Advertisement

ಖ್ಯಾತ ನಟ,ಪದ್ಮಶ್ರೀ ಟಾಮ್ ಆಲ್ಟರ್ ಇನ್ನಿಲ್ಲ 

09:55 AM Sep 30, 2017 | Team Udayavani |

ಮುಂಬೈ:ಹಿರಿಯ ನಟ,ಪ್ರಖ್ಯಾತ ಲೇಖಕ ಟಾಮ್ ಆಲ್ಟರ್ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ.ಚರ್ಮ ಕ್ಯಾನ್ಸರ್ ನಿಂದ ಬಳಲುತ್ತಿದ್ದ 67ರ ಹರೆಯದ ಅವರನ್ನು 2 ವಾರಗಳ ಹಿಂದೆ ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Advertisement

ಉತ್ತರಾಖಂಡ್ ನ ಮಸ್ಸೂರಿ ಮೂಲದವರಾದ ಟಾಮ್ ಆಲ್ಟರ್ ಅಮೆರಿಕದಲ್ಲಿ ಜನಿಸಿದ್ದರು. 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು . 

ಶ್ಯಾಮ್ ಬೆನಗಲ್ ನಿರ್ದೇಶನದ ‘ಜುನೂನ್’ನಲ್ಲಿ ಕೇಶವ್ ಕಲ್ಸಿ ಎಂಬ ಗ್ಯಾಂಗ್ ಸ್ಟರ್ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ಹಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದರು. 

ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು ಕ್ರೀಡಾ ಪತ್ರಕರ್ತ ರಾಗಿಯೂ ಕೆಲಸ ನಿರ್ವಹಿಸಿದ್ದರು . ಸಚಿನ್ ತೆಂಡುಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮುನ್ನ ಸಂದರ್ಶನ ನಡೆಸಿದ ಹಿರಿಮೆ ಆಲ್ಟರ್ ಅವರದ್ದಾಗಿದೆ . 

Advertisement

Udayavani is now on Telegram. Click here to join our channel and stay updated with the latest news.

Next