Advertisement

Allu Arjun: ಒಂದೇ ಒಂದು ಪೋಸ್ಟ್‌ನಿಂದ “ಥ್ರೆಡ್ಸ್”ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

03:18 PM Jul 25, 2023 | Team Udayavani |

ಹೈದರಾಬಾದ್: ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಫ್ಯಾನ್‌ ಬೇಸ್‌ ದೊಡ್ಡದಿದೆ. ದಕ್ಷಿಣದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಸ್ಟೈಲಿಸ್ಟ್‌ ಸ್ಟಾರ್‌ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ.

Advertisement

ಅಲ್ಲು ಅರ್ಜುನ್‌ ಅವರ ಅನೇಕ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗೆ ಆಗಿ ಯೂಟ್ಯೂಬ್‌ ನಲ್ಲಿ ಅಪ್ಲೋಡ್‌ ಆಗಿವೆ. ಹಾಗಾಗಿ ಅವರಿಗೆ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ಹವಾ ಕ್ರಿಯೇಟ್‌ ಮಾಡಿರುವ ಅಲ್ಲು ಅರ್ಜುನ್‌ ಇತ್ತೀಚೆಗೆ ಬಂದ ಮೆಟಾ ಒಡೆತನದ ಥ್ರೆಡ್ಸ್‌ ನಲ್ಲಿ ಹೊಸ ದಾಖಲೆ ಬರೆದು ಸುದ್ದಿಯಾಗಿದ್ದಾರೆ.

ಟ್ವಿಟರ್‌, ಇನ್ಸ್ಟಾಗ್ರಾಮ್ ಸೇರಿದಂತೆ ಬಹುತೇಕ ಎಲ್ಲಾ ಸೋಶಿಯಲ್‌ ಮೀಡಿಯಾ ಆ್ಯಪ್ ಗಳಲ್ಲಿ ಆ್ಯಕ್ಟೀವ್‌ ಆಗಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ 20 ಮಿಲಿಯನ್ ಫಾಲೋವರ್ಸ್‌ ಗಳನ್ನು ದಾಟಿದ ದಕ್ಷಿಣ ಭಾರತದ ಮೊದಲ ನಟನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಲ್ಲು ಅರ್ಜುನ್‌ ಇದೀಗ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದ ಫಾಲೋವರ್ಸ್‌ ವಿಚಾರವಾಗಿಯೇ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: “ಓಪೆನ್ ಹೈಮರ್”ನಲ್ಲಿ ಭಗವದ್ಗೀತೆ ಸಾಲಿನ ವಿವಾದ: ದೃಶ್ಯವನ್ನು ಸಮರ್ಥಿಸಿದ ಮಹಾಭಾರತ ನಟ

ಮೆಟಾ ಒಡೆತನದ ಥ್ರೆಡ್ಸ್‌ನಲ್ಲಿ ಅಲ್ಲು ಅರ್ಜುನ್‌ ಅವರಿಗೆ 1 ಮಿಲಿಯನ್‌ ಗೂ ಅಧಿಕ ಫಾಲೋವರ್ಸ್‌ ಗಳು ಬಂದಿದ್ದಾರೆ. ಆ ಮೂಲಕ 1 ಮಿಲಿಯನ್‌ ಫಾಲೋವರ್ಸ್‌ ಗಳನ್ನು ಹೊಂದಿರುವ ಭಾರತದ ಮೊದಲ ಸೆಲೆಬ್ರಿಟಿಯಾಗಿದ್ದಾರೆ. ಇತ್ತೀಚೆಗೆ ಅವರು ಬ್ಲ್ಯಾಕ್‌ & ವೈಟ್‌ ಧಿರಿಸಿನ ಫೋಟೋವೊಂದನ್ನು ಹಾಕಿ ಥ್ರೆಡ್ಸ್‌ ಗೆ ಎಂಟ್ರಿ ಕೊಟ್ಟಿದ್ದರು.

Advertisement

ಸುಕುಮಾರ್‌ ಅವರ ʼಪುಷ್ಪ-2ʼ ಮುಂದಿನ ವರ್ಷ ತೆರೆಗೆ ಬರಲಿದೆ. ಆ ಬಳಿಕ ಅಲ್ಲು ಅರ್ಜುನ್‌ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ನಾಲ್ಕನೇ ಬಾರಿ ಕೈಜೋಡಿಸಲಿದ್ದಾರೆ. ಈ ಚಿತ್ರಕ್ಕೆ “AA 22” ಎಂದು ತಾತ್ಕಾಲಿವಾಗಿ ಟೈಟಲ್‌ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next