Advertisement

Tamilnadu; ಕಲ್ಲಕುರಿಚಿಯಲ್ಲಿ ಮೃತರ ಸಂಖ್ಯೆ 50ಕ್ಕೆ ಏರಿಕೆ

01:39 AM Jun 22, 2024 | Team Udayavani |

ಚೆನ್ನೈ: ಒಂದೇ ರಸ್ತೆಯಲ್ಲಿ ಹತ್ತಾರು ಶವಗಳ ಸಾಲು, ಸ್ಮಶಾನದ ತುಂಬೆಲ್ಲ ಹೊತ್ತಿ ಉರಿಯುತ್ತಿರುವ ಚಿತೆಗಳು, ಅತ್ತು ಕರೆದು ಸುಸ್ತಾದ ಮಕ್ಕಳು ಒಂದೆಡೆಯಾದರೆ ಇಳಿ ವಯಸ್ಸಲ್ಲಿ ಆಸರೆಯಾಗಬೇಕಿದ್ದ ಮಕ್ಕಳ ಕಳೆದುಕೊಂಡ ಹೆತ್ತವರ ಆಕ್ರಂದನ ಮತ್ತೂಂದೆಡೆ. ಇದು ಕಲ್ಲಕುರುಚಿಯ ಅಕ್ರಮ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬಸ್ಥರ ಪರಿಸ್ಥಿತಿ.

Advertisement

ಅಕ್ರಮ ಮದ್ಯ ಸೇವಿಸಿ ಮೃತಪಟ್ಟ ವರ ಸಂಖ್ಯೆ ಶುಕ್ರವಾರ 50ರ ಗಡಿ ದಾಟಿದೆ. ಕರುಣಾಪುರಂ ಗ್ರಾಮವೊಂದ ರಲ್ಲೇ ಹತ್ತಾರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯ ತಾಯಿ ಈ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಅಳಿಯ ಕುಡಿಯುತ್ತಿದ್ದರು. ಅವರು ಅರ್ಧ ಕುಡಿದು ಇಟ್ಟಿದ್ದ ಮದ್ಯದ ಬಾಟಲಿಯನ್ನ ಔಷಧ ಎಂದು ಭಾವಿಸಿ ಮಗಳೂ ಸೇವಿಸಿದ ಕಾರಣ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

ಪೋಷಕರಿಲ್ಲದೇ ಅನಾಥರಾದ ಮಕ್ಕಳ ನೋವೂ ಹೇಳತೀರದ್ದಾಗಿದೆ. ಈ ನಡುವೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಪದವಿವರಗಿನ ಶಿಕ್ಷಣದ ವೆಚ್ಚ, ವಸತಿ ಹಾಗೂ ಮಾಸಿಕ ನಿರ್ವಹಣ ವೆಚ್ಚವನ್ನು ವಹಿಸಿಕೊಳ್ಳುವುದಾಗಿ ಡಿಎಂಕೆ ಸರಕಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next