಟನ್‌: ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳನ್ನಾಡಲು ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲ್ಯಾಂಡ್‌, 32 ಆಟಗಾರರ ತಂಡಗಳನ್ನು ಪ್ರಕಟಿಸಿದೆ. ಎರಡೂ ಪ್ರವಾಸದ ವೇಳೆ ಟಾಮ್‌ ಲ್ಯಾಥಮ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಕಿವೀಸ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌, ಬೌಲರ್‌ಗಳಾದ ಕೈಲ್‌ ಜಾಮೀಸನ್‌, ಟ್ರೆಂಟ್‌ ಬೌಲ್ಟ್, ಲಾಕಿ ಫ‌ರ್ಗ್ಯುಸನ್‌ ಸೇರಿದಂತೆ ಕೆಲವು ಸ್ಟಾರ್‌ ಆಟಗಾರರನ್ನು ಕೈಬಿಡಲಾಗಿದೆ. ಮುಂದಿನ ತಿಂಗಳು ಯುಎಇಯಲ್ಲಿ ಮುಂದುವರಿಯಲಿರುವ 14ನೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಅನುಭವಿ ಆಟಗಾರ ರಾಸ್‌ ಟೇಲರ್‌ ಅವರನ್ನು ಕೇವಲ ಏಕದಿನ ಸರಣಿಗೆ ಪರಿಗಣಿಸಲಾಗಿದೆ. ನ್ಯೂಜಿಲ್ಯಾಂಡ್‌ ತಂಡ ಆ. 23ಕ್ಕೆ ಬಾಂಗ್ಲಾ ತಲುಪಲಿದ್ದು, ಆ. 27ರಿಂದ ಸೆ. 14ರ ವರೆಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳಲಿದೆ. ಬಳಿಕ ಪಾಕಿಸ್ಥಾನಕ್ಕೆ ತೆರಳಿ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next