Advertisement

Tollywood: ʼಆವೇಶಮ್‌ʼ ತೆಲುಗು ರಿಮೇಕ್‌ನಲ್ಲಿ ನಟಿಸಲ್ಲ ಎಂದ ಬಾಲಯ್ಯ; ಕಾರಣವೇನು?

07:01 PM Aug 07, 2024 | Team Udayavani |

ಹೈದರಾಬಾದ್:‌  ಫಾಹದ್‌ ಫಾಸಿಲ್‌ ನಟಿಸಿದ ಮಾಲಿವುಡ್(‌Mollywood) ನ ʼಆವೇಶಮ್‌ʼ(Aavesham) ತೆಲುಗಿಗೆ ರಿಮೇಕ್‌ ಆಗಲಿದೆ ಎನ್ನುವ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಟಾಲಿವುಡ್‌ ನಲ್ಲಿ ಹರಿದಾಡುತ್ತಿದೆ.

Advertisement

ಮಾಲಿವುಡ್‌ ಸ್ಟಾರ್ ಫಾಫಾ ʼಆವೇಶಮ್‌ʼ ನಲ್ಲಿ ಲೋಕಲ್‌ ಡಾನ್‌ ʼರಂಗನ್‌ʼ ಎನ್ನುವ ಪಾತ್ರದಲ್ಲಿ ಮಿಂಚಿದ್ದರು. ಸಣ್ಣ ಬಜೆಟ್‌ ನಲ್ಲಿ ಬಂದ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.

ಕಾಮಿಡಿ ಕಥಾಹಂದರದ ʼಆವೇಶಮ್‌ʼ ತೆಲುಗಿಗೆ ರಿಮೇಕ್‌ ಆಗಲಿದೆ. ಟಾಲಿವುಡ್‌ ರಿಮೇಕ್‌ ನಲ್ಲಿ ನಟ ಬಾಲಯ್ಯ (Nandamuri Balakrishna) ಅವರು ʼರಂಗನ್‌ʼ ಅಂದರೆ ಫಾಹದ್‌ ಫಾಸಿಲ್‌ ಅವರು ಮಾಡಿದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

content-img

ʼಆವೇಶಂʼ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಮೈತ್ರಿ ಮೂವಿ ಮೇಕರ್ಸ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಓಕೆಯಾದರೆ ʼಆವೇಶಮ್‌ʼ ತೆಲುಗಿನಲ್ಲಿ ಬರಲಿದೆ ಎನ್ನಲಾಗಿದೆ.

Advertisement

ಇದೀಗ ಈ ಬಗ್ಗೆ ನಟ ಬಾಲಯ್ಯ ಅವರಿಂದ ಸ್ಪಷ್ಟನೆ ಸಿಕ್ಕಿದೆ. ಬಾಲಕೃಷ್ಣ ಅವರು ʼಆವೇಶಂʼ ರಿಮೇಕ್‌ನಲ್ಲಿ ಪ್ರಮುಖ ಪಾತ್ರವನ್ನು ಮಾಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ನಾಯಕ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ಇತರರಿಗೆ ಸ್ಪೂರ್ತಿಯಾಗವಾಗಬೇಕು. ತಾನೇ ನೆಗೆಟಿವ್‌ ಶೇಡ್‌ ನಲ್ಲಿ ಕಾಣಿಸಿಕೊಳ್ಳಬಾರದು ಎಂದು ಅವರು ಹೇಳಿರುವುದಾಗಿ ʼಡೆಕ್ಕನ್ ಕ್ರಾನಿಕಲ್ʼ ವರದಿ ತಿಳಿಸಿದೆ.

ಬಾಲಯ್ಯ ರಿಮೇಕ್‌ ಸಿನಿಮಾವನ್ನು ರಿಜೆಕ್ಟ್‌ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ನಟ ದಳಪತಿ ವಿಜಯ್ ಮತ್ತು ಮೋಹನ್ ಲಾಲ್ ಅಭಿನಯದ ʼಜಿಲ್ಲಾʼ (Jilla) ಚಿತ್ರದ ರಿಮೇಕ್‌ನಲ್ಲಿ ನಟಿಸಲು ಅವರು ನಿರಾಕರಿಸಿದ್ದರು.

ಜೀತು ಮಾಧವನ್ (Jithu Madhavan) ನಿರ್ದೇಶನದ ‘ಆವೇಶಮ್‌ʼ ನಲ್ಲಿ ಸಜಿನ್ ಗೋಪು, ಮಿಥುನ್ ಜೈ ಶಂಕರ್, ಹಿಪ್ಜ್‌ಸ್ಟರ್, ರೋಷನ್ ಶಾನವಾಜ್, ಮಿಧುಟ್ಟಿ ಮುಂತಾದವರು ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.