ಕುಷ್ಟಗಿ: ಅಕ್ರಮವಾಗಿ ಮರಂ ಮಣ್ಣು, ಕಟ್ಟಡ ಕಲ್ಲು ಖನಿಜ ಬಳಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪ್ರೈ. ಲಿಮಿಟೆಡ್ ಕಂಪನಿ 75.88 ಲಕ್ಷ ರೂ. ಪಾವತಿಸುವವರೆಗೂ ಹೆದ್ದಾರಿ ಟೋಲ್ ಪ್ಲಾಜಾ ಮತ್ತು ಶಹಾಪುರ ಟೋಲ್ ಪ್ಲಾಜಾ ಜಪ್ತಿಗೆ ಜಿಲ್ಲಾ ಧಿಕಾರಿಗಳು ಆದೇಶಿಸಿದ್ದಾರೆ.
2012 ಮಾ. 5ರಲ್ಲಿ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಸರ್ವೇ ನ. 12ರಲ್ಲಿ 4 ಎಕರೆ ಪ್ರದೇಶದಲ್ಲಿ ಮರಂ ಮಣ್ಣನ್ನು, ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಕಂಪನಿಯ ಚಂದ್ರಶೇಖರಗೌಡ ಅವರಿಗೆ ಮಂಜೂರು ಮಾಡಿದ್ದನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಳಸಿಕೊಂಡಿದ್ದರು. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಉಳಿಕೆ ಜಮೀನು ಅತಿಕ್ರಮಿಸಿ ಅನಧಿಕೃತವಾಗಿ 11,841 ಮೆಟ್ರಿಕ್ ಟನ್ ಮರಂ ಮಣ್ಣನ್ನು, 46,344 ಎಂ.ಟಿ. ಕಲ್ಲುಗಳನ್ನು ಗಣಿಗಾರಿಕೆ ಮಾಡಿ ಅಕ್ರಮವಾಗಿ ಸಾಗಾಣಿಕೆ ಮಾಡಿದ್ದರು.
ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಡಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ 75,88,650 ರೂ. ಪಾವತಿಸಲು 2013 ಫೆ. 28ರಲ್ಲಿ ಮೊದಲ ನೋಟಿಸ್ ಜಾರಿ ಮಾಡಲಾಗಿತ್ತು. 2014 ಮಾ. 29ರಂದು ಎರಡನೇ ನೋಟಿಸ್ ಹಾಗೂ 2014 ಡಿ. 12ರಂದು ಮೂರನೇ ನೋಟಿಸ್ ನೀಡಿ ಸೂಚಿಸಲಾಗಿತ್ತು. ಆದರೆ ಕಂಪನಿಯೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಮೈನ್ಸ್ ಮತ್ತು ಮಿನರಲ್ಸ್ (ಡೆವಲಪ್‌ಮೆಂಟ್ ಮತ್ತು ರೆಗ್ಯುಲೇಷನ್) 1957ರ ಕಾಯ್ದೆ 25ರಂತೆ ಭೂ ಕಂದಾಯ ಬಾಕಿ ಪರಿಗಣಿಸಿ 19-5-2015ರಂದು ದಂಡವನ್ನು ಭೂ ಕಂದಾಯ ಬಾಕಿ ಎಂದು ಎಂದು ಘೋಷಿಸಿ ವಸೂಲಿ ಮಾಡಲು ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಪ್ಪಳ ಜಿಲ್ಲಾಡಳಿತಕ್ಕೆ ಆದೇಶಿಸಿದೆ.
ಇದನ್ನೂ ಓದಿ :ರಾಮಮಂದಿರ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ
ಮೆ. ಜಿಎಂಆರ್ ಒಎಸ್‌ಇ ಹುನಗುಂದ-ಹೊಸಪೇಟೆ ಹೈ ವೇ ಪ್ರೈ. ಲಿಮಿಟೆಡ್‌ಗೆ 60 ದಿನಗಳ ಕಾಲಾವಕಾಶ ನೀಡಿದ್ದು, ಸದರಿ ಅವಧಿ ಮುಕ್ತಾಯವಾದರೂ ಪಾವತಿಸಿರಲಿಲ್ಲ.ಮೆ. ಜಿಎಂ ಆರ್-ಒಎಸ್ ಇ ಕಂಪನಿ ತಮ್ಮ ನೌಕರನ ಹೆಸರಿನಲ್ಲಿ ಕಲ್ಲು ಗಣಿ ಗುತ್ತಿಗೆ ವಹಿಸಿಕೊಂಡಿದೆ. ಅಲ್ಲದೇ ಹೆದ್ದಾರಿ ನಿರ್ಮಾಣಕ್ಕೆ ರಾಜಧನ ಪಾವತಿಸದಿರುವುದು ಉಪ ಖನಿಜ ಪ್ರಕರಣದಲ್ಲಿ ಗುತ್ತಿಗೆದಾರನಷ್ಟೇ ಆರೋಪಿಯಾಗಿರುವುದಲ್ಲದೇ ಬಳಸಿಕೊಂಡು ಕಂಪನಿಯೂ ಹೊಣೆಗಾರಿಕೆಯಾಗಿದೆ. ಈ ದಂಡ ಪಾವತಿಸಲು ಗುತ್ತಿಗೆದಾರ ಹಾಗೂ ಕಂಪನಿ ಶಿಕ್ಷಾರ್ಹ ಅಪರಾಧ ಪ್ರಕರಣ ಇದಾಗಿದೆ. 75,88,650 ರೂ. ಸರ್ಕಾರಕ್ಕೆ ಪಾವತಿಸುವವರೆಗೂ ಟೋಲ್ ನಾಕಾ ಜಪ್ತಿ ಮಾಡಲು ಸೂಚಿಸಲಾಗಿದೆ.